ಬೆಳಗಾವಿ : ಹೆಂಡತಿಗೆ ಮಂಗಲ ಸೂತ್ರ ಕೊಡಿಸಲು ಎಟಿಎಂಗೆ ಕನ್ನ ಹಾಕಿದ ಘಟನೆ ಬೆಳಗಾವಿ ನಗರದಲ್ಲಿ ನಡೆದಿದೆ. ಎಚ್ಡಿಎಫ್ಸಿ ಬ್ಯಾಂಕ್ ಎಟಿಎಂ ನಲ್ಲಿ ಹಣ ಎಗರಿಸಿದ ಭೂಪ ಅಂದರ್ ಆಗಿದ್ದಾನೆ. ಎಚ್ಡಿಎಫ್ಸಿ ಬ್ಯಾಂಕ್ ಸಿಬ್ಬಂದಿಯಿಂದಲೇ ಕೃತ್ಯ ಕಂಡು ಪೊಲೀಸರು ಶಾಕ್ ಆಗಿದ್ದಾರೆ.
ಹಣ ಹಾಕಲು ಇರ್ತೀದ್ದ ಎಟಿಎಂ ಮಷೀನ್ ಕೀ ಬಳಸಿಯೇ ಎಂಟು ಲಕ್ಷ ಹಣ ಕಳ್ಳತನ ಮಾಡಿದ್ದೂ ಎಂಟು ಲಕ್ಷ ಹಣ ಎಟಿಎಂ ನಿಂದ ಕಳ್ಳತನ ಮಾಡಿ ಎಸ್ಕೇಪ್ ಆಗಿದ್ದಾನೆ. ಬೆಳಗಾವಿ ನಗರದ ಕೃಷ್ಣಾ ಸುರೇಶ್ ದೇಸಾಯಿ ಬಂಧಿತ ಆರೋಪಿ .
ಕೃಷ್ಣಾ ಎಟಿಎಂಗೆ ಹಣ ಹಾಕುವ ಕೆಲಸ ಮಾಡುತ್ತಿದ್ದು ತನ್ನ ಬಳಿಯೇ ಇರ್ತಿದ್ದ ಎಟಿಎಂ ಮಷೀನ್ ಕೀ ಬಳಸಿ ಈ ಕೃತ್ಯ ನಡೆಸಿದ್ದಾನೆ. ಟೀಮ್ ಜೊತೆಗೆ ಬಂದು ಹಣ ಹಾಕಿ ಬಳಿಕ ಸಂಜೆ ಒಬ್ಬನೇ ಬಂದು ಕಳ್ಳತನ ಮಾಡಿದ್ದಾನೆ. ಮಷೀನ್ ಓಪನ್ ಮಾಡಿ ಬಿಂದಾಸ್ ಆಗಿ ಕಳ್ಳತನ ಮಾಡಿದ್ದು ಎರಡು ದಿನದ ಬಳಿಕ ಈತನ ಕೃತ್ಯ ಬೆಳಕಿಗೆ ಬಂದಿದೆ.
ಸಿಸಿಟಿವಿ ದೃಶ್ಯ ಪರಿಶೀಲನೆ ಮಾಡಿದಾಗ ಎಟಿಎಂ ನಿಂದ ತಮ್ಮ ಸಿಬ್ಬಂದಿ ಹಣ ಕದ್ದಿದ್ದು ಕಂಡು ಸಿಬ್ಬಂದಿ ಶಾಕ್ ಆಗಿದ್ದಾರೆ. ಈ ಕುರಿತು ಮಾರ್ಕೆಟ್ ಠಾಣೆಯಲ್ಲಿ ದೂರು ದಾಖಲಾಗಿದ್ದು ತಲೆ ಮರೆಸಿಕೊಂಡಿದ್ದ ಆರೋಪಿ ಕೃಷ್ಣಾ ದೇಸಾಯಿ ಬಂಧಿಸಲಾಗಿದೆ. ಬಂಧಿತನಿಂದ ಒಂದು ಮಂಗಲ ಸೂತ್ರ, ಚಿನ್ನದ ಸರ, ಏಳು ಲಕ್ಷ ರೂಪಾಯಿ ನಗದು ಜಪ್ತಿಮಾಡಲಾಗಿದೆ.