Friday, July 24, 2026
Homeರಾಜ್ಯಬೆಳಗಾವಿ : ರೋಗಿಯ ಕೈಗೆ ಕೊಳಲು ಕೊಟ್ಟು ಊದಲು ಹೇಳಿ ಮೆದುಳು ಶಸ್ತ್ರ ಚಿಕಿತ್ಸೆ ನಡೆಸಿದ...

ಬೆಳಗಾವಿ : ರೋಗಿಯ ಕೈಗೆ ಕೊಳಲು ಕೊಟ್ಟು ಊದಲು ಹೇಳಿ ಮೆದುಳು ಶಸ್ತ್ರ ಚಿಕಿತ್ಸೆ ನಡೆಸಿದ ವೈದ್ಯರು ..!

ಬೆಳಗಾವಿ : ಜಿಲ್ಲೆಯ ಕನ್ಹೇರಿ ಮಠದ ವೈದ್ಯರಿಂದ ವಿಶೇಷ ಶಸ್ತ್ರಚಿಕಿತ್ಸೆ ನಡೆದಿದೆ ರೋಗಿ ಕೊಳಲುದುವಾಗಲೇ ಮೆದುಳು ಆಪರೇಷನ್ ಮಾಡಿದ್ದೂ ಆಶ್ಚರ್ಯಕರವಾಗಿದೆ. ಕೊಲ್ಲಾಪುರದ ಕನ್ಹೇರಿ ಮಠದ ಸಿದ್ಧಗಿರಿ ಆಸ್ಪತ್ರೆ ವೈದ್ಯರಿಂದ ಯಶಸ್ವಿ ಶಸ್ತ್ರ ಚಿಕಿತ್ಸೆ ನಡೆಸಿದ್ದು ಬ್ರೇನ್ ನಲ್ಲಿ ಬೆಳೆದ ಟ್ಯೂಮರ್‌ ಆಪರೇಷನ್ ಮಾಡಿ ವೈದ್ಯರು ಗೆಡ್ಡೆಯನ್ನು ಹೊರ ತೆಗೆದಿದ್ದಾರೆ.

ಆಸ್ಪತ್ರೆಯ ನರಶಸ್ತ್ರಚಿಕಿತ್ಸಕ ಡಾ. ಶಿವಶಂಕರ್ ಮರಜಕ್ಕೆ ಹಾಗೂ ಅರವಳಿಗೆ ತಜ್ಞ ಪ್ರಕಾಶ ಭರಮಗೌಡರಿಂದ ಯಶಸ್ವಿ ಶಸ್ತ್ರಚಿಕಿತ್ಸೆ ನಡೆಸಿದ್ದು ಸುಮಾರು 5 ಗಂಟೆಗಳ ಕಾಲ ನಡೆದ ಶಸ್ತ್ರಚಿಕಿತ್ಸೆ ಸಂಪೂರ್ಣ ಯಶಸ್ವಿಯಾಗಿದೆ. ಇಸ್ರೇಲ್ ದಿಂದ ಬಂದಿದ್ದ ರೈತನಿಗೆ ಯಶಸ್ವಿ ಶಸ್ತ್ರಚಿಕಿತ್ಸೆ ನಡೆಸಿದ್ದು ಅವೇಕ್ ಕ್ರೇನಿಯೊಟಮಿ ಶಸ್ತ್ರಚಿಕಿತ್ಸೆಗೆ ಸಿದ್ದಗಿರಿ ಆಸ್ಪತ್ರೆ ಹೆಸರುವಾಸಿಯಾಗಿದೆ. ಈ ಹಿಂದೆ ವೈದ್ಯರು ಐಸ್ ಕ್ರೀಮ್ ಕೊಟ್ಟು ರೋಗಿಗೆ ಆಪರೇಷನ್ ಮಾಡಿದ್ದರು,ಈವರೆಗೂ ವೈದ್ಯರ ತಂಡ ಒಟ್ಟು 103 ಮೆದುಳು ಶಸ್ತ್ರ‌ಚಿಕಿತ್ಸೆ ಮಾಡಿದ್ದೂ ಗೆಡ್ಡೆ ಬೆಳೆದ ಜಾಗದ ಪಕ್ಕದಲ್ಲಿ ಮಾತ್ರ ಅರಿವಳಿಕೆ ನೀಡಿ ಆಪರೇಷನ್ ಮಾಡುತ್ತಿರುವುದು ವಿಶೇಷ.

ಆಸ್ಪತ್ರೆ ಸಂಪೂರ್ಣ ವೆಚ್ಚದಲ್ಲಿ ಸೇರಿ ಕೇವಲ 1ಲಕ್ಷ ೨೦ ಸಾವಿರ ರೂಪಾಯಿಯಲ್ಲಿ ಶಸ್ತ್ರಚಿಕಿತ್ಸೆ ನಡೆಸಿದ್ದು ಈ ಬಗ್ಗೆ ಡಾ ಶಿವಶಂಕರ್ ಮರಜಕ್ಕೆ ಬೆಳಗಾವಿಯ ಕನ್ನಡ ಸಾಹಿತ್ಯ ಭವನದಲ್ಲಿ ಸುದ್ಧಿಗೋಷ್ಠಿ ನಡೆಸಿ ಮಾಹಿತಿ ನೀಡಿದ್ದಾರೆ .ವೈದ್ಯರ ಸಾಧನೆಗೆ ಅದೃಶ್ಯ ಕಾಡಸಿದ್ದೇಶ್ವರ ಸ್ವಾಮೀಜಿ ಶ್ಲಾಘಿಸಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

Most Popular