Monday, February 3, 2025
Flats for sale
Homeಜಿಲ್ಲೆಮಂಗಳೂರು : ರಾಮಸೇನಾ ಸಂಸ್ಥಾಪಕ ಪ್ರಸಾದ್ ಅತ್ತಾವರ್ ಮೊಬೈಲ್ ನೋಡಿ ಪೋಲಿಸರಿಗೆ ಬಿಗ್ ಶಾಕ್,ವಾಮಾಚಾರ ಮಾಡಿದ,ಪ್ರಾಣಿ...

ಮಂಗಳೂರು : ರಾಮಸೇನಾ ಸಂಸ್ಥಾಪಕ ಪ್ರಸಾದ್ ಅತ್ತಾವರ್ ಮೊಬೈಲ್ ನೋಡಿ ಪೋಲಿಸರಿಗೆ ಬಿಗ್ ಶಾಕ್,ವಾಮಾಚಾರ ಮಾಡಿದ,ಪ್ರಾಣಿ ಬಲಿಯ ವಿಡೀಯೋ ಪತ್ತೆ..!

ಮಂಗಳೂರು ; ಕಳೆದವಾರ ಮಸಾಜ್ ಪಾರ್ಲರ್ ಧಾಳಿ ಪ್ರಕರಣದಲ್ಲಿ ಬಂಧನಕ್ಕೆ ಒಳಗಾದ ಪ್ರಸಾದ್ ಅತ್ತಾರರನ ಮೊಬೈಲ್ ನೋಡಿ ಪೋಲಿಸರು ಶಾಕ್ ಆಗಿದ್ದಾರೆ. ಭಯಾನಕ ವಾಮಾಚಾರದ ವಿಡಿಯೋ ಪತ್ತೆಯಾಗಿದ್ದು ತನಿಖೆ ನಡೆಸಲು ಪೊಲೀಸರು ತಯಾರಿನಡೆಸುತ್ತಿದ್ದಾರೆ.

ಮುಡಾ ಪ್ರಕರಣದ ದೂರುದಾರ ಸ್ನೇಹಮಯಿ ಕೃಷ್ಣ ವಿರುದ್ದ ವಾಮಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಮಂಗಳೂರು ಪೊಲೀಸ್ ಕಮಿಷನರ್ ಅನುಪಮ್ ಅಗ್ರಾವಲ್ ಹೇಳಿಕೆ ನೀಡಿದ್ದಾರೆ. ಬರ್ಕೆ ಠಾಣಾ ವ್ಯಾಪ್ತಿಯ ಸೆಲೂನ್‌ನಲ್ಲಿ ದಾಳಿ ನಡೆಸಿದ ಕೇಸ್ ವಾರದ ಹಿಂದೆ ಆಗಿತ್ತು, ಆ ಕೇಸ್ ನಲ್ಲಿ ಪ್ರಸಾದ್ ಅತ್ತಾವರ ಹಾಗೂ 13 ಜನರ ಬಂಧಿಸಿದ್ದೆವು, ಮುಖ್ಯ ಆರೋಪಿ ಪ್ರಸಾದ್ ಅತ್ತಾವರ ಇತರೆ ನಂಟು ತಿಳಿಯಲು ಮೊಬೈಲ್ ಪರೀಕ್ಷಿಸಿದ್ದೆವು, ವಾಟ್ಸಪ್ ಮೆಸೇಜ್ ರಿಟ್ರೀವ್ ಮಾಡಿದಾಗ ಮಾಹಿತಿ ಸಿಕ್ಕಿದ್ದು ಅದರಲ್ಲಿ ಅನಂತ್ ಭಟ್ ಎಂಬಾತ ಪ್ರಸಾದ್ ಗೆ ಕಳಿಸಿದ ವೀಡಿಯೋ ಸಿಕ್ಕಿದೆ ಎಂದು ತಿಳಿಸಿದ್ದಾರೆ.

ವಿಡಿಯೋದಲ್ಲಿ ದೇವಸ್ಥಾನದಲ್ಲಿ ಕುರಿ ಬಲಿ ಕೊಡ್ತಾ ಇರೋದು ಇದ್ದು,ಒಂದು ದೇವಸ್ಥಾನದಲ್ಲಿ ಐದು ಕುರಿಗಳಿಗೆ ಬಲಿ ಕೊಡ್ತಾರೆ ಎಂದುಅವರ ವಾಟ್ಸಪ್ ಚಾಟ್ಸ್ ಪ್ರಕಾರ ನಮಗೆ ಮಾಹಿತಿ ಸಿಕ್ಕಿದೆ.

ಆರ್ಟಿಐ ಕಾರ್ಯಕರ್ತ ಸ್ನೇಹಮಯಿ‌‌ ಕೃಷ್ಣ ಹಾಗೂ ಗಂಗರಾಜುಗೆ ಶಕ್ತಿ ತುಂಬಲು ಇದು ನಡೆದಿದೆ ಎಂದು ತಿಳಿದುಬಂದಿದೆ. ಅವರ ಹೋರಾಟದಲ್ಲಿ ಹೆಚ್ಚಿನ ಬಲ ಸಿಗಲಿ ಅಂತ ಬಲಿ ಕೊಡಲಾಗಿದ್ದು, ಐದು ಹೆಸರು ಹಾಗೂ ಸ್ನೇಹಮಯಿ ಕೃಷ್ಣ, ಗಂಗರಾಜು ಫೋಟೋ ಮೇಲೆ ದೇವರ ಫೋಟೊ ಇಟ್ಟು ಪೂಜೆ ಮಾಡಲಾಗಿದೆ ಎಂಬ ಮಾಹಿತಿ ದೊರೆತಿದೆ.

ಬರ್ಕೆ ಪೊಲೀಸ್ ಠಾಣೆಯಲ್ಲಿ ಈ ಬಗ್ಗೆ ಪ್ರಕರಣ ದಾಖಲಾಗಿದ್ದು,ಅನಂತ್ ಭಟ್ ಯಾರೋ ಅರ್ಚಕ ಅಥವಾ ಪ್ರಸಾದ್ ಸ್ನೇಹಿತ ಇರಬಹುದು ಎಂದು ತಿಳಿದಿದ್ದು
ಬಲಿ ಎಲ್ಲಿ ನಡೆದಿದೆ ಅನ್ನೋದು ಗೊತ್ತಿಲ್ಲ, ತನಿಖೆ ಮಾಡ್ತಾ ಇದೀವಿ,ಪ್ರಾರಂಭಿಕ ಮಾಹಿತಿ ಪ್ರಕಾರ ಇದನ್ನ ಸ್ನೇಹಮಯಿ ಕೃಷ್ಣ, ಗಂಗರಾಜುಗೋಸ್ಕರ ಮಾಡಲಾಗಿದ್ದು ಒಟ್ಟು ಮೂರು ಹೆಸರು ಅವರು ಚೀಟಿ ಮೇಲೆ ಬರೆದಂತೆ ಕಾಣ್ತಿದೆ,ಸ್ನೇಹಮಯಿ ಕೃಷ್ಣ, ಗಂಗರಾಜು ಹಾಗೂ ಹರ್ಷ ಬರೆದಿದ್ದಾರೆ. ಇವರಿಗೆ ಬಲ ಸಿಗಲು ಇದನ್ನು ಮಾಡಲಾಗಿದೆ, ಅವರ ವಿಚಾರಣೆ ಮಾಡ್ತೀದ್ದಿವೆ ಬರ್ಕೆ ಇನ್ಸ್ಪೆಕ್ಟರ್ ಸೋಮೇಶೇಖರ್ ಇದರ ದೂರುದಾರ ಆಗಿದ್ದಾರೆ ಎಂದು ಹೇಳಿದ್ದಾರೆ.

ಪಶು ಬಲಿ ಕೊಡೋದು ನಿರ್ಬಂಧ ಇರೋ ಕಾರಣ ಇದು ಅಪರಾಧ,ಪ್ರಸಾದ್ ಅತ್ತಾವರ ಮತ್ತು ಅನಂತ್ ಭಟ್ ವಶಕ್ಕೆ ಪಡೆದು ತನಿಖೆ ಮಾಡ್ತೇವೆ ಎಂದರು.

ಆ ಕುರಿತು ತನಿಖೆ ನಡೆಸಿದ ಪೊಲೀಸರಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಮುಡಾ ಪ್ರಕರಣದ ಪ್ರಮುಖ ದೂರುದಾರರಾದ ಸ್ನೇಹಮಯಿ ಕೃಷ್ಣ ಮತ್ತು ಗಂಗರಾಜು ಅವರ ಪರವಾಗಿ ಪ್ರಸಾದ್ ಅತ್ತಾವರ ಆಪ್ತರು ವಾಮಾಚಾರ ನಡೆಸಿರುವುದು ಮತ್ತು ಅದರಲ್ಲಿ ಆತನ ಪತ್ನಿಯಾದ ಉಡುಪಿ ಮಹಿಳಾ ಪೊಲೀಸ್ ಠಾಣೆ ಪಿಎಸ್‌ಐ ಆದ ಸುಮಾ ಆಚಾರ್ಯ ಕೂಡ ಭಾಗಿಯಾಗಿರುವ ಸಂಗತಿ ತಿಳಿದುಬಂದಿದೆ.

ಆ ಮೂಲಕ ಪ್ರಾಣಿ ಬಲಿ ಪ್ರಕರಣಕ್ಕೆ ಹೊಸ ತಿರುವು ಬಂದಿದ್ದು, ಸಿದ್ದರಾಮಯ್ಯ ವಿರುದ್ಧ ದೂರುದಾರರಿಗೆ ಬಲ ತುಂಬುವ ಯತ್ನವಾಗಿ ಪ್ರಸಾದ್ ಅತ್ತಾವರ ನೇತೃತ್ವದ ರಾಮಸೇನೆ ಸೇರಿದಂತೆ ಕೆಲವು ಸಂಘಟನೆಗಳು ವಾಮಾಚಾರದ ಮೊರೆ ಹೋಗಿರುವುದು ಬಯಲಾಗಿದೆ.

ಹಣದ ಬ್ಯಾಗ್ ನ ಫೋಟೋ ಕೂಡ ಇತ್ತು, ಅದರ ಬಗ್ಗೆ ತನಿಖೆ ಮಾಡ್ತೇವೆ,ಚಾಟ್ ಪ್ರಕಾರ ಪ್ರಸಾದ್ ಅತ್ತಾವರನೇ ಇದನ್ನೆಲ್ಲಾ ಮಾಡಿಸಿದ್ದು ಅಂತ ಗೊತ್ತಾಗ್ತಿದೆ,ಅನಂತ್ ಭಟ್ ಹುಡುಕಾಟ ಆಗ್ತಿದೆ, ನಾವು ಅರೆಸ್ಟ್ ಮಾಡ್ತೀವಿ,ಯಾರಿಗೆ ಫಾರ್ವರ್ಡ್ ಮಾಡಿದ್ದಾರೋ ಅವರ ಬಗ್ಗೆಯೂ ತನಿಖೆ ಆಗಲಿದೆ,ವಿಡಿಯೋ, ಫೋಟೊ ತರಿಸಿ ಹೆಚ್ಚಿನ ತನಿಖೆ ಮಾಡ್ತೀವಿ ಎಂದು ನಗರ ಪೋಲಿಸ್ ಆಯುಕ್ತ ಅನುಪಮ್ ಅಗರ್ವಾಲ್ ತಿಳಿಸಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

Most Popular