Saturday, March 14, 2026
Flats for sale
Homeರಾಜ್ಯಮೊಳಕಾಲ್ಮುರು : ಆಂಜನೇಯ ಸ್ವಾಮಿ ದೇವಸ್ಥಾನದಲ್ಲಿ ಕರಡಿ ಪ್ರತ್ಯಕ್ಷ : ಭಯಭೀತರಾದ ಗ್ರಾಮಸ್ಥರು.

ಮೊಳಕಾಲ್ಮುರು : ಆಂಜನೇಯ ಸ್ವಾಮಿ ದೇವಸ್ಥಾನದಲ್ಲಿ ಕರಡಿ ಪ್ರತ್ಯಕ್ಷ : ಭಯಭೀತರಾದ ಗ್ರಾಮಸ್ಥರು.

ಮೊಳಕಾಲ್ಮುರು : ಬೊಮ್ಮಲಿಂಗನಹಳ್ಳಿ ಗ್ರಾಮದಲ್ಲಿ ಶನಿವಾರ ರಾತ್ರಿ 11ಗಂಟೆಗೆ ಕರಡಿ ಪ್ರತ್ಯಕ್ಷವಾಗಿದ್ದು ಗ್ರಾಮಸ್ಥರು ಭೀತಿಗೊಂಡಿದ್ದಾರೆ.

ಗ್ರಾಮದ ಮುಖ್ಯರಸ್ತೆಯ ಪಕ್ಕದಲ್ಲಿರುವ ಆಂಜಿನೇಯಸ್ವಾಮಿ ದೇವಸ್ಥಾನಕ್ಕೆ ಬಂದು ಕೆಲವು ಗಂಟೆಗಳ ಕಾಲ ಅಲ್ಲಿಯೇ ಇರುವುದನ್ನು ನೋಡಿದ ಗ್ರಾಮಸ್ಥರು ರಾತ್ರಿಯಿಡೀ ಕರಡಿಯನ್ನು ಓಡಿಸಲು ಪ್ರಯತ್ನ ಪಟ್ಟರು ಆಗಿಲ್ಲ,ಈ ಕರಡಿಗೆ ಕಿವಿ ಕೇಳಿಸುವುದಿಲ್ಲ ಎಂದು ಸ್ಥಳೀಯರು ಹೇಳುತ್ತಿದ್ದಾರೆ, ಇದೇ ಕರಡಿ ಈಗಾಗಲೇ ಐದಾರು ಬಾರೀ ಗ್ರಾಮದೊಳಗೆ ನುಗ್ಗಿದೆ, ಜನರು ಜೋರಾಗಿ ಕೂಗಿ, ಅರಚಿ ಬಾಯಿ ಮಾಡಿದರು, ನಾಯಿಗಳು ಬೊಗಳಿದರು ಸಹ ಇದ್ಯಾವುದನ್ನು ಲೆಕ್ಕಿಸದೆ ತನ್ನ ಪಾಡಿಗೆ ಅದು ರಾತ್ರಿಯಿಡೀ ಊರಿನಲ್ಲಿ ಬೀಡು ಬಿಡುತ್ತದೆ.

ಆಹಾರ ಅರಸಿ ರಾತ್ರಿ ವೇಳೆಯಲ್ಲಿ ಗ್ರಾಮದೊಳಗೆ ನುಗ್ಗುವ ಈ ದೊಡ್ಡ ಕರಡಿಯ ಸಂಚಾರದಿಂದ ಗ್ರಾಮಸ್ಥರು ನಿದ್ದೆಗೆಟ್ಟು ಆತಂಕಕ್ಕೆ ಒಳಗಾಗಿದ್ದಾರೆ, ಯಾವ ಕ್ಷಣದಲ್ಲಾದ್ರೂ ಜನರ ಮೈ ಮೇಲೆ ಎರಗಿ ಬಿಡುವ ಕರಡಿಯನ್ನು ಸೆರೆ ಹಿಡಿಯಬೇಕು ಎಂದು ಸ್ಥಳೀಯರು ಅರಣ್ಯ ಇಲಾಖೆಗೆ ಮನವಿ ಮಾಡಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

Most Popular