ತುಮಕೂರು : ಮನೆ ಮುಂದೆ ಆಟವಾಡುತ್ತಿದ್ದ ಎರಡೂವರೆ ವರ್ಷದ ಹೆಣ್ಣು ಮಗುವಿನ ಮೇಲೆ ಬೀದಿ ನಾಯಿ ದಾಳಿ ಮಡಿದ ಘಟನೆ ತುಮಕೂರು ಜಿಲ್ಲೆಯ ಹೆಗ್ಗೆರೆಯಲ್ಲಿ ನಡೆದಿದೆ.
ಜಿಇಳೆಯಲ್ಲಿ ಬೀದಿ ನಾಯಿಗಳ ಹಾವಳಿ ಹೆಚ್ಚಾಗುತ್ತಿದ್ದು ಪುಟ್ಟ ಕಂದಮ್ಮಗಳೇ ಟಾರ್ಗೆಟ್ ಆಗಿದೆ.ಮನೆ ಮುಂದೆ ಆಟವಾಡುತ್ತಿರುವಾಗ ಹಲೀಜಾ ಖಾನ್ ಎಂಬ ಎರಡೂವರೆ ವರ್ಷದ ಹೆಣ್ಣು ಮಗು ಬೀದಿ ನಾಯಿಗಳು ದಾಳಿನಡೆಸಿದ್ದು ಬಾಲಕಿಯ ಕಣ್ಣು ಹಾಗೂ ತಲೆ ಭಾಗಕ್ಕೆ ಕಚ್ಚಿ ಗಾಯಗೊಳಿಸಿದೆ.ಬಾಲಕಿಯ ಎಡಗಣ್ಣಿಗೆ ಗಂಭೀರ ಹಾನಿಗೊಂಡಿದ್ದು ತುಮಕೂರು ಆಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ಕೊಡಿಸಿ ಬೆಂಗಳೂರಿಗೆ ಚಿಕಿತ್ಸೆಗೆ ದಾಖಲಿಸಿದ್ದಾರೆ.
ಬೀದಿನಾಯಿಗಳ ಹಾವಳಿಗೆ ಹೆಗ್ಗೆರೆ ಗ್ರಾಮಸ್ಥರು ರೋಸಿ ಹೋಗಿದ್ದು ಶಾಲೆಗೆ ಹೋಗುವಾಗ ಬರುವಾಗ ಹಾಗೂ ಮನೆ ಮುಂದೆ ಆಟವಾಡುವಾಗ ನಾಯಿಗಳ ಹಿಂಡು ದಾಳಿ ಮಾಡುತ್ತಿರುತ್ತದೆ. ಬೀದಿನಾಯಿಗಳ ಸೆರೆಹಿಡಿಯುವಂತೆ ಹಲವು ಬಾರಿ ಹೆಗ್ಗೆರೆ ಗ್ರಾಪಂಗೆ ಮನವಿ ಮಾಡಿದರೂ ಕ್ಯಾರೇ ಅನ್ನದ ಹೆಗ್ಗೆರೆ ಗ್ರಾಪಂ ಹಾಗೂ ಜಿಲ್ಲಾಡಳಿತ ವಿರುದ್ಧ ಗ್ರಾಮಸ್ಥರು ಬೀದಿ ನಾಯಿಗಳನ್ನ ಸೆರೆ ಹಿಡಿದು ಮಹಿಳೆಯರು ಮಕ್ಕಳನ್ನು ರಕ್ಷಿಸಿ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.