ಚಿಕ್ಕಬಳ್ಳಾಪುರ ; ಕಳೆದ ಕೆಲ ದಿನಗಳಿಂದ ರಾಜ್ಯದಲ್ಲಿ ಸುರಿಯುವ ಮಳೆಯಿಂದಾಗಿ ಜನಜೀವನ ಅಸ್ತವ್ಯಸ್ತಗೊಂಡಿದ್ದು ಹಲವು ಬೆಳೆಗಳು ನಾಶವಾಗಿ ಅಲ್ಲಲ್ಲಿ ಕೃತಕ ನೆರೆ ಸೃಷ್ಟಿಯಾಗಿ ಮಳೆನೀರು ಮಳೆಒಳಗ್ಗೆ ನುಗ್ಗಿ ಕೆಲಕಾಲ ಅವಾಂತರ ಸೃಷ್ಟಿಯಾಗಿದೆ.
ಚಿಕ್ಕಬಳ್ಳಾಪುರ ದಲ್ಲಿ ಸುತ್ತಾಮುತ್ತಾ ಸುರಿದ ಧಾರಕಾರ ಮಳೆಯಿಂದಾಗಿ ಕಳೆದ ರಾತ್ರಿ ಕಾಲುವೆ ನೀರಿನಲ್ಲಿ ಹಲವು ಕಾರುಗಳು ಕೊಚ್ಚಿಕೊಂಡು ಹೋದ ಘಟನೆ ತಾಲೂಕಿನ ನಾಗರ್ಜುನಾ ಕಾಲೇಜಿನ ಬಳಿ ನಡೆದಿದೆ. ಎರಡು ಕಾರು ಸಂಪೂರ್ಣ ಮುಳುಗಡೆಯಾಗಿದ್ದು ಕಾಲುವೆ ದಡದಲ್ಲಿ ತಗಲಾಕ್ಕೊಂಡಿದೆ. ಹುರಳಗುರ್ಕಿ ಗ್ರಾಮದ ಕಾರಿನ ಮಾಲೀಕ ಆಸ್ಪತ್ರೆಗೆ ತೆರಳುತ್ತಿದ್ದಾಗ ಭಾರಿ ಮಳೆಗೆ ರಸ್ತೆ ತುಂಬಾ ನೀರು ತುಂಬಿಕೊಂಡ ಪರಿಣಾಮ ಪಕ್ಕದ ಕಾಲುವೆ ಬಿದ್ದಿವೆ.ಅದೃಷ್ಟಾವಷಾತ್ 6 ಜನ ಪ್ರಾಣಾಪಯಾದಿಂದ ಪಾರಗಿದ್ದಾರೆ.
ತಡರಾತ್ರಿ ಸುರಿದ ಭಾರಿ ಮಳೆಗೆ ಸಾಕಷ್ಟು ಅವಾಂತರ ಸೃಷ್ಟಿಯಾಗಿದ್ದು ದೇವನಹಳ್ಳಿ- ಚಿಕ್ಕಬಳ್ಳಾಪುರ ಗಡಿಯಲ್ಲಿ ಹರಿದು ಹೋಗುವ ಕಾಲುವೆಯಲ್ಲಿ ಘಟನೆ ನಡೆದಿದೆ.