ತುಮಕೂರು : ನಡೆದಾಡುವ ದೇವರು ಎಂದು ಕರೆಯುತಿದ್ದ ಅಕ್ಷರ ದಾಸೋಹದ ರೂವಾರಿ ಲಿಂಗೈಕ್ಯ ಡಾ.ಶಿವಕುಮಾರ ಸ್ವಾಮೀಜಿ ಪುತ್ಥಳಿ ವಿರೂಪ ಪ್ರಕರಣಕ್ಕೆ ಸಂಬಂಧಿಸಿದಂತೆ ತುಮಕೂರಿನ ಸಿದ್ದಗಂಗಾ ಮಠಾಧ್ಯಕ್ಷರಾದ ಸಿದ್ದಲಿಂಗ ಸ್ವಾಮೀಜಿ ಬೇಸರ ವ್ಯಕ್ತಪಡಿಸಿದ್ದಾರೆ.
ಕೆಲ ದಿನಗಳ ಹಿಂದೆ ಕನ್ನಡ ರಾಜ್ಯೋತ್ಸವ ಕೂಡ ಮಾಡಲಾಗಿದೆ.ಅಲ್ಲಿ ಹಲವು ವರ್ಷಗಳ ಹಿಂದೆ ಪುತ್ಥಳಿ ನಿರ್ಮಾಣ ಮಾಡಲಾಗಿದೆ.ಈ ಪುತ್ಥಳಿಯನ್ನ ಯಾವ ಸಮಾಜದವರು ನಿರ್ಮಿಸಿದ್ದಾರೆ ಗೊತ್ತಿಲ್ಲ.ಆದರೆ ಎಲ್ಲರೂ ಗೌರವ ಯುತವಾಗಿ ನಡೆಸಿಕೊಂಡಿದ್ದಾರೆ.ಯಾರೋ ವಿಕೃತ ಮನಸ್ಸಿನ ವ್ಯಕ್ತಿ ಅದಕ್ಕೆ ಕಲ್ಲೋ ಅಥವಾ ಬೇರೆ ಯಾವುದರಿಂದಲೋ ಹೊಡೆದು ವಿರೂಪಗೊಳಿಸಲಾಗಿದೆ.ಇದು ಅವರ ಮನಸ್ಥಿತಿಯನ್ನ ತೋರುತ್ತಿದೆ ಎಂದು ಹೇಳಿದ್ದಾರೆ.
ಈ ಪುತ್ಥಳಿ ಎಲ್ಲಾ ಸಮಾಜದ ಪ್ರೀತಿಗೆ ಪಾತ್ರವಾಗಿದೆ.ಮುಂದಿನ ದಿನಗಳಲ್ಲಿ ಯಾರೂ ಕೂಡ ಚ್ಯುತಿ ಆಗದಂತೆ ನೋಡಿಕೊಳ್ಳಬೇಕಾಗಿದೆ.ಪುತ್ಥಳಿಗಿಂತಲೂ ಆ ಪುತ್ಥಳಿಯಲ್ಲಿರೋ ವ್ಯಕ್ತಿಯ ವ್ಯಕ್ತಿತ್ವವನ್ನು ನೋಡಬೇಕಾಗಿದೆ.ಅಂಬೇಡ್ಕರ್, ಬಸವಣ್ಣ, ಬುದ್ಧ, ಮಹಾತ್ಮಗಾಂಧಿ ಸೇರಿದಂತೆ ಹಲವು ಮಹಾತ್ಮರ ಪುತ್ಥಳಿಗಳನ್ನು ನೋಡಿದ್ದೇವೆ.ಅವುಗಳನ್ನ ಕೇವಲ ಕಲಾತ್ಮಕವಾಗಿಯೋ, ಪ್ರತಿಷ್ಠಿತೆಯ ದೃಷ್ಟಿಯಿಂದಲೋ ನೋಡಬಾರದು. ಅವರ ಸೇವೆ, ಸಾಧನೆಗಳಿಂದ ನಾವು ನೋಡಬೇಕಾಗಿದೆ ಎಂದರು.
ಶ್ರೀಗಳು 111ವರ್ಷ ಸಮಾಜದ ಸೇವೆಯಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡವರು, ಇಂತಹ ಮಹನೀಯರ ಪುತ್ಥಳಿ ವಿರೂಪಗೊಳಿಸಿರೋದು ಖಂಡನೀಯ,ಮುಂದಿನ ದಿನಗಳಲ್ಲಿ ಇಂತಹ ಘಟನೆಗಳು ನಡೆಯಬಾರದು, ಸಂಬಂಧಪಟ್ಟ ಇಲಾಖೆ, ಅಧಿಕಾರಿಗಳು ಗಮನ ಹರಿಸಬೇಕು,ಪುತ್ಥಳಿ ನಿರ್ಮಾಣದ ಜೊತೆ ಅವುಗಳನ್ನು ರಕ್ಷಿಸುವ ಕೆಲಸವೂ ಪ್ರತಿಯೊಬ್ಬರಿಂದ ಆಗಬೇಕಿದೆ ಹಾಗೂ ಪೊಲೀಸ್ ಇಲಾಖೆ ಉತ್ತಮ ಕೆಲಸ ಮಾಡಿದೆ ಎಂದು ಬೇಸರದ ನಡುವೆಯೂ ಪೋಲೀಸರ ಕಾರ್ಯವೈಖರಿಯನ್ನು ಕೊಂಡಾಡಿದರು.
ಸಿದ್ದಗಂಗಾ ಮಠದ ಡಾ. ಶಿವಕುಮಾರಸ್ವಾಮಿ ಪುತ್ಥಳಿ ವಿರೂಪಗೊಳಿಸಿದ್ದ ಆರೋಪಿಯನ್ನು ಗಿರಿನಗರ ಪೊಲೀಸರು ಬಂಧಿಸಿದ್ದಾರೆ.ರಾಜ್ ಶಿವು ಬಂಧಿತ ಆರೋಪಿಯಾಗಿದ್ದಾನೆ. ಗಿರಿನಗರದ ಬಳಿಯ ವೀರಭದ್ರನಗರ ಬಸ್ ನಿಲ್ದಾಣದ ಬಳಿ ಕಳೆದ ನ.೩೦ ರಂದು ರಾತ್ರಿ ಪುತ್ಥಳಿಗೆ ಹಾನಿ ಮಾಡಿದ್ದ.
ಶಿವಕುಮಾರ್ ಸ್ವಾಮೀಜಿ ಮೂರ್ತಿ ಒಡೆಯಲು ಕನಸನಲ್ಲಿ ಬಂದು ಏಸು ಹೇಳಿದ್ದರಂತೆ. ಏಸು ಹೇಳಿದ್ದಕ್ಕೆ ಶಿವಕುಮಾರ್ ಸ್ವಾಮೀಜಿ ಮೂರ್ತಿ ವಿರೂಪಗೊಳಿಸಿದ್ದೇನೆ ಎಂದು ಆರೋಪಿ ತಪ್ಪೊಪ್ಪಿಕೊಂಡಿದ್ದಾನೆ.
7 ವರ್ಷಗಳ ಹಿಂದೆ ರಾಜ್ ಶಿವು ಹಿಂದೂ ಧರ್ಮ ತೊರೆದು ಕ್ರೈಸ್ತ ಧರ್ಮಕ್ಕೆ ಮತಾಂತರಗೊಂಡಿದ್ದ . ಹಿಂದೂ ದೇವತೆಗಳು, ಹಿಂದೂ ಧರ್ಮದ ಸಂತರು, ಸನ್ಯಾಸಿಗಳ ಮೇಲೆ ದ್ವೇಷ ಸಾಧಿಸುತ್ತಿದ್ದ. ಬ್ಯಾಡರಹಳ್ಳಿ
ವ್ಯಾಪ್ತಿಯಲ್ಲಿ ವಾಸವಿದ್ದ ಆತ ಕ್ರಿಶ್ಚಿಯನ್‌ಗೆ ಮತಾಂತರವಾದ ಮೇಲೆ ಧರ್ಮಾಂದನಂತೆ ವರ್ತಿಸುತ್ತಿದ್ದು, ಶಿವಕುಮಾರ ಸ್ವಾಮೀಜಿ ಮೂರ್ತಿಯನ್ನುಒಡೆಯಲು ಸಂಚು ಮಾಡಿಕೊಂಡಿದ್ದ.
ನ.೩೦ರಂದು ರಾತ್ರಿ ಸುತ್ತಿಗೆ ಸಮೇತ ಆರೋಪಿ ಬಂದು, ರಾತ್ರಿ ಯಾರು ಇಲ್ಲದ ವೇಳೆ ಪುತ್ಥಳಿ ವಿರೂಪಗೊಳಿಸಿ ಪರಾರಿಯಾಗಿದ್ದನು. ಕ್ರೈಸ್ತ ಧರ್ಮದ ಪ್ರಚಾರ ಮಾಡಲು ಭಿತ್ತಿಪತ್ರ ಹಂಚುತ್ತಿದ್ದ. ಪತ್ರದಲ್ಲಿನ ಕೋಡ್ ಸ್ಕ್ಯಾನ್ ಮಾಡಿದ್ರೆ ಬೈಬಲ್ ಸಿಗುವಂತೆ ಭಿತ್ತಿಪತ್ರ ಹಂಚುತ್ತಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.
.