Friday, August 28, 2026
Homeರಾಜ್ಯಚಿತ್ರದುರ್ಗ : ಪ್ರೀತಿ‌ ಮಾಡುವಂತೆ ಯುವಕನ ಕಿರುಕುಳಕ್ಕೆ ಬೇಸತ್ತು ಕಾಲೇಜು ಕಟ್ಟಡದ ಮೇಲಿಂದ ಬಿದ್ದು ವಿದ್ಯಾರ್ಥಿನಿ...

ಚಿತ್ರದುರ್ಗ : ಪ್ರೀತಿ‌ ಮಾಡುವಂತೆ ಯುವಕನ ಕಿರುಕುಳಕ್ಕೆ ಬೇಸತ್ತು ಕಾಲೇಜು ಕಟ್ಟಡದ ಮೇಲಿಂದ ಬಿದ್ದು ವಿದ್ಯಾರ್ಥಿನಿ ಆತ್ಮಹತ್ಯೆ..!

ಚಿತ್ರದುರ್ಗ : ಕಾಲೇಜು ಕಟ್ಟಡದ ಮೇಲಿಂದ ಜಿಗಿದು ವಿದ್ಯಾರ್ಥಿನಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಚಿತ್ರದುರ್ಗ ನಗರದ ಚಿತ್ರಾ ಡಾನ್ ಬೋಸ್ಕೋ ಕಾಲೇಜಲ್ಲಿ ನಡೆದಿದೆ.

ಮೃತ ವಿದ್ಯಾರ್ಥಿನಿಯನ್ನು ಚಿತ್ರದುರ್ಗದ ಮೆದೆಹಳ್ಳಿ ನಿವಾಸಿ ಪ್ರಥಮ ಬಿಎಸ್ಸಿಯಾ ಪ್ರೇಮಾ ಎಂದು ತಿಳಿದುಬಂದಿದೆ.

ಪ್ರೀತಿ‌ ಮಾಡುವಂತೆ ಯುವಕನ ಕಿರುಕುಳ ನೀಡುತಿದ್ದ ಹಿನ್ನಲೆ ಯುವಕನ ಕಿರುಕುಳಕ್ಕೆ ಬೇಸತ್ತು ವಿದ್ಯಾರ್ಥಿನಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆಂದು ಮಾಹಿತಿ ದೊರೆತಿದೆ.ವಿದ್ಯಾರ್ಥಿನಿಗೆ ವಾಟ್ಸಪ್ನಲ್ಲಿ ನಿತ್ಯವೂ ಚಾಟಿಂಗ್ ಮಾಡಿ ಕಿರಿಕಿರಿ ಮಾಡುತ್ತಿದ್ದನೆಂದು ವಿದ್ಯಾರ್ಥಿನಿಗೆ ಪ್ರೀತಿ‌ ಮಾಡುವಂತೆ ಪೀಡುಸುತ್ತಿದ್ದಾಗಿ ಪೊಷಕರ ಆರೋಪಿಸಿದ್ದಾರೆ.ತರುಣ್ ಎಂಬ ಹುಡುಗ ಮೆಸೇಜ್ ಕಳಿಸಿ ಟಾರ್ಚರ್ ಕೊಡುತಿದ್ದ ಎಂದು ಪೋಷಕರು ಆರೋಪಿಸಿದ್ದಾರೆ.

ಈ ಬಗ್ಗೆ ಮಾತನಾಡಿದ ಪ್ರೇಮಾಳ ತಂದೆ ಚಾಕು ಫೋಟೋ ಕಳ್ಸಿ ಬೆದರಿಸಿದ್ದಕ್ಕೆ ಹೀಗೆ ಮಾಡಿ ಕೊಂಡಿದಾಳೆ, ನನ್ನ ಮಗಳು ಇನ್ನೋಸೆಂಟ್ ಅವಳ‌ ಮೇಲೆ‌ ಪ್ರಾಣ ಇಟ್ಟಿದ್ದೆ,ನನ್ನ ಹೆಂಡತಿಗೆ ಆಗಿದ್ರೂ ಇಷ್ಟು ನೋವು ಬೀಳ್ತಿರಲಿಲ್ಲ ಆದರೆ ಮಗಳ ಸ್ಥಿತಿ ಕಂಡು ಪ್ರೇಮಾ ತಂದೆ ಸುಧಾಕರ್ ಹೇಳಿದ್ದಾರೆ. ತರುಣ್ ಎಂಬ ಯುವಕನನ್ನು ಪೊಲೀಸರ ವಶಕ್ಕೆ ಪಡೆಡಿದ್ದು ವಿಚಾರಣೆ ನಡೆಸುತ್ತಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

Most Popular