Thursday, March 12, 2026
Flats for sale
Homeಗ್ಯಾಜೆಟ್ / ಟೆಕ್ಹೆಚ್ ಪಿ 11 ಇಂಚ್ ಟ್ಯಾಬ್ ಬಿಡುಗಡೆ.

ಹೆಚ್ ಪಿ 11 ಇಂಚ್ ಟ್ಯಾಬ್ ಬಿಡುಗಡೆ.

ನವ ದೆಹಲಿ :ಕಂಪ್ಯೂಟರ್ ತಯಾರಕ ಸಂಸ್ಥೆ ಹೆಚ್ ಪಿ 11 ಇಂಚಿನ ಹೊಸ ಟ್ಯಾಬ್ ಬಿಡುಗಡೆ ಮಾಡಿದ್ದು, ತಿರುಗುವ ಕ್ಯಾಮರ, ಇಂಟೆಲ್ ಪೆಂಟಿಯಮ್ ಸಿಲ್ವರ್ ಎನ್ 6000 ಪ್ರೊಸೆಸರ್ ನ್ನು ಹೊಂದಿದೆ.

ಅಮೆರಿಕಾದಲ್ಲಿ ಈ ಟ್ಯಾಬ್ ಬಿಡುಗಡೆ ಮಾಡಿದ್ದು, $499 ಬೆಲೆಯನ್ನು ನಿಗದಿಪಡಿಸಲಾಗಿದೆ. ಕೀಬೋರ್ಟ್ ಸೇರಿದರೆ ಇದರ ಬೆಲೆ 599$ ಆಗಿದೆ. ಹೆಚ್ ಪಿ 11 ಇಂಚ್ ವಿಂಡೋಸ್ ಟ್ಯಾಬ್ಲೆಟ್ 11 ಇಂಚಿನ ಪರದೆಯನ್ನು ಹೊಂದಿದ್ದು, 2160x 1440 ಪಿಕ್ಸೆಲ್ ಗಳನ್ನು ಹೊಂದಿದೆ. ಸ್ಕ್ರೀನ್ ಟು ಬಾಡಿ ಅನುಪಾತ ಶೇ.84.6 ರಷ್ಟಿದೆ.

ಈ ಟ್ಯಾಬ್ ನಲ್ಲಿ ಖರೀದಿದಾರರಿಗೆ ಪ್ರೊಸೆಸರ್ ಜೊತೆಗೆ ಯುಹೆಚ್ ಡಿ ಗ್ರಾಫಿಕ್ಸ್ ಕೂಡ ದೊರೆಯಲಿದ್ದು. 10 ಎನ್ಎಂ ಪ್ರೊಸೆಸರ್ ಜೊತೆಗೆ 128 ಜಿಬಿ ಎನ್ ವಿಎಂಇ ಸ್ಟೋರೇಜ್ ಹಾಗೂ 4ಜಿಬಿ LPDDR4x ರ್ಯಾಮ್ ದೊರೆಯಲಿದೆ. ಚಾರ್ಜಿಂಗ್ ಹಾಗೂ ಇತರ ಡಿವೈಸ್ ಗಳಿಗೆ ಸಂಪರ್ಕ ಕಲ್ಪಿಸಲು ಯುಎಸ್ ಬಿ-ಸಿ ಪೋರ್ಟ್ ನ್ನು ನೀಡಲಾಗಿದೆ.ಪವರ್ ಬಟನ್ ನೊಂದಿಗೆ ಫಿಂಗರ್ ಪ್ರಿಂಟ್ ವೈಶಿಷ್ಟ್ಯವನ್ನೂ ಈ ಟ್ಯಾಬ್ ಹೊಂದಿದೆ.

RELATED ARTICLES

LEAVE A REPLY

Please enter your comment!
Please enter your name here

Most Popular