Friday, March 13, 2026
Flats for sale
Homeಜಿಲ್ಲೆಮಂಗಳೂರು : ರಸ್ತೆ ಮಧ್ಯೆ ಖಾಸಗಿ ಬಸ್ ಕಂಡಕ್ಟರ್‌ಗಳ ಹೊಡೆದಾಟ,ವಿಡಿಯೋ ವೈರಲ್ ; ಇಬ್ಬರ ಬಂಧನ...

ಮಂಗಳೂರು : ರಸ್ತೆ ಮಧ್ಯೆ ಖಾಸಗಿ ಬಸ್ ಕಂಡಕ್ಟರ್‌ಗಳ ಹೊಡೆದಾಟ,ವಿಡಿಯೋ ವೈರಲ್ ; ಇಬ್ಬರ ಬಂಧನ ..!

ಮಂಗಳೂರು : ಬಸ್ಸಿನ ಟೈಮಿಂಗ್ ವಿಚಾರದಲ್ಲಿ ಎರಡು ಖಾಸಗಿ ಬಸ್‌ಗಳ ಕಂಡಕ್ಟರ್‌ಗಳ ನಡುವೆ ನಡೆದ ಬೀದಿ ಜಗಳ ಸೆಪ್ಟೆಂಬರ್ 4 ರಂದು ತೊಕ್ಕೋಟು ಮೇಲ್ಸೇತುವೆಯಲ್ಲಿ ನಡೆದಿತ್ತು ಇದರ ವಿಡಿಯೋ ವೈರಲ್ ಆಗಿದ್ದು ಸಾಮಾಜಿಕಜಾಲತಾಣದಲ್ಲಿ ಭಾರಿ ಆಕ್ರೋಶಕ್ಕೆ ಕಾರಣವಾಗಿತ್ತು.

ತಲಪಾಡಿ-ಮಂಗಳೂರು ನಡುವೆ ಸಂಚರಿಸುವ ಪದ್ಮಾ ಟ್ರಾವೆಲ್ಸ್ ಮತ್ತು ಪಿಟಿಸಿ ಟ್ರಾವೆಲ್ಸ್ ನಿರ್ವಾಹಕರ ನಡುವೆ ವಾಗ್ವಾದ ನಡೆದಿದ್ದು ರಸ್ತೆ ಮದ್ಯೆ ಬಸ್ಸನ್ನು ನಿಲ್ಲಿಸಿ ಜಗಳವಾಡಿದ ಪದ್ಮಾ ಬಸ್ಸಿನ ಕಂಡಕ್ಟರ್‌ ಹಾಗೂ ಪಿಟಿಸಿ ಟ್ರಾವೆಲ್ಸ್‌ನ ಅಜಯ್ ರನ್ನು ಪೊಲೀಸರು ಬಂಧಿಸಿದ್ದಾರೆ.

ಈ ಹೊಡೆದಾಟದಿಂದ ಬಸ್‌ನಲ್ಲಿದ್ದ ಮಹಿಳಾ ಪ್ರಯಾಣಿಕರಿಗೆ ತೊಂದರೆಉಂಟಾಗಿದ್ದು ಬಳಿಕ ಸ್ಥಳೀಯ ಆಟೋ ರಿಕ್ಷಾ ಚಾಲಕರು ಮಧ್ಯಪ್ರವೇಶಿಸಿ ವಾಗ್ವಾದವನ್ನು ನಿಲ್ಲಿಸಿದ್ದಾರೆಂದು ತಿಳಿದುಬಂದಿದೆ. ಈ ಬಗ್ಗೆ ಸಿಆರ್ ನಂ.163/2024, ಯುಎಸ್ 194(2) ಬಿಎನ್ಎಸ್ ಅಡಿಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರೆದಿದೆ. ಇಬ್ಬರೂ ಆರೋಪಿಗಳ ವಿರುದ್ಧ ಮುಂಜಾಗ್ರತಾ ಪ್ರಕರಣಗಳನ್ನೂ ದಾಖಲಿಸಲಾಗಿದೆ.

RELATED ARTICLES

LEAVE A REPLY

Please enter your comment!
Please enter your name here

Most Popular