Friday, March 13, 2026
Flats for sale
Homeಜಿಲ್ಲೆಮಂಗಳೂರು ; ಸ್ಯಾಮ್ ಸಂಗ್ ಮೊಬೈಲ್ ಕಂಪೆನಿಯ ಬೇಜಬ್ದಾರಿ ವಿರುದ್ದ ಚಿಲ್ಲರೆ ವ್ಯಾಪಾರಿಗಳು ಅಕ್ರೋಶ,ದೇಶಾದ್ಯಂತ...

ಮಂಗಳೂರು ; ಸ್ಯಾಮ್ ಸಂಗ್ ಮೊಬೈಲ್ ಕಂಪೆನಿಯ ಬೇಜಬ್ದಾರಿ ವಿರುದ್ದ ಚಿಲ್ಲರೆ ವ್ಯಾಪಾರಿಗಳು ಅಕ್ರೋಶ,ದೇಶಾದ್ಯಂತ ಬೃಹತ್ ಪ್ರತಿಭಟನೆಯ ಸೂಚನೆ…!

ಮಂಗಳೂರು ; ಸ್ಯಾಮ್ ಸಂಗ್ ಕಂಪೆನಿಯ ನೀತಿಗಳ ವಿರುದ್ದ ಚಿಲ್ಲರೆ ವ್ಯಾಪಾರಿಗಳು ಅಕ್ರೋಶ ಹೊರಹಾಕಿದ್ದು ಮುಂದಿನ ದಿನ ದೇಶಾದ್ಯಂತ ಪ್ರತಿಭಟನೆ ನಡೆಸುತ್ತೆಂದು ತಿಳಿಸಿದ್ದಾರೆ.

ಈ ಸಮಸ್ಯೆಗಳನ್ನು ಪರಿಹರಿಸಲು ಮತ್ತು ಸ್ಥಳೀಯ ಚಿಲ್ಲರೆ ವ್ಯಾಪಾರಿಗಳನ್ನು ನ್ಯಾಯಯುತವಾಗಿ ಬೆಂಬಲಿಸಲು ನಾವು ಭಾರತದ ಸ್ಯಾಮ್‌ಸಂಗ್ ಕಂಪನಿಯನ್ನು ಒತ್ತಾಯಿಸುತ್ತೇವೆ ಎಂದು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ.

ಸಾಮ್ ಸಂಗ್ ಕಂಪೆನಿಯ ಅನ್ಲೈನ್ ಮತ್ತು ಮೈನ್ ಲೈನ್ ಗಳಲ್ಲಿ ಮೊಬೈಲ್ ಬೆಲೆಗಳು ಸಮನಾಗಿಲ್ಲ ಆದ್ದರಿಂದ ಮೈನ್ ಲೈನ್ ವ್ಯಾಪಾರಿಗಳಿಗೆ ಕಷ್ಟವಾಗಿತ್ತಿದ್ದು ಸಾಮ್ ಸಂಗ್ .ಕಾಮ್ ವೆಬ್ ಸೈಟ್ ನಲ್ಲಿ ಭಾರೀ ರಿಯಾಯಿತಿಗಳು ಸ್ಥಳೀಯ ವ್ಯಾಪಾರಿಗಳಿಗೆ ಹಾನಿ ಮಾಡುತ್ತದೆಂದು ತಿಳಿಸಿದ್ದಾರೆ.

ಚಿಲ್ಲರೆ ವ್ಯಾಪಾರಿಗಳು ಸ್ಯಾಮ್ ಸಂಗ್ ನ ಕರ್ನಾಟಕ ಶಾಖೆಗೆ ಕಳೆದ 2 ವರ್ಷಗಳಿಂದ ಹಲವು ಬಾರಿ ಮನವಿ ನೀಡಿದರು ಉತ್ತರಿಸಿಲ್ಲವೆಂದು ತಿಳಿಸಿದ್ದಾರೆ. ಈ ಸಮಸ್ಯೆಗಳನ್ನು ಪರಿಹರಿಸಲು ಮತ್ತು ಸ್ಥಳೀಯ ಚಿಲ್ಲರೆ ವ್ಯಾಪಾರಿಗಳನ್ನು ನ್ಯಾಯಯುತವಾಗಿ ಬೆಂಬಲಿಸಲು ನಾವು ಭಾರತದ ಸ್ಯಾಮ್‌ಸಂಗ್ ಕಂಪನಿಯನ್ನು ಒತ್ತಾಯಿಸುತ್ತೇವೆ ಎಂದು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ.

ನಾವೆಲ್ಲರೂ ಈ ಉದ್ಯಮವನ್ನು ನಂಬಿ ಲಕ್ಷಾಂತರ ರೂ ಹೂಡಿಕೆ ಮಾಡಿದ್ದೇವೆ,ನಮ್ಮನ್ನು ನಂಬಿ ಹಲವು ಕೆಲಸಗಾರರು ನಮ್ಮ ಜೊತೆ ಇದ್ದಾರೆ.ಕಂಪೆನಿಗಳು ಅವರ ಇಷ್ಟಬಂದಂತೆ ದರ ನಿಗದಿಪಡಿಸುವುದರಿಂದ ಚಿಲ್ಲರೆ ವ್ಯಾಪಾರಸ್ಥರು ಬೀದಿಗೆ ಬಂದಿದ್ದಾರೆ,ನಮಗೆ ಕೇವಲ ಮೊಬೈಲ್ ಸರ್ವಿಸ್ ಮಾಡುವುದರಿಂದ ಯಾವುದೇ ಪ್ರಯೋಜನವಿರುವುದಿಲ್ಲ,ಆದರಿಂದ ಕಂಪೆನಿಗಳು ಚಿಲ್ಲರೆ ವ್ಯಾಪಾರಸ್ಥರ ಸಮಸ್ಯೆಗಳನ್ನು ಆಲಿಸಬೇಕೆಂದು ಪ್ರಭಾಕರ್ ಶೆಟ್ಟಿಯವರು ವಿನಂತಿಸಿದ್ದಾರೆ.

ಚಿಲ್ಲರೆ ವ್ಯಾಪಾರಿಗಳು ಸ್ಯಾಮ್ ಸಂಗ್ ನ ಕರ್ನಾಟಕ ಶಾಖೆಗೆ ಕಳೆದ ೨ ವರ್ಷಗಳಿಂದ ಹಲವು ಬಾರಿ ಮನವಿ ನೀಡಿದರು ಉತ್ತರಿಸಿಲ್ಲವೆಂದು ತಿಳಿಸಿದ್ದಾರೆ. ಕಾರ್ಪೊರೇಟ್ ಡೀಲ್ ಗಳು ಸಗಟು ವ್ಯಾಪಾರಿಗಳಿಗೆ ನೀಡುವ ನೇರ ಕೊಡುಗೆಗಳು ಬೆಲೆಗಳ ಸವಾಲುಗಳನ್ನು ಇನ್ನಷ್ಟು ಹದಗೆಡಿಸುತ್ತಿದ್ದು ಇದರಿಂದ ಚಿಲ್ಲರೆ ವ್ಯಾಪಾರಿಗಳಿ ಕಂಗಲಾಗಿದ್ದಾರೆ ಎಂದು ಹೇಳಿದರು.

ಒನ್ ಲೈನ್ ನಲ್ಲಿ ಸಾಮ್ ಸಂಗ್ ಬುಕ್ಕಿಂಗ್ ಗೊಂದಲ ಉಂಟಾಗಿದ್ದು ಸೇವಾ ಕೇಂದ್ರಗಳಲ್ಲಿ S25 ಪೂರ್ವ – ಬುಕ್ಕಿಂಗ್ ಅನ್ನು ಅನುಮತಿಸಿ ಚಿಲ್ಲರೆ ವ್ಯಾಪಾರಿಗಳನ್ನು ಬದಿಗಿಟ್ಟಿದೆಂದು ತಿಳಿಸಿದ್ದಾರೆ. ಈ ಸಮಸ್ಯೆಗಳನ್ನು ಪರಿಹರಿಸಲು ಮತ್ತು ಸ್ಥಳೀಯ ಚಿಲ್ಲರೆ ವ್ಯಾಪಾರಿಗಳನ್ನು ನ್ಯಾಯಯುತವಾಗಿ ಬೆಂಬಲಿಸಲು ನಾವು ಭಾರತದ ಸ್ಯಾಮ್ ಸಂಗ್ ಕಂಪೆನಿಯನ್ನು ಒತ್ತಾಯಿಸುತ್ತೇವೆಂದು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ.

ಪತ್ರಿಕಾಗೋಷ್ಠಿಯಲ್ಲಿ ಪ್ರಭಾಕರ ಶೆಟ್ಟಿ, ವೇಣುಗೋಪಾಲ್,ಭರತ್ ,ಮಹಮ್ಮದ್ ರಿಯಾಜ್,ಮಹಮ್ಮದ್ ಅಜಾರ್,ಹಾಗೂ ಮಹಮ್ಮದ್ ಇಮ್ತಿಯಾಜ್ ರವರು ಉಪಸ್ಥಿತರಿದ್ದರು.

RELATED ARTICLES

LEAVE A REPLY

Please enter your comment!
Please enter your name here

Most Popular