ಬೆಳಗಾವಿ : ಕಣ್ಣಿನ ಆಪರೇಷನ್ ಗೆ ಗೃಹಲಕ್ಷ್ಮಿ ಹಣವನ್ನು ಬಳಕೆಮಾಡಿದ ಘಟನೆ ವರದಿಯಾಗಿದೆ. ಕಾಂಗ್ರೆಸ್ ಸರ್ಕಾರದ ಗೃಹಲಕ್ಷ್ಮಿ ಹಣದಿಂದ ಮಹಿಳೆಯೊಬ್ಬರು ಪತಿಯ ಕಣ್ಣಿನ ಆಪರೇಷನ್ ಮಾಡಿಸಿದ ಘಟನೆ ಬೆಳಗಾವಿಯ ಅನಗೋಳ ನಗರದಲ್ಲಿ ನಡೆದಿದೆ.
ಅನಿತಾ ಎಂಬ ಮಹಿಳೆಯ ಪತಿ ಚಂದ್ರಶೇಖರ್ ದೃಷ್ಟಿದೋಷದಿಂದ ಬಳಲುತ್ತಿದ್ದು ವೈದ್ಯರು ಆಪರೇಷನ್ ಮಾಡಿಸಲು ತಿಳಿಸಿದ್ದರು. ಗೃಹಲಕ್ಷ್ಮಿಯಿಂದ ಬಂದ 18 ಸಾವಿರ ಹಣ ಹಾಗೂ ತನ್ನ ಬಳಿ ಇದ್ದ 10 ಸಾವಿರ ಹಣ ಸೇರಿಸಿ ಪತಿ ಚಂದ್ರಶೇಖರ್ ಅವರ ಕಣ್ಣಿನ ಆಪರೇಷನ್ ಮಾಡಿಸಿದ್ದಾರೆ.ಪತಿಯ ಕಣ್ಣಿನ ಆಪರೇಷನ್ಗೆ ಗೃಹಲಕ್ಷ್ಮಿ ಹಣ ನೆರವಾಗಿದ್ದಕ್ಕೆ ದಂಪತಿಗಳು ವಿಡಿಯೋ ಮಾಡಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಅವರಿಗೆ ಧನ್ಯವಾದ ತಿಳಿಸಿ ಸಂತಸ ವ್ಯಕ್ತಪಡಿಸಿದ್ದಾರೆ.


