ಬೆಂಗಳೂರು : ಶ್ರೀಕೃಷ್ಣ ಜನ್ಮಾಷ್ಠಮಿ ದಿನದಂದು ಕಿಡಿಗೇಡಿಗಳು ಹಸುವಿನ ಹೊಟ್ಟೆ, ಬೆನ್ನು, ಮೂಗಿನ ಮೇಲೆ ಆ್ಯಸಿಡ್ ಮತ್ತು ಕಾದ ಎಣ್ಣೆ ಸುರಿದ ಘಟನೆ ಕೋಲಾರ ಚಿಕ್ಕಬಳ್ಳಾಪುರ ರಸ್ತೆಯ ರೆಹಮತ್ ನಗರದಲ್ಲಿ ನಡೆದಿದೆ.
ಅದರ ಪಾಡಿಗೆ ಯಾರಿಗೂ ತೊಂದರೆ ಕೊಡದೆ, ರಸ್ತೆಯಲ್ಲಿ ಹೋಗುತ್ತಿದ್ದ ಹಸುವಿನ ಮೇಲೆ ಕಿಡಿಗೇಡಿಗಳು ಆ್ಯಸಿಡ್ ಮತ್ತು ಕಾದ ಎಣ್ಣೆ ಸುರಿದಿದ್ದಾರೆ.ಇದರಿಂದ, ಹಸುವಿನ ಮೇಲಿನ ಚರ್ಮ ಸುಲಿದಿದೆ.ಹಸು ರೋದಿಸಿದ್ದು, ರಸ್ತೆ ತುಂಬೆಲ್ಲ ರಕ್ತ ಹರಡಿದೆ. ಮೂಕ ಪ್ರಾಣಿಯ ಆಕ್ರಂದನ ಮುಗಿಲು ಮುಟ್ಟಿದ್ದು ಇಂತಹ ಕೆಲಸ ಮಾಡಿದ ಕಿಡಿಗೇಡಿಗಳನ್ನು ಸದೆಬಡಿಯಲು ಸ್ಥಳೀಯ ನಿವಾಸಿಗಳು ಕಾದುಕುಳಿತಿದ್ದಿದ್ದಾರೆ.
ಗಾಯಗೊಂಡು ನರಳಾಡುತ್ತಿರುವ ಹಸುಗಳನ್ನು ಕಂಡು ಸ್ಥಳೀಯರು ಮರುಗಿದರು. ಹಸುಗಳನ್ನು ಈ ರೀತಿ ಚಿತ್ರಹಿಂಸೆ ಮಾಡಿದವರ ವಿರುದ್ಧ ಕ್ರಮ ಕೈಗೊಳ್ಳುವಂತೆ ಭಜರಂಗದಳ ಕಾರ್ಯಕರ್ತರು ಗಲ್ಪೇಟೆ ಠಾಣೆಯಲ್ಲಿ ದೂರು ದಾಖಲಸಿದ್ದಾರೆ. ಗಾಯಗೊಂಡ ಹಸುವನ್ನು ಪತ್ತೆ ಹಚ್ಚಿ ಚಿಕಿತ್ಸೆ ಕೊಡಿಸುವಂತೆ ಮನವಿ ಮಾಡಿದ್ದು ಪ್ರಾಣಿದಯಾಸಂಘದ ಸದಸ್ಯರು ಭೇಟಿನೀಡಿ ದುಸ್ಕರ್ಮಿಗಳನ್ನು ಪತ್ತೆಹಚ್ಚಿ ಬಂಧಿಸುವಂತೆ ಒತ್ತಾಯಿಸಿದ್ದಾರೆ.


