ಬಂಟ್ವಾಳ : ಪ್ರಕೃತಿ ಫಲ ನೀಡಿದರೆ ಮಾತ್ರ ಮನುಷ್ಯ ಬದುಕಲು ಸಾಧ್ಯ ಯಾಂತ್ರಿಕ ಬದುಕು ಹೆಚ್ಚಿದಂತೆ ಪಕೃತಿಯ ಮತ್ತು ನಿಸರ್ಗದ ಬಗೆಗಿನ ಹರಿವು ಕಡಿಮೆ ಆಗುತ್ತಿದೆ ಅದರಂತೆಯೇ ರೈತರು ದೇಶದ ಬೆನ್ನೆಲುಬು, ರೈತರು ಸಂತೋಸದಲ್ಲಿದ್ದರೆ ಇಡೀ ಜಗತ್ತೇ ಸಂತೋಷದಲ್ಲಿರುತ್ತದೆ. ಈ ನೆಲದ ಸಂಸ್ಕೃತಿಯು ಬೆಳೆದು ಬಂದಿರುವುದು ಗದ್ದೆಗಳಿಂದ,ತನ್ನ ಎಲ್ಲಾ ಕಷ್ಟ ಸುಖಗಳನ್ನು ಬದಿಗಿಟ್ಟು ಹವಾಮಾನದ ಎಡರು ತೊಡರುಗಳನ್ನು ದಾಟಿ ಎಲ್ಲಾರ ಸುಖವನ್ನು ಬಯಸುವ ರೈತ ಯಾವಾಗಲು ಸುಖವಾಗಿರಬೇಕೆಂದು ದಕ್ಷಿಣ ಕನ್ನಡ ಜಿಲ್ಲೆಯ ಜಿಲ್ಲಾಧಿಕಾರಿ “ಕೆಸರುದ ಕಂಡೊಡು ಕುಸಲ್ದ ಗೊಬ್ಬುಲು” ಕಾರ್ಯಕ್ರಮದಲ್ಲಿ ಭಾಗವಹಿಸಿ ತಮ್ಮ ಹರ್ಷವನ್ನು ವ್ಯಕ್ತಪಡಿಸಿದ್ದಾರೆ.

ಬಂಟವಾಳ ತಾಲೂಕಿನ ಅನಂತಾಡಿ ಗ್ರಾಮದ ನವಭಾರತ್ ಯುವಕರ ಸಂಘದ ವತಿಯಿಂದ ಇಂದು ನಡೆದ 6 ನೇ ವರುಷದ “ಕೆಸರುದ ಕಂಡೊಡು ಕುಸಲ್ದ ಗೊಬ್ಬುಲು” ಎಂಬ ಕಾರ್ಯಕ್ರಮದಲ್ಲಿ ದ.ಕ ಜಿಲ್ಲೆಯ ಜಿಲ್ಲಾಧಿಕಾರಿ ಇಂದು ತಮ್ಮ ಕುಟುಂಬ ಜೊತೆ ಭಾಗವಹಿಸಿ ಜನಸಾಮಾನ್ಯರಂತೆ ಎಲ್ಲರ ಜೊತೆ ಬೆರೆತು ದಿನವನ್ನು ಕೆಸರಿನಲ್ಲಿ ಸಂಭ್ರಮಿಸಿದರು.

ಗ್ರಾಮೀಣ ಕ್ರೀಡೆಗಳನ್ನು ಪ್ರೋತ್ಸಾಹಿಸುವ ಸಲುವಾಗಿ ಯುವಜನರಿಗಾಗಿ ಆಯೋಜಿಸಿದ “ಕೆಸರುದ ಕಂಡೊಡು ಕುಸಲ್ದ ಗೊಬ್ಬುಲು” ಯುವಜನರಿಗೆ ಮನೋರಂಜನೆ ನೀಡುವುದರೊಂದಿಗೆ ರೋಮಾಂಚಕ ಅನುಭವ ನೀಡಲು ಕಾರಣವಾಯಿತು. ಈ ವೇಳೆ ಮಾತನಾಡಿದ ಜಿಲ್ಲಾಧಿಕಾರಿ ಇಂದಿನ ಆಧುನಿಕ ಯುವಜನತೆಗೆ ಸಾಂಪ್ರದಾಯಿಕ ಆಟಗಳ ಪರಿಚಯದೊಂದಿಗೆ ಯುವಜನತೆ ಕೃಷಿಯತ್ತ ಆಕರ್ಷಿಸಲು ಇಂತಹ ಆಟಗಳು ಪೂರಕವಾಗಿವೆ. ಯುವಜನತೆ ನಮ್ಮ ದೇಶದ ಸಂಪತ್ತಾಗಿದ್ದು ಅವರಿಗೆ ಸದಾ ಬೆಂಬಲ ನೀಡುವ ಕೆಲಸ ನಡೆಯಬೇಕು. ಕೃಷಿಯಿಂದ ದೂರ ಹೋಗುತ್ತಿರುವ ಯುವ ಜನತೆಗೆ ಇಂತಹ ಆಟಗಳ ಮೂಲಕ ಸಂಸ್ಕøತಿಯ ಪರಿಚಯ ನೀಡುವುದರೊಂದಗೆ ಒಗ್ಗಟ್ಟು ಪ್ರದರ್ಶಿಸಲು ಹಮ್ಮಿಕೊಂಡಿರುವ ಕಾರ್ಯಕ್ರಮ ಶ್ಲಾಘನೀಯ ಎಂದರು.


ಕಾರ್ಯಕ್ರಮದ ಅಧ್ಯಕ್ಷತೆಯನ್ನು ಅನೀಶ್ ಅಶ್ವತ್ತಾಡಿ, ಧ್ವಜಾರೋಹಣ ಡಾಕ್ಟರ್ ರೂಪಲತಾ ಕೊಂಗಲಾಯಿ,ಸಭಾ ಕಾರ್ಯಕ್ರಮದ ಉದ್ಘಾಟನೆ ರಾಮ್ ಕಿಶನ್ ರೈ,ಕೆಸರುಗದ್ದೆ ಕ್ರೀಡಾಕೂಟದ ಉದ್ಘಾಟನೆ ದಕ್ಷಿಣ ಕನ್ನಡ ಜಿಲ್ಲಾ ನೌಕರಿ ಸಂಘದ ಅಧ್ಯಕ್ಷ ಸಂಜೀವ ಪೂಜಾರಿ ಹಾಗೂ ವಿಠ್ಠಲ ಪೂಜಾರಿ ನೆರೆವೇರಿಸಿದ್ದಾರೆ.ಈ ಸಂದರ್ಭದಲ್ಲಿ ತುಳುನಾಡ ಸಂಸ್ಕೃತಿಯ ಚಾಪೆ,ತೆಂಗಿನಗರಿ,ಬುಟ್ಟಿ ನೆಯ್ಯುವುದು ಹಾಗೂ ಮುಟ್ಟಾಳೆ,ಅಕ್ಕಿಮುಡಿ ಕಟ್ಟುವುದು ಇನ್ನಿತರ ತುಳುನಾಡ ಸಂಸ್ಕೃತಿಯ ಕಾರ್ಯಕ್ರಮವನ್ನು ಯತೀಶ್ ಪೂಂಜಾವ್ ,ವೆಂಕಟೇಶ್ ಮಾಸ್ಟರ್ ನಿರೂಪಿಸಿದರು.


