Thursday, July 23, 2026
Homeಜಿಲ್ಲೆಮಂಗಳೂರು : ಸ್ಕೂಟರ್ ಗೆ ಟ್ಯಾಂಕರ್ ಡಿಕ್ಕಿ : ಪತ್ನಿ ಸ್ಥಳದಲ್ಲೇ ಸಾವು, ಪತಿ ಪ್ರಾಣಾಪಾಯದಿಂದ...

ಮಂಗಳೂರು : ಸ್ಕೂಟರ್ ಗೆ ಟ್ಯಾಂಕರ್ ಡಿಕ್ಕಿ : ಪತ್ನಿ ಸ್ಥಳದಲ್ಲೇ ಸಾವು, ಪತಿ ಪ್ರಾಣಾಪಾಯದಿಂದ ಪಾರು ..!

ಮಂಗಳೂರು : ಜಿಲ್ಲೆಯಲ್ಲಿ ರಾಷ್ಟ್ರೀಯ ಹೆದ್ದಾರಿ ನಂತೂರ್,ಕೆ.ಪಿ.ಟಿ ಹಾಗೂ ಸುರತ್ಕಲ್ ಸಂಪರ್ಕಿಸುವ ರಸ್ತೆ ಹದಗೆಟ್ಟಿದ್ದು ಅಪಘಾತದಲ್ಲಿ ಹಲವಾರು ಜನ ಸಾವನ್ನಪ್ಪಿದ್ದಾರೆ.ದಿನನಿತ್ಯ ಹಲವು ಬೈಕ್ ಸವಾರರು ಅಪಘಾತಕ್ಕೆ ಒಳಗಾಗುತ್ತಿದ್ದು ಜಿಲ್ಲಾಡಳಿತ ಯಾವುದೇ ಬಗೆಯ ಕ್ರಮ ಕೈಗೊಳ್ಳದೇ ಇರುವುದು ಒಂದು ವಿಪರ್ಯಾಸವಾಗಿದೆ.

ನಿನ್ನೆ ಸಂಜೆ ಕೂಳೂರು ಸೇತುವೆ ಬಳಿ ನಡೆದ ಅಪಘಾತದಲ್ಲಿ ಸಹಸವಾರೆ ಮೃತಪಟ್ಟಗಟನೆ ವರದಿಯಾಗಿದೆ.ಮೃತರನ್ನು ಸುರತ್ಕಲ್ ನಿವಾಸಿ ಶಕೀಲ್ ಸುವರ್ಣ ರವರ ಪತ್ನಿ ಲಾವಣ್ಯ(೨೭) ಎಂದು ಗುರುತಿಸಲಾಗಿದೆ.

ಪಣಂಬೂರಿಂದ ಕಾವೂರು ಕಡೆಗೆ ನಿನ್ನೆ ಸಂಜೆ ಸುಮಾರು 4 ಗಂಟೆಗೆ ಪತಿಜೊತೆ ದ್ವಿಚಕ್ರದಲ್ಲಿ ಪ್ರಯಾಣಿಸುತ್ತಿರುವ ವೇಳೆ ಕೂಳೂರು ಸೇತುವೆಯಲ್ಲಿ ಅತಿ ವೇಗದಿಂದ ಬಂದ ಕಂಟೈನರ್ ಲಾರಿಯೊಂದು ಬಲಭಾಗದಿಂದ ಎಡಭಾಗಕ್ಕೆ ಏಕಾಏಕಿ ಚಲಾಹಿಸಿದ್ದು ಎಡ ಬದಿಯಲ್ಲಿ ಚಲಾಹಿಸುತಿದ್ದ ಸ್ಕೂಟರ್ ಗೆ ಡಿಕ್ಕಿ ಹೊಡೆದಿದೆ ಪರಿಣಾಮ ಲಾರಿಯ ಹಿಂಬದಿಯ ಚಕ್ರಕ್ಕೆ ಸಹಸವರೇ ಲಾವಣ್ಯ ಸಿಲುಕಿದ್ದು ಚಕ್ರ ತಲೆಯಮೇಲೆ ಹರಿದ ಪರಿಣಾಮ ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ.ಪತಿ ಬಲ ಬದಿಗೆ ಬಿದ್ದಿದ್ದು ಸಣ್ಣಪುಟ್ಟ ಗಾಯಗಳಿಂದ ಪಾರಾಗಿದ್ದಾರೆ.

ಸ್ಥಳಕ್ಕೆ ಸುರತ್ಕಲ್ ಸಂಚಾರಿ ಪೊಲೀಸರು ಭೇಟಿನೀಡಿದ್ದು ಪರಿಶೀಲನೆ ನಡೆಸಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

Most Popular