Friday, November 22, 2024
Flats for sale
Homeಜಿಲ್ಲೆಪುತ್ತೂರು : ಲೈಂಗಿಕ ದೌರ್ಜನ್ಯ ಪ್ರಕರಣ : ಬಿಜೆಪಿ ನಾಯಕ ಅರುಣ್ ಕುಮಾರ್ ಪುತ್ತಿಲ ವಿರುದ್ಧ...

ಪುತ್ತೂರು : ಲೈಂಗಿಕ ದೌರ್ಜನ್ಯ ಪ್ರಕರಣ : ಬಿಜೆಪಿ ನಾಯಕ ಅರುಣ್ ಕುಮಾರ್ ಪುತ್ತಿಲ ವಿರುದ್ಧ FIR ದಾಖಲು.

ಪುತ್ತೂರು : 47 ವರ್ಷದ ಮಹಿಳೆ ಬೆಂಗಳೂರಿನ ಪೈ ವಿಸ್ತಾ ಹೋಟೆಲ್ ನಲ್ಲಿ ಜೂನ್ 2023 ರಂದು ಲೈಂಗಿಕ ದೌರ್ಜನ್ಯ ನಡೆದಿದೆ ಎಂದು ಮಹಿಳೆ ಆರೋಪಿಸಿದ್ದು,ಅರುಣ್ ಕುಮಾರ್ ಪುತ್ತಿಲ ದೌರ್ಜನ್ಯದ ಫೋಟೊ, ಸೆಲ್ಫಿ, ವಿಡಿಯೋ ಮಾಡಿ ಬ್ಲಾಕ್ ಮೇಲ್ ಮಾಡಿದ್ದಾರೆಂದು ಆರೋಪಿಸಲಾಗಿದ್ದು ಅರುಣ್ ಪುತ್ತಿಲ ವಿರುದ್ಧ IPC 417, 354A, 506 ಅಡಿಯಲ್ಲಿ ಪ್ರಕರಣ ದಾಖಲಾಗಿದೆ.

ಬಿಜೆಪಿ ಯಲ್ಲಿ ಅರುಣ್ ಕುಮಾರ್ ಪುತ್ತಿಲ ವಿರುದ್ಧ ರಣತಂತ್ರ ನಡೆದಿದ್ದು ಸ್ಥಳೀಯ ನಾಯಕರು ಇದಕ್ಕೆ ಕುಮ್ಮಕ್ಕು ನೀಡಿದ್ದಾರೆಂದು ಮಾಹಿತಿ ದೊರೆತಿದೆ .ಕಳೆದ ಬಾರಿ ವಿಧಾನ ಸಭಾ ಚುನಾವಣೆಯಲ್ಲಿ ಪ್ರಬಲ ನಾಯಕ ಅರುಣ್ ಕುಮಾರ್ ಪುತ್ತಿಲ ರನ್ನು ಮಣಿಸಲು ಪುತ್ತೂರು ಬಿಜೆಪಿ ಸದಾನಂದ ಗೌಡರ ಆಪ್ತನಿಗೆ ಟಿಕೆಟ್ ನೀಡಿ ಡಮ್ಮಿ ಅಭ್ಯರ್ಥಿಯನ್ನು ನಿಲ್ಲಿಸಿ ಬಿಜೆಪಿ ಯಾ ಎಲ್ಲಾ ಕಾರ್ಯಕರ್ತರು ಬಿಜೆಪಿ ಯಾ ವಿರುದ್ಧ ಅಶೋಕ್ ರೈ ಗೆ ಮತಚಲಾಯಿಸಿದ್ದರು . ಆದರೆ ಸಂಘಪರಿವಾರದ ನಿಷ್ಠಾವಂತ ಕಾರ್ಯಕರ್ತನಿಗೆ ಬಿಜೆಪಿ ಬೆಂಬಲ ನೀಡದೆ ಇರುವುದರಿಂದ ಸೋಲುಂಡಲಾಯಿತೆಂದು ಪುತ್ತಿಲ ತಿಳಿಸಿದ್ದರು ಆದರೆ ಪುತ್ತಿಲ ಬಿಜೆಪಿ ಸೇರಿದ ನಂತರ ಉಳಿದ ಬಿಜೆಪಿಯ ಕಾರ್ಯಕರ್ತರಿಗೆ ಉರಿಉಂಟಾಗಿದ್ದು ಇದೀಗ ಪುತ್ತಿಲ ಮೇಲೆ ಹೆಣ್ಣಾಸ್ತ್ರ ಪ್ರಯೋಗಿಸಿದ್ದಾರೆಂದು ಪುತ್ತಿಲ ಜೊತೆ ಇರುವ ಕಾರ್ಯಕರ್ತರ ಮಾತು. ಪುತ್ತಿಲ ಅವರ ಪ್ರಖ್ಯಾತಿ ಮತ್ತು ಹಿಂದುತ್ವದ ಪ್ರತಿಪಾದನೆಗೆ ಮಹಿಳೆ ಫಿದಾ ಆಗಿದ್ದರು. ಪುತ್ತಿಲಗೆ ಅಭಿಮಾನಿ ಆಗಿ ಸಾಮಾಜಿಕ ಜಾಲತಾಣದಲ್ಲಿ ಫಾಲೋ ಮಾಡಿದ್ದಾಗಿ ದೂರಿನಲ್ಲಿ ಉಲ್ಲೇಖಿಸಲಾಗಿದೆ.

ಈ ಬಗ್ಗೆ ನಳೀನ್ ಮತ್ತು ತಂಡ ಪುತ್ತಿಲ ವಿರುದ್ಧ ಪಕ್ಷ ಸೇರದಂತೆ ಹಲವು ಸಂಚು ರೂಪಿಸಿರುವುದು ಸಹ ಎಲ್ಲರಿಗೂ ತಿಳಿದ ವಿಚಾರ . ಪುತ್ತಿಲ ಅವರ ಪ್ರಖ್ಯಾತಿ ಮತ್ತು ಹಿಂದುತ್ವದ ಪ್ರತಿಪಾದನೆಯಿಂದ ಮಹಿಳೆ ಅಭಿಮಾನಿಯಾಗಿದ್ದರು. ಪುತ್ತಿಲಗೆ ಅಭಿಮಾನಿ ಆಗಿ ಸಾಮಾಜಿಕ ಜಾಲತಾಣದಲ್ಲಿ ಫಾಲೋ ಮಾಡುತ್ತಿದ್ದರು. ಜೊತೆಗೆ ಪುತ್ತಿಲಗೆ ನೈತಿಕ ಬೆಂಬಲವನ್ನೂ ನೀಡುತ್ತಿದ್ದರು. ಬಳಿಕ ಪರಿಚಯವಾದ ಮೇಲೆ ಪುತ್ತಿಲ ಅವರು 2023ರ ಜೂನ್‌ನಲ್ಲಿ ಬೆಂಗಳೂರಿನ ಖಾಸಗಿ ಹೋಟೆಲ್‌ಗೆ ಕರೆಸಿಕೊಂಡು ಆತ್ಮಹತ್ಯೆ ಮಾಡಿಕೊಳ್ಳುತ್ತೇನೆಂದು ಬೆದರಿಸಿದ್ದಾರೆ. ಬಳಿಕ ದೂರುದಾರರ ಇಚ್ಛೆಗೆ ವಿರುದ್ಧವಾಗಿ ಲೈಂಗಿಕ ದೌರ್ಜನ್ಯ ಎಸಗಿರುವುದಾಗಿ ದೂರಿನಲ್ಲಿ ಉಲ್ಲೇಖವಾಗಿದೆ. ಒಟ್ಟಿನಲ್ಲಿ ಪಕ್ಷದಲ್ಲಿನ ವೈರಿಗಳಿಂದ ಅರುಣ್ ಕುಮಾರ್ ಪುತ್ತಿಲರಿಗೆ ಅಪಾಯ ಕಟ್ಟಿಟ್ಟ ಬುತ್ತಿಯಂತಾಗಿದೆ.

ನನ್ನನ್ನು ಸಂಪೂರ್ಣವಾಗಿ ಶೋಷಣೆಗೆ ಒಳಪಡಿಸಿ ಅವರ ಆಸೆ ತೀರಿಸಿಕೊಂಡು ನನ್ನನ್ನು ದೂರ ಮಾಡಿದರು. ಆ ಭಯದಿಂದ ನನ್ನ ನಿವಾಸವನ್ನು ಪುತ್ತೂರಿಗೆ ಸ್ಥಳಾಂತರಿಸಿ ಬಾಡಿಗೆ ಮನೆಯಲ್ಲಿ ನನ್ನ ಮಗಳೊಂದಿಗೆ ಉದ್ಯೋಗ ಹಾಗೂ ವರಮಾನವಿಲ್ಲದೇ ಕಷ್ಟಪಡುತ್ತಿದ್ದೇನೆ. ನನಗೆ ಮತ್ತು ನನ್ನ ಮಗಳಿಗೆ ಪುತ್ತಿಲರು ಮಾಡಿದ ದ್ರೋಹ, ಅನ್ಯಾಯ, ಅಕ್ರಮ ವಿಶ್ವಾಸ ದ್ರೋಹಕ್ಕೆ ಕಾನೂನು ಕ್ರಮ ಕೈಗೊಂಡು ನನಗೆ ಮತ್ತು ನನ್ನ ಮಗಳಿಗೆ ನ್ಯಾಯ ದೊರಕಿಸಿಕೊಡಬೇಕೆಂದು ವಿನಂತಿಸಿಕೊಳ್ಳುತ್ತೇನೆ ಎಂದು ದೂರಿನಲ್ಲಿ ಮನವಿ ಮಾಡಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

Most Popular