Thursday, July 23, 2026
Homeಜಿಲ್ಲೆಉಡುಪಿ : ಪೊಲೀಸ್ ಸಿಬ್ಬಂದಿ ನಿತ್ಯಾನಂದ ಶೆಟ್ಟಿ ಹೃದಯಾಘಾತದಿಂದ ನಿಧನ.!

ಉಡುಪಿ : ಪೊಲೀಸ್ ಸಿಬ್ಬಂದಿ ನಿತ್ಯಾನಂದ ಶೆಟ್ಟಿ ಹೃದಯಾಘಾತದಿಂದ ನಿಧನ.!

ಉಡುಪಿ : ಉಡುಪಿ ಪೊಲೀಸ್‌ನ ವೈರ್‌ಲೆಸ್ ವಿಭಾಗದ 52 ವರ್ಷದ ಪೊಲೀಸ್ ಸಿಬ್ಬಂದಿ ನಿತ್ಯಾನಂದ ಶೆಟ್ಟಿ ಅವರು ಸೆ.17ರ ಮಂಗಳವಾರ ಬೆಳಗ್ಗೆ ಹೃದಯಾಘಾತದಿಂದ ಇಹಲೋಕ ತ್ಯಜಿಸಿದ್ದಾರೆ.

ನಿತ್ಯಾನಂದ ಶೆಟ್ಟಿ ಅವರು ಕಳೆದ ನಾಲ್ಕು ವರ್ಷಗಳಿಂದ ಉಡುಪಿ ಜಿಲ್ಲಾ ಪೊಲೀಸ್‌ನ ವೈರ್‌ಲೆಸ್ ವಿಭಾಗದಲ್ಲಿ ಸೇವೆ ಸಲ್ಲಿಸುತ್ತಿದ್ದರು.ಇದಕ್ಕೂ ಮುನ್ನ ಅವರು ಮಲ್ಪೆಯಲ್ಲಿ ಕರಾವಳಿ ಭದ್ರತಾ ಪಡೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದರು. ರಾತ್ರಿ ಪಾಳಿ ಮುಗಿಸಿ ಮನೆಗೆ ತೆರಳಿದ್ದಾಗ ಈ ಈ ಘಟನೆ ಸಂಭವಿಸಿದೆ.ಅವರು ಕುಟುಂಬ ಹಾಗೂ ಅಪಾರ ಬಂಧುಮಿತ್ರರನ್ನು ಅಗಲಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

Most Popular