Wednesday, December 18, 2024
Flats for sale
Homeವಿದೇಶಮಂಗಳೂರು : ಥಾಯ್ಲೆಂಡ್ ಯುವತಿಯನ್ನು ವಿವಾಹವಾದ ಮಂಗಳೂರಿನ ಯುವಕ..!

ಮಂಗಳೂರು : ಥಾಯ್ಲೆಂಡ್ ಯುವತಿಯನ್ನು ವಿವಾಹವಾದ ಮಂಗಳೂರಿನ ಯುವಕ..!

ಮಂಗಳೂರು : ಇತ್ತಿಚ್ಚಿನ ದಿನಗಳಲ್ಲಿ ಅಂತಾರಾಷ್ಟ್ರೀಯ ಪ್ರೇಮ ವಿವಾಹಗಳು ಸಾಮಾನ್ಯವಾಗಿವೆ. ಇದೀಗ ದ.ಕನ್ನಡದ ಮಂಗಳೂರಿನ ಯುವಕ ತಾನು ಪ್ರೀತಿಸಿದ ಥಾಯ್ಲೆಂಡ್‌ನ ಯುವತಿಯೊಂದಿಗೆ ಭಾರತೀಯ
ಸಂಪ್ರದಾಯದಂತೆ ವಿವಾಹವಾಗಿ ವೈವಾಹಿಕ ಜೀವನಕ್ಕೆ ಅಡಿಯಿಟ್ಟಿದ್ದಾರೆ.

ಮಂಗಳೂರಿನ ಅಮೀನ್‌ನ ಪೃಥ್ವಿರಾಜ್ ಎಸ್ ಮತ್ತು ಥಾಯ್ಲೆಂಡ್‌ನ ಮೊಂಟಕನ್ ಸಾಸೂಕ್ ವಿವಾಹವಾಗಿದ್ದಾರೆ ವಕೀಲರಾದ ಸುಜಯ ಸತೀಶ್ ಮತ್ತು ಸತೀಶ್ ಕುಮಾರ್ ಅವರ ಪುತ್ರ ಪೃಥ್ವಿರಾಜ್ ಬೆಂಗಳೂರಿನಲ್ಲಿ ಸ್ವಂತ ಸಾಫ್ಟ್ ವೇರ್ ಕಂಪನಿ ಹೊಂದಿದ್ದಾರೆ. ಅವರ ಸಂಸ್ಥೆಯು ಟಾಟಾ, ಪೋರ್ಷೆ ಮುಂತಾದ ಕಂಪನಿಗಳಿಗೆ ಸಾಫ್ಟ್ವೇರ್ ಸೇವೆಗಳನ್ನು ಒದಗಿಸುತ್ತದೆ.

ಪ್ರೇಮಿಗಳ ದಿನದಂದು ಪ್ರಾಜೆಕ್ಟ್ಗಾಗಿ ಥೈಲ್ಯಾಂಡ್‌ಗೆ ಹೋದಾಗ ಮೊಂಟಕನ್ ಸಾಸೂಕ್ ಅವರನ್ನು ಪೃಥ್ವಿರಾಜ್ ಭೇಟಿಯಾಗಿದ್ದಾರೆ. ಮೊಂಟಕನ್ ಕಂಡು ತಕ್ಷಣವೇ ಪೃಥ್ವಿರಾಜನಿಗೆ ಪ್ರೀತಿ ಚಿಗುರೊಡೆದಿದೆ. ಮೊಂಟಕನ್ ಕೂಡ ಅವನ ಪ್ರೀತಿಯನ್ನು ಒಪ್ಪಿಕೊಳ್ಳುತ್ತಾಳೆ. ಅವರ ಪ್ರೀತಿ ಬಲವಾಗುತ್ತಿದ್ದಂತೆ, ಇಬ್ಬರೂ ಮದುವೆಯಾಗಲು ನಿರ್ಧರಿಸುತ್ತಾರೆ.

ಥಾಯ್ ಹುಡುಗಿಯನ್ನು ಮದುವೆಯಾಗುವುದಾಗಿ ಪೃಥ್ವಿರಾಜ್ ತನ್ನ ಪೋಷಕರಿಗೆ ಹೇಳಿದಾಗ, ಅವರು ಆರಂಭದಲ್ಲಿ ಆತಂಕ ವ್ಯಕ್ತಪಡಿಸಿದ್ದಾರೆ. ಆಗ ತಾನು ಅವಳನ್ನು ಪ್ರೀತಿಸುತ್ತಿದ್ದೇನೆ , ಅವಳೊಂದಿಗೆ ಜೀವನ ಸಾಗಿಸುವ ನಿರ್ಧಾರ ಕೈಗೊಂಡಿದ್ದಾಗಿ ತಿಳಿಸಿದ್ದಾಗ ಕುಟುಂಬಸ್ಥರು ಮದುವೆಗೆ ಒಪ್ಪಿಗೆ ಸೂಚಿಸಿದ್ದಾರೆ.

ಮೊಂಟಕನ್ ಮನೆಯಲ್ಲೂ ಮದುವೆಗೆ ಒಪ್ಪಿಗೆ ದೊರೆತ ಹಿನ್ನೆಲೆಯಲ್ಲಿ ಈ ಜೋಡಿ ಜುಲೈನಲ್ಲಿ ಥೈಲ್ಯಾಂಡ್ ಪದ್ಧತಿಯಂತೆ ಮದುವೆಯಾಗಿದ್ದಾರೆ. ಇದೀಗ ಭಾರತೀಯ ಪದ್ಧತಿಯಂತೆ ಗುರುವಾರ ಶ್ರೀಮಂಗಳಾದೇವಿ
ದೇವಸ್ಥಾನದಲ್ಲಿ ಗುರು-ಹಿರಿಯ ಸನ್ನಿಧಿಯಲ್ಲಿ ಮದುವೆ ನೆರವೇರಿತು.

ಡಿಸೆಂಬರ್ 7 ರಂದು ಅಡ್ಯಾರ್ ಗಾರ್ಡನ್‌ನಲ್ಲಿ ಅದ್ದೂರಿ ಆರತಕ್ಷತೆ ನಡೆಯಲಿದೆ. ಇನ್ನು ಮುಂದೆ, ಮೊಂತಕಂ ಥೈಲ್ಯಾಂಡ್ ತೊರೆದು ಭಾರತೀಯ ಸೊಸೆಯಾಗಿದ್ದಾಳೆ.

RELATED ARTICLES

LEAVE A REPLY

Please enter your comment!
Please enter your name here

Most Popular