ಮಂಗಳೂರು : ಸಿದ್ದರಾಮಯ್ಯ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಬೇಕು’ ಎಂದು ಕೊಣಾಜೆಯಲ್ಲಿ ನಿವೃತ್ತ ಲೋಕಾಯುಕ್ತ ನ್ಯಾ.ಸಂತೋಷ್ ಹೆಗ್ಡೆ ಹೇಳಿದ್ದಾರೆ.ಅವರು ಮಂಗಳೂರಿಗೆ ಕಾರ್ಯಕ್ರಮದ ನಿಮಿತ್ತ ಆಗಮಿಸಿದ ಸಂದರ್ಭದಲ್ಲಿ ಹೇಳಿಕೆ ನೀಡಿದ್ದಾರೆ.
ಈ ಹಿಂದೆ ರೈಲ್ವೇ ಸಚಿವರಾಗಿದ್ದ ಲಾಲ್ ಬಹದ್ದೂರ್ ಶಾಸ್ತ್ರಿ ಅಪಘಾತ ಮಾಡಿದಾಗ ರಾಜೀನಾಮೆ ಕೊಟ್ಟಿದ್ದರು, ಕೊಡಬೇಕೋ ಕೊಡಬೇಡವೋ ಅನ್ನೋದು ಅವರಿಗೆ ಮತ್ತು ಅಧಿಕಾರಿಗಳಿಗೆ ಬಿಟ್ಟಿದ್ದು ಇಂಥಹ ಗಂಭೀರವಾದ ಆರೋಪಗಳಿರುವಾಗ ರಾಜೀನಾಮೆ ಕೊಡಬೇಕು ಕೊಡದೇ ಇದ್ದರೆ ಕಾನೂನಿನಲ್ಲಿ ಯಾವುದೇ ತಪ್ಪಿಲ್ಲ ಆದರೆ ಸಾರ್ವಜನಿಕರ ದೃಷ್ಟಿಯಲ್ಲಿ ನನಗೆ ಅನಿಸಿದಾಗ ರಾಜೀನಾಮೆ ಕೊಡಬೇಕು,ಈವಾಗ ಅನುಮತಿ ಕೊಟ್ಟಿದ್ದು ಮೂಡಾದ ವಿಚಾರದಲ್ಲಿ ಮಾತ್ರ,ಹೈಕೋರ್ಟ್ ಕೂಡ ಮೇಲ್ನೋಟಕ್ಕೆ ಇದರಲ್ಲಿ ಪುರಾವೆ ಇದೆ ಅಂತ ಹೇಳಿದೆ ,ಆ ಹಿನ್ನೆಲೆಯಲ್ಲಿ ನನಗೆ ಅನಿಸ್ತಾ ಇದೆ ರಾಜೀನಾಮೆ ಕೊಡಬೇಕು ಅಂತ, ಮತ್ತೆ ಅವರಿಗೆ ಬಿಟ್ಟಿದ್ದು
ಯಾವ ತನಿಖಾ ಸಮಿತಿ ಉತ್ತಮ ಅಂತ ಹೇಳಲು ಹೋಗಲ್ಲ ಅದು ಸರ್ಕಾರಕ್ಕೆ ಬಿಟ್ಟ ವಿಚಾರ, ಯಾವುದೇ ತನಿಖಾ ಸಮಿತಿ ವಿಚಾರಣೆ ಮಾಡಬಹುದು,ಅವರು ಆರೋಪಿ ಅಲ್ಲ ಅಂತ ತೀರ್ಪು ಬಂದರೆ ಮತ್ತೆ ಹುದ್ದೆಗೆ ವಾಪಾಸ್ ಬರಬಹುದು ಎಂದು ಹೇಳಿದರು.
ಹೈಕೋರ್ಟ್ ತೀರ್ಪು ಬರೋ ಮೊದಲು ನಾನು ತಪ್ಪೇ ಮಾಡಿಲ್ಲ ಹೇಳಿದ್ರು,ಈಗ ಕೋರ್ಟ್ ಮೇಲ್ನೋಟಕ್ಕೆ ತಪ್ಪು ಕಂಡು ಬಂದಿದೆ ಅಂತಿದೆ,ಹೀಗಾಗಿ ಸದ್ಯ ಅವರು ಹೇಳಿದ್ದು ಸರಿ ಇಲ್ಲ ಅಂತ ಆಯ್ತಲ್ಲ ಎಂದು ಕೊಣಾಜೆ ಮಂಗಳೂರು ವಿಶ್ವವಿದ್ಯಾನಿಲಯದಲ್ಲಿ ಇಂದು ನಡೆದ ಸ್ಥಾಪಕರ ದಿನದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಸಂದಭ೯ ಮಾಧ್ಯಮಗಳ ಜತೆಗೆ ಹೇಳಿಕೆ ನೀಡಿದ್ದಾರೆ.


