ಬೀದರ್ : ಬೀದರ್ನಲ್ಲಿ ಗುತ್ತಿಗೆದಾರ ರೈಲ್ವೇ ಟ್ರಾಕ್ಗೆ ಬಿದ್ದು ಸೂಸೈಡ್ ಮಾಡಿದ ಘಟನೆ ನಡೆದಿದೆ. ಮೃತರನ್ನು ಬೀದರ್ನ ಸಚಿನ್ (26) ಎಂದು ತಿಳಿದುಬಂದಿದೆ.

ಏಳು ಪುಟಗಳ ಸಮಗ್ರವಾದ ಲೆಟರ್ ಬರೆದು ಆತ್ಮಹತ್ಯೆಗೆ ಶರಣಾಗಿದ್ದು ಸಚಿವ ಪ್ರಿಯಾಂಕ್ ಖರ್ಗೆ ಆಪ್ತ ರಾಜು ಕಪನೂರು ಮೇಲೆ ಗಂಭೀರ ಆರೋಪಮಾಡಿದ್ದಾನೆ. ಟೆಂಡರ್ ಕೊಡುವ ವಿಚಾರಕ್ಕೆ ಗುತ್ತಿಗೆದಾರನಿಂದ ಲಕ್ಷಾಂತರ ರೂಪಾಯಿ ಹಣ ಪಡೆದು ವಂಚಿಸಿದ್ದು ಬಳಿಕ ಮತ್ತೆ ರಾಜು ಕಪಣೂರ್ ನಿಂದ 1 ಕೋಟಿ ಹಣಕ್ಕೆ ಬೇಡಿಕೆ ಇಟ್ಟಿದ್ದನೆಂದು ತಿಳಿದುಬಂದಿದೆ.
1 ಕೋಟಿ ರೂಪಾಯಿ ನೀಡದಿದ್ರೆ ಕೊಲೆ ಬೆದರಿಕೆ ಹಿನ್ನೆಲೆ ಸಚಿನ ಸೂಸೈಡ್ ಮಾಡಿರುವದು ಬೆಳಕಿಗೆಬಂದಿದೆ. ಸುಮಾರಯ 15 ಲಕ್ಷಕ್ಕೂ ಅಧಿಕ ಹಣ ತೆಗೆದುಕೊಂಡು ಟೆಂಡರ್ ನೀಡದೇ ದೋಖಾ ಆರೋಪ ಕೇಳಿಬಂದಿದ್ದು
ಕಲಬುರಗಿಯ ಮಾಜಿ ಕಾರ್ಪೊರೇಟ್ ರಾಜು ಕಪನೂರು, ನಂದಕುಮಾರ್ ನಾಗಭುಜಂಗೆ, ಗೋರಖನಾಥ್ ಸೇರಿ 6 ಜನರ ವಿರುದ್ಧ ಜೀವ ಬೆದರಿಕೆ ಇದೆ ಎಂದು ಆರೋಪಿಸಿದ್ದಾರೆ.
ಬೀದರ್ ಜಿಲ್ಲೆಯ ಭಾಲ್ಕಿ ತಾಲೂಕಿನ ಕಟ್ಟಿತೂಂಗಾವ್ ಗ್ರಾಮದ ಸಚಿನ್ ಮೃತಪಟ್ಟಿದ್ದು ರೈಲ್ವೆ ಟ್ರಾಕ್ ನಲ್ಲಿ ರುಂಡ-ಮುಂಡ ಬೇರ್ಪಟ್ಟ ಸ್ಥಿತಿಯಲ್ಲಿ ಶವ ಪತ್ತೆಯಾಗಿದ್ದು ಸೂಸೈಡ್ ಮಾಡಿಕೊಂಡ ಸ್ಥಳದಲ್ಲಿ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ. ಡೆತ್ ನೋಟ್ ಬರೆದು ಆತ್ಮಹತ್ಯೆ ಮಾಡಿದ್ದು ಪತ್ರದಲ್ಲಿರುವ ಆರೋಪಿಗಳನ್ನ ಕರೆಸುವಂತೆ ಕುಟುಮಸ್ಥರು ಒತ್ತಾಯಿಸಿದ್ದಾರೆ.
ಪತ್ರದಲ್ಲಿ ಉಲ್ಲೇಖವಾಗಿರುವ ರಾಜು ಕಪನೂರು ಸೇರಿ ಎಲ್ಲರನ್ನು ಇಲ್ಲಿಗೆ ಕರೆಸಿ ಎಂದು ಕುಟುಂಬಸ್ಥರು ಪಟ್ಟು ಹಿಡಿದಿದ್ದು ಅವರು ಬರೋವರೆಗೆ ಇಲ್ಲಿಂದ ಮೃತದೇಹ ತೆಗೆದುಕೊಂಡು ಹೋಗಲು ಬಿಡಲ್ಲಾ ಎಂದು ಕುತುಬಸ್ಥರು ಎಂದು ಪಟ್ಟು ಹಿಡಿದಿದ್ದಾರೆ. ನ್ಯಾಯಕ್ಕಾಗಿ ರೈಲು ತಡೆದು ಪಟ್ಟು ಹಿಡಿದುಕೊಂಡು ಕುಟುಂಬಸ್ಥರು ಕುಳಿತಿದ್ದು ಕೊನೆಗೆ ಕುಟುಂಬಸ್ಥರ ವಿರೋಧದ ಮದ್ಯೆಯೇ ಮೃತದೇಹವನ್ನು ಬ್ರೀಮ್ಸ್ ಶವಗಾರಕ್ಕೆ ರವಾನಿಸಲಾಗಿದೆ. ಈ ಕುರಿತು ಬೀದರ್ ರೈಲ್ವೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ತನಿಖೆ ನಡೆಯುತ್ತಿದೆ.


