ಹೊನ್ನಾಳಿ : ಮಧ್ಯ ಕರ್ನಾಟಕ ಐತಿಹಾಸಿಕ ಹಾಗೂ ಪುರಾಣ ಪ್ರಸಿದ್ದಿ ಪಡೆದಿರುವ ಶ್ರೀ ಚನ್ನಪ್ಪಸ್ವಾಮಿ ಮಹಾ ರಥೋತ್ಸವ ಶುಕ್ರವಾರ ಸಾವಿರಾರು ಸದ್ಭಕ್ತರ ಸಮುಖದಲ್ಲಿ ಅದ್ದೂರಿಯಾಗಿ ನೆರವೇರಿತು.
ಅರೆ ಮಲೆನಾಡು ಎಂದು ಕರೆಸಿಕೊಳ್ಳುವ ಹೊನ್ನಾಳಿ ಪಟ್ಟಣದ ಪುರಾಣ ಇತಿಹಾಸ ಪ್ರಸಿದ್ದ ಪುಣ್ಯ ಕ್ಷೇತ್ರವಾದ ಶ್ರಿ ಚನ್ನಪ್ಪ ಸ್ವಾಮೀಜಿ ಹಿರೇಕಲ್ಮಠದಲ್ಲಿ ಒಂದು ತಿಂಗಳ ಕಾಲ ಶ್ರಾವಣ ಮಾಸದ ಧಾರ್ಮಿಕ ಪೂಜಾ ಕೈಂಕರ್ಯಗಳು ನಡೆಯುತ್ತಿದ್ದು, ಶುಕ್ರವಾರ ಭವ್ಯವಾಗಿ ಆಲಂಕೃತಗೊಂಡ ಮಹಾ ರಥೋತ್ಸವ ಮಠದ ದ್ವಾರ ಭಾಗಿಲಿನ ಮುಭಾಂಗದಿಂದ ಪಟ್ಟಣದ ವೀರ ಸಂಗೋಳ್ಳಿ ರಾಯಣ್ಣ ವೃತ್ತದವರೆಗೆ ನಾಡಿನಾಧ್ಯಂತ ಆಗಮಿಸಿದ ಸಾವಿರಾರು ಭಕ್ತರು ಮಹಾ ರಥೋತ್ಸವವನ್ನು ಎಳೆದು ಪುನೀತರಾದದರು.
ಶುಕ್ರವಾರ ಪ್ರಾತಃಕಾಲದಲ್ಲೇ ಶ್ರೀಚನ್ನಪ್ಪಸ್ವಾಮೀಜಿ ಹಿರೇಕಲ್ಮಠದ ಪೀಠಾಧ್ಯಾಕ್ಷರಾದ ಡಾಕ್ಟರ್ ಶ್ರೀ ಒಡೆಯರ್ ಚೆನ್ನಮಲ್ಲಿಕಾರ್ಜುನ ಶಿವಾಚಾರ್ಯ ಮಹಾಸ್ವಾಮೀಜಿ ಅವರು ಕ್ಷೇತ್ರದ ಶ್ರೀಜಗದ್ಗುರುಗಳ ಕರ್ತೃಗದ್ದಿಗೆಗಳಿಗೆ, ಲಿಂ.ಒಡೆಯರ್ ಮತ್ಯುಂಜಯ ಶಿವಾಚಾರ್ಯ ಮಹಾಸ್ವಾಮೀಜಿ, ಶ್ರೀಒಡೆಯರ್ ಚಂದ್ರಶೇಖರ್ ಶಿವಾಚಾರ್ಯ ಮಹಾಸ್ವಾಮೀಜಿಯ ಕರ್ತೃಗದ್ದಿಗೆಗಳಿಗೆ ಹಾಗೂ ಶ್ರೀ ವೀರಭದ್ರೇಶ್ವರ ಮೂರ್ತಿಗೆ ಮಹಾ ರುದ್ರಾಭಿಷೇಕ, ಬಿಲ್ವಾರ್ಚನೆ ದೀಪೋತ್ಸವ ಮಹಾಮಂಗಳಾರತಿಯ ವಿಶೇಷ ಪೂಜಾ ಕೈಂಕರ್ಯಗಳು ನಡೆದವು.
ಬೆಳಗ್ಗೆ ಶ್ರೀಮಠದ ಮುಂಬಾಗ ವೀರಭದ್ರೇಶ್ವರ ಕೆಂಡದರ್ಚನೆ ನಡೆಯಿತು.
12 ಗಂಟೆಗೆ ಹಿರೇಕಲ್ಮಠದ ಪೀಠಾಧ್ಯಾಕ್ಷರಾದ ಶ್ರೀ ಒಡೆಯರ್ ಡಾಕ್ಟರ್ ಚನ್ನಮಲ್ಲಿಕಾರ್ಜುನ ಶಿವಾಚಾರ್ಯ ಸ್ವಾಮೀಜಿಯವರನ್ನು ಕುದುರೆಯಲ್ಲಿ ಕುಳುರಿಸಿ ಶ್ರೀಮಠದಿಂದ ಮಂಗಳ ವಾದ್ಯದದೊಂದಿಗೆ ಮಠದ ದ್ವಾರಬಾಗಿಲಿನ ಮುಭಾಂಗಕ್ಕೆ ಕರೆತಂದರು,ನಂತರ ಪಂಚಪೀಠದ ಥ್ವಜ,ವಿವಿಧ ಹೊವುಗಳು,ಹಸಿರುತಳಿರು ತೋರಣಗಳಿಂದ ಭವ್ಯ ಅಲಂಕೃತಗೊಂಡಿದ್ದ ಶ್ರೀಚನ್ನಪ್ಪಸ್ವಾಮೀಜಿ ಮಹಾರಥೋತ್ಸವಕ್ಕೆ ಪುರೋಹಿತರು ವೇದಮಂತ್ರಗಳ ಘೋಷಣೆಯೊಂದಿಗೆ ಮಹಾಪೂಜೆ,ರಥದ ಗಾಲಿಗೆ ಬಲಿಅನ್ನ ಸೇರಿದಂತೆ ವಿವಿಧ ಧಾರ್ಮಿಕ ಪೂಜೆಗಳು ನಡೆದವು.
ಸ್ವಾಮೀಜಿ ರಥಾರೋಹಣ ಗೈಯುತ್ತಿದ್ದಂತೆಯೇ ನೆರೆದಿದ್ದ ಸಾವಿರಾರು ಭಕ್ತರು ಜಗದ್ಗುರು ಪಂಚಾಚಾರ್ಯ ಮಹಾರಾಜ್ ಕೀ ಜೈ, ಶ್ರೀಚನ್ನಪ್ಪಸ್ವಾಮೀಜಿಗೆ ಜೈ, ಒಡೆಯರ್ ಚಂದ್ರಶೇಖರ್ ಶಿವಾಚಾರ್ಯ ಮಹಾಸ್ವಾಮೀಜಿಕೀ ಜೈ ಮಾನವಧರ್ಮಕ್ಕ ಜಯವಾಗಲಿ ಧರ್ಮದಿಂದ ವಿಶ್ವಕ್ಕೆ ಶಾಂತಿ ಎಂದು ಜಯಕಾರಗಳ ಘೋಷಣೆಯನ್ನು ಕೂಗಿದರು. ಹಿರೇಕಲ್ಮಠದ ಚನ್ನಯ್ಯ ಬೆನ್ನೂರುಮಠ,ಪುರಸಭಾ ಸದಸ್ಯ ಹೊಸಕೇರಿ ಸುರೇಶ್,ನಿವೃತ್ತ ಶಿಕ್ಷಕ ರುದ್ರಯ್ಯ, ಶಾಸ್ತ ಭಾರತ್ ಗ್ಯಾಸ್ ಮಾಲೀಕ ಶಿವಕುಮಾರ್,ಎಚ್.ಸಿ.ರವಿಕುಮಾರ್,ಕೆ.ಜಿ.ರುದ್ರಪ್ಪ,ರಾಜು ಫಲ್ಲವಿ,ಪೇಟೆ ಪ್ರಶಾಂತ ಹಾಗೂ ಪತ್ರಕರ್ತ ಸುರೇಶ್ ಸೇರಿದಂತೆ ಅನೇಕ ಪ್ರಮುಖರು ಮಹಾರಥೋತ್ಸವದಲ್ಲಿ ಪಾಲ್ಗೊಂಡಿದ್ದರು.
ಮಾಜಿ ಸಚಿವ ಎಂ.ಪಿ.ರೇಣುಕಾಚಾರ್ಯ ಅಗಮಿಸಿ ಮಹಾರಥೋತ್ಸವಕ್ಕೆ ಪೂಜೆ ಸಲ್ಲಿಸಿ ಶ್ರೀಗಳಿಂದ ಆಶೀರ್ವಾದ ಪಡೆದರು. ಶ್ರೀಚನ್ನಪ್ಪಸ್ವಾಮಿ ಮಹಾ ರಥೋತ್ಸವದ ಸಂದರ್ಭದಲ್ಲಿ ಕೀಲುಕುದುರೆ,ನಂದಿಕುಣಿತ ಸೇರಿದಂತೆ ವಿವಿಧ ಸಾಂಸ್ಕೃತಿಕ ಮೇಳಗಳು ಸಹ ರಥೋತ್ಸವದಲ್ಲಿಭಕ್ತರನ್ನು ರಂಜಿಸಿದರು.
ಚನ್ನಪ್ಪಸ್ವಾಮಿ ರಥೋತ್ಸವಕ್ಕೆ ನಾಡಿನ ವಿವಿಧ ಭಾಗಗಳಿಂದ ಆಗಮಿಸಿದ ಸದ್ಭಕ್ತರಿಗೆ ಶ್ರೀಮಠದಲ್ಲಿ ಅನ್ನಸಂತರ್ಪಣೆಯನ್ನು ವ್ಯವಸ್ಥೆ ಮಾಡಲಾಗಿತು.ಗೋದಿಉಗ್ಗಿ,ಕಡ್ಲೆಕಾಳು ಫಲ್ಯ,ಅನ್ನಸಾಂಬರ್ನ್ನು ಶ್ರೀಮಠಕ್ಕೆ ಆಗಮಿಸಿದ ಸುಮಾರು 10 ಸಾವಿರ ಭಕ್ತರಿಗೆ ಊಟದ ವ್ಯವಸ್ಥೆಯನ್ನು ಮಾಡಲಾಗಿತ್ತು.ರಾತ್ರಿಯೂ ಸಹ ನೂರಾರು ಭಕ್ತರು ಶ್ರೀಮಠದಲ್ಲಿ ಪ್ರಸಾದ ಮಾಡಿದರು.
ಮಧ್ಯ ಕರ್ನಾಟಕ ಐತಿಹಾಸಿಕ ಹಾಗೂ ಪುರಾಣ ಪ್ರಸಿದ್ದಿ ಪಡೆದಿರುವ ಶ್ರೀ ಚನ್ನಪ್ಪಸ್ವಾಮಿ ಮಹಾ ರಥೋತ್ಸವ ಶುಕ್ರವಾರ ಸಾವಿರಾರು ಸದ್ಭಕ್ತರ ಸಮುಖದಲ್ಲಿ ಅದ್ದೂರಿಯಾಗಿ ನೆರವೇರಿತು.


