ಮಂಗಳೂರು : ಈ ಬಾರಿ ಸುರಿದ ಮಳೆಗೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಹಲವು ಸಾವುನೋವು ಸಂಭವಿಸಿದ ಘಟನೆ ನಡೆದಿದ್ದು ಎಲ್ಲಾರಿಗೆ ತಿಳಿದ ವಿಚಾರ ಆದರೆ ಮಂಗಳೂರಿನ ಹೃದಯಭಾಗದಲ್ಲಿರುವ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಪಡೀಲ್‌ನ ಫಸ್ಟ್ ನ್ಯೂರೋ ಆಸ್ಪತ್ರೆಯ ಸಮೀಪದ ಗುಡ್ಡವೊಂದು ಕುಸಿಯುವ ಆತಂಕದಲ್ಲಿದ್ದು, ಗುಡ್ಡದ ಮೇಲಿನ ನಿವಾಸಿಗಳು ಆತಂಕಗೊಂಡಿದ್ದಾರೆ.


ಪಡೀಲ್‌ನ ಕೊಡಕ್ಕಲ್ ಎಂಬ ಪ್ರದೇಶದ ಇದಾಗಿದ್ದು, ಗುಡ್ಡದ ಮೇಲೆ ಸುಮಾರು 40 ಕ್ಕೂ ಹೆಚ್ಚು ಕುಟುಂಬಗಳು ವಾಸವಾಗಿದ್ದಾರೆ. ಇನ್ನು ಗುಡ್ಡದ ಬುಡದಲ್ಲೇ ಅಂಗಡಿ ಮಳಿಗೆಗಳು ಹಾಗೂ ಮನೆಗಳಿದ್ದು, ಇದೂ ಕೂಡಾ ಅಪಾಯದ ಅಂಚಿನಲ್ಲಿದೆ. ಈಗಾಗಲೇ ಗುಡ್ಡ ಸ್ವಲ್ಪ ಕುಸಿತ ಉಂಟಾಗಿದ್ದು, ಗುಡ್ಡದ ಅಂಚಿನಲ್ಲಿರೋ ಟಾಯ್ಲೆಟ್ ಒಂದು ಆಗಲೋ ಈಗಲೋ ಅನ್ನೋ ಸ್ಥಿತಿಯಲ್ಲಿ ಇದೆ. ಒಮ್ಮೆ ಇಲ್ಲಿ ಗುಡ್ಡ ಕುಸಿತ ಉಂಟಾದ್ರೆ ಭಾರಿ ಪ್ರಮಾಣದ ಅನಾಹುತ ಉಂಟಾಗುವ ಸಾದ್ಯತೆ ಇದೆ. ಮಳೆ ಇನ್ನೂ ದೂರವಾಗಿಲ್ಲದ ಕಾರಣ ಗುಡ್ಡ ಕುಸಿತದ ಆತಂಕ ಕೂಡಾ ದೂರವಾಗಿಲ್ಲ. ಮಳೆಗಾಲವನ್ನು ಆತಂಕದಲ್ಲೇ ಕಳೆದಿದ್ದ ಇಲ್ಲಿನ ನಿವಾಸಿಗಳು ಇದೀಗ ಮಳೆಯ ಭಯ ಕಾಡಲು ಆರಂಭವಾಗಿದೆ. ಗುಡ್ಡದ ಕೆಳ ಪ್ರದೇಶದ ಜಮೀನು ಹೆದ್ದಾರಿಗೆ ಹೊಂದಿಕೊಂಡಿರುವ ಜಮೀನು ಮಾಲೀಕರು ಬಹಳಷ್ಟು ವರ್ಷದ ಹಿಂದೆಯೇ ಗುಡ್ಡ ಅಗೆತ ಮಾಡಿದ್ದರು ಎಂದು ತಿಳಿದುಬಂದಿದೆ .
ಈ ಬಗ್ಗೆ ಮುಂದೆ ಮುಂಜಾಗೃತೆ ವಹಿಸದಿದ್ದರೆ ವಯನಾಡು ರೀತಿಯಲ್ಲಿ ಗುಡ್ಡ ಕುಸಿತವಾಗುವುದರಲ್ಲಿ ಯಾವುದೇ ಸಂದೇಹವಿಲ್ಲ ಎಂದು ಹಿರಿಯನಾಗರೀಕರು ತಿಳಿಸಿದ್ದಾರೆ. ಆದರೆ ಸರಿಯಾದ ರೀತಿಯಲ್ಲಿ ಗುಡ್ಡ ಕಟ್ಟ್ ಮಾಡದೆ 85 ಡಿಗ್ರಿಯಲ್ಲಿ ಮಣ್ಣು ತೆಗೆದಿರುವುದೇ ಸದ್ಯದ ಗುಡ್ಡ ಕುಸಿಯುವ ಆತಂಕಕ್ಕೆ ಕಾರಣವಾಗಿದೆ. ಈ ಬಗ್ಗೆ ಜಿಲ್ಲಾಡಳಿತವ ಹೆಚ್ಚೆತ್ತು ಯಾವುದೇ ಮುಂಜಾಗ್ರತ ಕ್ರಮವಿಲ್ಲದೆ ಅಕ್ರಮವಾಗಿ ಮಣ್ಣುತೆಗೆದವರ ವಿರುದ್ಧ ಕ್ರಮಕೈಗೊಳ್ಳಬೇಕೆಂದು ಸ್ಥಳೀಯರು ಅಗ್ರಹಿಸಿದ್ದಾರೆ.


