ನವದೆಹಲಿ : ಗಾಯದಿಂದ ಸಂಪೂರ್ಣ ಚೇತರಿಸಿಕೊಂಡು ದೇಸಿ ಪಂದ್ಯ ಆಡಿ ಸಾಮರ್ಥ್ಯ ಸಾಬೀತುಪಡಿಸಿರುವ ಟೀಮ್ ಇಂಡಿಯಾದ ವೇಗಿ ಮೊಹ್ಮದ್ ಶಮಿ ಬಹುನಿರೀಕ್ಷಿತಾ ಬಾರ್ಡರ್‌ಗವಾಸ್ಕರ್ ಟ್ರೋಫಿಯಲ್ಲಿ ಆಡಲು
ಆಸ್ಟ್ರೇಲಿಯಾಕ್ಕೆ ತೆರೆಳಲಿದ್ದಾರೆ ಎಂದು ತಿಳಿದು ಬಂದಿದೆ.
ನಾಯಕ ರೋಹಿತ್ ಶರ್ಮಾ ಜತೆ ವೇಗಿ ಮೊಹ್ಮದ್ ಶಮಿ ಕೂಡ ಆಸೀಸ್ ನಾಡಿಗೆ ಪ್ರಯಾಣಿಸಲಿದ್ದಾರೆ. ಮೊನ್ನೆ ಮಧ್ಯಪ್ರದೇಶ ವಿರುದ್ಧ ರಣಜಿ ಪಂದ್ಯದಲ್ಲಿ ಬಂಗಾಳ ತಂಡ 11 ರನ್‌ಗಳ ಅಂತರದಿAದ ರೋಚಕವಾಗಿ
ಗೆದ್ದಿತ್ತು. ಈ ಗೆಲುವಿನ ಹಿಂದೆ ವೇಗಿ ಮೊಹ್ಮದ್ ಶಮಿ ಪ್ರಮುಖ ಪಾತ್ರವಹಿಸಿದ್ದರು.
ಶಮಿ 43.2 ಓವರ್‌ಗಳಲ್ಲಿ 7 ವಿಕೆಟ್ ಪಡೆದು ಗಮನ ಸೆಳೆದಿದ್ದರು. ಒಂದು ವರ್ಷದ ಬಳಿಕ ಕ್ರಿಕೆಟ್ ಆಡಿದ್ದರಿಂದ ಬಿಸಿಸಿಐ ವೈದ್ಯಕೀಯ ತಂಡ ಶಮಿ ಅವರ ಆರೋಗ್ಯವನ್ನು ಗಮನಿಸುತ್ತಿತ್ತು. ಐದು ದಿನಗಳ ಕಾಲ ಯಾವ ತೊಂದರೆಯನ್ನು ಅನುಭವಿಸದೇ ಫಿಟ್ ಆಗಿದ್ದರಿಂದ ಬೆAಗಳೂರಿನ ಎನ್‌ಸಿಎ ಅಕಾಡೆಮಿ ಶಮಿಗೆ ಆಸ್ಟ್ರೇಲಿಯಾ ವಿರುದ್ಧ ಆಡಲು ಹಸಿರು ನಿಶಾನೆ ತೋರಿದೆ.
ಎರಡನೆ ಮಗುವಿನ ಜನನದ ಹಿನ್ನೆಲೆಯಲ್ಲಿ ನಾಯಕ ರೋಹಿತ್ ಶರ್ಮಾ ಅವರ ಆಸ್ಟ್ರೇಲಿಯಾ ಪ್ರವಾಸ ತಡವಾಗಿತ್ತು. ಈ ಕಾರಣದಿಂದ ಪರ್ತ್ ಟೆಸ್ಟ್ ಆಡುವುದಿಲ್ಲ ಎಂದು ಹೇಳಲಾಗುತ್ತಿತ್ತು. ಇದೀಗ ರೋಹಿತ್ ಶರ್ಮಾ ಆಸ್ಟ್ರೇಲಿಯಾ ಕ್ಕೆ ಶೀಘದಲ್ಲೇ ತೆರೆಳಲಿದ್ದಾರೆ ಎಂದು ತಿಳಿದು ಬಂದಿದೆ.


