ಮಂಗಳೂರು ; ರೋಟರಿ ಅಂತರಾಷ್ಟ್ರೀಯ ಸಂಸ್ಥೆಯ 542 ಜಿಲ್ಲೆಗಳಲ್ಲಿ ನಮ್ಮ ರೋಟರಿ ಜಿಲ್ಲೆ 3181ಕೂಡ ಒಂದಾಗಿದ್ದು ನಾಲ್ಕು ಕಂದಾಯ ಜಿಲ್ಲೆಗಳನ್ನು ಒಳಗೊಂಡಂತಹ ಈ ರೋಟರಿ ಜಿಲ್ಲೆ ಅಂತರಾಷ್ಟ್ರೀಯ ರೋಟರಿ ಸಂಸ್ಥೆ ಹಾಗೂ ನಮ್ಮ ರೋಟರಿ ಕ್ಲಬ್ ಗಳಲ್ಲಿ ಒಂದು. ಈ ಹಿನ್ನೆಲೆ ಜನವರಿ 24,25,26 ರಂದು ಅಡ್ಯಾರ್ ಗಾರ್ಡನ್ ನಲ್ಲಿ ರೋಟರಿ ಜಿಲ್ಲಾ ಸಮಾವೇಶ ನಡೆಯಲಿದೆ. 24 ರಂದು ಸಾಯಂಕಾಲ 4:30 ಕ್ಕೆ ಪ್ರಾರಂಭವಾಗುವ ಈ ಕಾರ್ಯಕ್ರಮದಲ್ಲಿ ಅಂತರಾಷ್ಟ್ರೀಯ ರೋಟರಿಯ ದತ್ತಿ ನಿಧಿಯ ಟ್ರಸ್ಟಿಗಳಾಗಿರತಕ್ಕಂತಹ ರೊI ಭರತ್ ಪಾಂಡ್ಯ ರವರು ಹಾಗೂ ರೋಟರಿ ಅಂತರಾಷ್ಟ್ರೀಯ ಅಧ್ಯಕ್ಷರ ಪ್ರತಿನಿಧಿಯಾಗಿರತಕ್ಕಂತಹ ರೋ ಬಾಲಮೂರ್ತಿ ಅವರು ಆಗಮಿಸುತ್ತಿರುವುದು ವಿಶೇಷವಾಗಿದೆ,ಮುಖ್ಯ ಭಾಷಣಕಾರರಾಗಿ ಡಾ.ಬಾಲಸುಬ್ರಮಣ್ಯಂ ಮೆಂಬರ್ H.R. Capasity Building Commission. Govt. of India ಬಾಗವಹಿಸಲಿದ್ದಾರೆ. ಅಂದು ಸಾಯಂಕಾಲ ಕಾರ್ಯಕ್ರಮದಲ್ಲಿ ಆಕರ್ಷಣೆಯಾಗಿ ಕಾಂತರಾ ಚಿತ್ರದ ನಟಿಯಾಗಿರುವಂತಹ ಮಾನಸಿ ಸುದೀರ್ ಹಾಗೂ ಪ್ರಸಿದ್ಧ ಜಾದುಗಾರ ಕುದ್ರೊಳಿ ಗಣೇಶ ಅವರಿಂದ ಸಭಿಕರನ್ನು ರಂಜಿಸುವ ಕಾರ್ಯಕ್ರಮ ನಡೆಯಲಿದೆ ಎಂದು ತಿಳಿಸಿದೆ.
25ರ ಎರಡನೇ ದಿನದಂದು ವಿಶೇಷ ಆಕರ್ಷಣೆಯಾಗಿ ಭಾರತೀಯ ನೌಕಾದಳದ Vice Admiral ಪ್ರವೀಣ್ ನಾಯರ್ ರವರು, ರಾಮಕೃಷ್ಣ ಮಠ ಅಲೆಪ್ಪಿಯ ಸ್ವಾಮಿ ವೀರಭದ್ರಾನಂದ್ ಜಿ Mind movers management ನ ಸ್ಥಾಪಕರಾದಂತಹ ಜಯಪ್ರಕಾಶ್ ಕಾಬ್ರ, ವಂದೇ ಭಾರತ್ ನ CEO ಸುಧಾಂಶು ಮಣಿ,ಅಂತರಾಷ್ಟ್ರೀಯ ಯೂತ್ ಫೆಸ್ಟ ವಿನ್ನರ್ ಆಗಿರತಕ್ಕಂತಹ ಆದ್ಯ ದೀಕ್ಷಿತ್ ಬಾಗವಹಿಸಲಿದ್ದಾರೆ. ಸಾಂಸ್ಕೃತಿಕ ಕಾರ್ಯಕ್ರಮದ ವಿಶೇಷ ಆಕರ್ಷಣೆಯಾಗಿ ರಂಗ ಕಲಾವಿದೆ ಶ್ವೇತಾ ಅರೆಹೊಳೆ ಕಾರ್ಯಕ್ರಮ ನಡೆಸಲಿಕೊಡಲಿದ್ದಾರೆ.
26ರ ಮೂರನೇ ದಿನದಂದು ಗಣರಾಜ್ಯೋತ್ಸವದ ಅಂಗವಾಗಿ ಬೆಳಿಗ್ಗೆ 8.30 ಕ್ಕೆ ಕರ್ನಲ್ ಭಂಡಾರಿ ಅವರಿಂದ ಧ್ವಜಾರೋಹಣ ಕಾರ್ಯಕ್ರಮ ನಡೆಯಲಿದೆ. ಈ ದಿನದಂದು ವಿವೇಕಾನಂದ ಯೂಥ್ ಮೂವ್ಮೆಂಟ್ CEO ಶ್ರೀ ಪ್ರವೀಣ್ ಕುಮಾರ್ ಸಯ್ಯಪ್ಪ ರಾಜು TEDx ನ ಭಾಷಣಗಾರ ಹಾಗೂ ಮಾನಸಿಕ ತಜ್ಞರಾಗಿರುವಂತಹ ಅಕ್ಷರ ದಾಂಮ್ಲೆ ಹಾಗೂ ಯೆನೆಪೋಯ ಮೆಡಿಕಲ್ ಕಾಲೇಜಿನ Geriatric Medicine ನ ಮುಖ್ಯಸ್ಥೆ ಡಾಕ್ಟರ್ ಪ್ರಭಾ ಅಧಿಕಾರಿ ಅವರು ಬಾಗಿವಹಿಸಲಿದ್ದಾರೆ. ಮೂರು ದಿನಗಳ ಈ ಅಭೂತಪೂರ್ವ ಸಮಾವೇಶದಲ್ಲಿ ಎಲೆಮರೆಯ ಕಾಯಿಯಂತೆ ಸಮಾಜಕ್ಕೆ ಅತ್ಯಮೂಲ್ಯವಾದ ಸೇವೆ ಸಲ್ಲಿಸುತ್ತಿರುವ ಆರು ಜನ ಮಹನೀಯರನ್ನು ಗೌರವಿಸುವಂತಹ ಕಾರ್ಯಕ್ರಮ ನಡೆಯಲಿದೆ. ಅಲ್ಲದೆ ರೋಟರಿಯಲ್ಲಿ 50 ವರ್ಷಗಳ ನಿರಂತರ ಸೇವೆಯನ್ನು ಸಲ್ಲಿಸುತ್ತಿರುವ ಹಿರಿಯ ರೊಟೇರಿಯನ್ ಗಳವರನ್ನು ಕೂಡ ಗೌರವಿಸಲಾಗುವುದು ಎಂದು ಹೇಳಿದ್ದಾರೆ.
ಮಸ್ತಕಕ್ಕೆ ಜ್ಞಾನ, ಮನಸ್ಸಿಗೆ ಸಂತೋಷ, ಕಿವಿಗಳಿಗೆ ಸಂಗೀತದ ರಸದೌತಣವನ್ನು ಬಡಿಸುವ ಈ ಮೂರು ದಿನಗಳ ಸಮಾವೇಶದಲ್ಲಿ ಮಡಿಕೇರಿ, ಮೈಸೂರು, ಚಾಮರಾಜನಗರ ಹಾಗೂ ದಕ್ಷಿಣ ಕನ್ನಡ ಜಿಲ್ಲೆಯ ಸುಮಾರು 2000 ಪ್ರತಿನಿಧಿಗಳು ಭಾಗವಹಿಸುವ ನಿರೀಕ್ಷೆ ಇದೆ. ಈ ಸಮಾವೇಶದ ವಿಚಾರವಾಗಿ ಹಾಗೂ ರೋಟರಿ ಸಂಸ್ಥೆಯು ಪ್ರಪಂಚದಾದ್ಯಂತ ಮಾಡುತ್ತಿರುವ ಸಮಾಜ ಸೇವಾ ಕಾರ್ಯಕ್ರಮಗಳನ್ನು ಸಮಾಜದ ಮುಖ್ಯ ವಾಹಿನಿಗೆ ತಿಳಿಸುವಲ್ಲಿ ತಮ್ಮ ಸಂಪೂರ್ಣ ಸಹಕಾರವನ್ನು ನಾವು ನಿರೀಕ್ಷಿಸುತ್ತಿದ್ದೇವೆ ಎಂದು ತಿಳಿಸಿದ್ದಾರೆ.
ಕೆ. ರವೀಂದ್ರ ಶೆಟ್ಟಿ ಉಳಿದೊಟ್ಟು ಕಾನ್ಫರೆನ್ಸ್ ಛೇರ್ಮನ್, ರಿತೇಶ್ ಬಾಳಿಗ ಜಿಲ್ಲಾ ಕಾರ್ಯದರ್ಶಿ, ಗೋಪಾಲಕೃಷ್ಣ ಶೆಟ್ಟಿ ಕಾರ್ಯದರ್ಶಿ ಜಿಲ್ಲಾ ಕಾನ್ಫರೆನ್ಸ್, ಗೀತಾನಂದ ಪೈ ಪತ್ರಿಕಾ ಗೋಷ್ಠಿಯಲ್ಲಿ ಉಪಸ್ಥಿತರಿದ್ದವರು.


