Saturday, March 14, 2026
Flats for sale
Homeಜಿಲ್ಲೆಮಂಗಳೂರು ; ಲವ್ ಜಿಹಾದ್ ಪ್ರಕರಣ : ಕೇರಳದ ಮುಸ್ಲಿಂ ಯುವಕನ ಜೊತೆ ಎರಡನೇ ಮದುವೆಯಾದ...

ಮಂಗಳೂರು ; ಲವ್ ಜಿಹಾದ್ ಪ್ರಕರಣ : ಕೇರಳದ ಮುಸ್ಲಿಂ ಯುವಕನ ಜೊತೆ ಎರಡನೇ ಮದುವೆಯಾದ ಹಿಂದೂ ಯುವತಿ..!

ಮಂಗಳೂರು ; ದಕ್ಷಿಣ ಕನ್ನಡ ಜಿಲ್ಲೆ ಹಾಗೂ ಗಡಿನಾಡಿನ ಕೇರಳಬಾಗದಲ್ಲಿ ಲವ್ ಜಿಹಾದ್ ಪ್ರಕರಣಗಳು ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಇದ್ದು ಹೆಣ್ಣು ಹೆತ್ತ ಪೋಷಕರು ತಲೆಕೆಡಿಸಿಕೊಂಡಿದ್ದಾರೆ. ಮಂಗಳೂರಿನ ಖಾಸಗಿ ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿದ್ದ ಹಿಂದೂ ಯುವತಿ ಕಾಣೆಯಾಗಿರುವ ಬಗ್ಗೆ ಪಾಂಡೇಶ್ವರ ಠಾಣೆಯಲ್ಲಿ ದೂರು ದಾಖಲಾಗಿತ್ತು. ಈ ಪ್ರಕರಣದ ಕಾರ್ಯಚರಣೆ ನಡೆಸಿದ ಪಾಂಡೇಶ್ವರ ಠಾಣಾ ಪೊಲೀಸರು, ನಾಪತ್ತೆಯಾಗಿದ್ದ ಯುವತಿಯನ್ನು ಪತ್ತೆ ಮಾಡಿದ್ದಾರೆ. ಮುಸ್ಲಿಂ ಯುವಕನೊಂದಿಗೆ ನಾಪತ್ತೆಯಾಗಿದ್ದ ಕೇರಳದ ಕಾಸರಗೋಡಿನ ವಿದ್ಯಾನಗರ ನಿವಾಸಿ ವಿಸ್ಮಯ ಪ್ರಕರಣ ತಿರುವು ಪಡೆದುಕೊಂಡಿದೆ. ಹೈಕೋರ್ಟ್ ಆದೇಶದಂತೆ ಕೇರಳದ ಮೊಹಮ್ಮದ್ ಅಶ್ಫಾಕ್‌ ವಿಸ್ಮಯಳನ್ನು ಮದುವೆಯಾಗಿದ್ದಾನೆ. ಈ ಕುರಿತು ವಿಶ್ವ ಹಿಂದೂ ಪರಿಷತ್ ಮುಖಂಡ ಶರಣ್ ಪಂಪವೆಲ್ ಫೇಸ್​​ಬುಕ್​ ಪೋಸ್ಟ್ ಹಾಕಿದ್ದು, ವಿಸ್ಮಯ ತಂದೆಯ ಬಳಿ ಕ್ಷಮೆಯಾಚಿಸಿದ್ದಾರೆ.

ಮಹಮ್ಮದ್ ಅಶ್ಪಕ್ ನಟೋರಿಯಸ್ ಹಿನ್ನಲೆ ಹೊಂದಿದವನು ಎಂದು ತಿಳಿದುಬಂದಿದ್ದು ಮಹಮ್ಮದ್ ಅಶ್ಪಕ್ ಈಗಾಗಲೇ ಒಂದು ಮದುವೆಯಾಗಿದ್ದಾನೆ. ಈತನ ವಿರುದ್ಧ ಕಾಸರಗೋಡು ವಿದ್ಯಾನಗರ ಠಾಣೆಯಲ್ಲಿ 8 ಕ್ರಿಮಿನಲ್ ಪ್ರಕರಣಗಳು ದಾಖಲಾಗಿವೆ. ಮೊಹಮ್ಮದ್ ಅಶ್ಫಾಕ್ ಕೇರಳದ ಕಾಸರಗೋಡಿನ ವಿದ್ಯಾನಗರ ನಿವಾಸಿ ವಿಸ್ಮಯಳನ್ನು ​​​ ಪ್ರೀತಿ ಬಲೆಗೆ ಬೀಳಿಸಿದ್ದನು.

ಈ ಬಗ್ಗೆ ವಿಚಾರ ತಿಳಿದ ವಿಸ್ಮಯ ತಂದೆ ವಿನೋದ್​ ಅವರು ವಿಸ್ಮಯಳನ್ನು ಮಂಗಳೂರಿನ ಉಳ್ಳಾಲದ ಅತ್ತೆ ಮನೆಯಲ್ಲಿ ಇರಿಸಿ ಬಿಸಿಎ ಶಿಕ್ಷಣ ಕೊಡಿಸುತ್ತಿದ್ದರು.ಆದರೆ ಯುವತಿಗೆ ಪ್ರೀತಿಯ ಮೋಹಕ್ಕೆ ಬೀಳಿಸಿ ಇಲ್ಲಿಯೂ ಆಕೆಯನ್ನು ಬಿಡದ ಆಶ್ಫಕ್​​ ಕಳೆದ ಜೂನ್​ 6 ರಂದು ಉಳ್ಳಾಲದಿಂದ ವಿಸ್ಮಯ ಕರೆದುಕೊಂಡು ಹೋಗಿದ್ದು ಪೊಲೀಸರು ಪತ್ತೆ ಹಚ್ಚಿ ವಿಸ್ಮಯಳನ್ನ ಮನೆಯವರ ಜೊತೆ ಕಳುಹಿಸಿದ್ದರು.

ಜೂ‌ನ್ 30ರಂದು ಆಶ್ಫಕ್​​ ಉಳ್ಳಾಲದಿಂದ ವಿಸ್ಮಯಳನ್ನು ಅಪಹರಿಸಿ ಕೊಚ್ಚಿಗೆ ಕರೆದುಕೊಂಡು ಹೋಗಿದ್ದು ದಿಕ್ಕು ತೋಚಲಾಗದೆ ವಿಷ್ಮಯ ತಂದೆ ಮಂಗಳೂರಿನ ವಿಹೆಚ್​ಪಿ ನಾಯಕರನ್ನು ಭೇಟಿಯಾಗಿ, ಕ್ರಿಮಿನಲ್ ರೆಕಾರ್ಡ್ ಹೊಂದಿರುವ ಅಶ್ಫಾಕ್ ಎರಡು ತಿಂಗಳ ಪರಿಚಯದಲ್ಲೇ ವಿಸ್ಮಯಳನ್ನು ಮೈಂಡ್ ವಾಶ್ ಮಾಡಿದ್ದಾನೆ. ಕೇರಳದಲ್ಲಿ ವಿಸ್ಮಯಳನ್ನು ಮತಾಂತರಿಸಲು ಯತ್ನಿಸಿದ್ದಾನೆ. ನನ್ನ ಮಗಳನ್ನ ಉಳಿಸಿಕೊಡಿ ಎಂದು ಕಣ್ಣೀರು ಹಾಕಿದ್ದರು.

ಕಾನೂನು ಹೋರಾಟದಲ್ಲೂ ಎರಡನೇ ಮದುವೆಗೆ ಕೇರಳ ಹೈಕೋರ್ಟ್ ಅವಕಾಶ ಕೊಟ್ಟದ್ದು ಅಸ್ಯಾಸ್ಪದ ಎಂದು ಸ್ಥಳೀಯ ನಿವಾಸಿಗಳು ತಿಳಿಸಿದ್ದಾರೆ. ಈ ನಡುವೆ ಅಶ್ಫಾಕ್ ಕೇರಳ ಹೈಕೋರ್ಟ್​​ಗೆ ಹೆಬಿಯಾಸ್ ಕಾರ್ಪಸ್ ಅರ್ಜಿ ಹಾಕಿದ್ದನು. ಈ ಹಿನ್ನೆಲೆಯಲ್ಲಿ ನ್ಯಾಯಾಲಯದಲ್ಲಿ ವಾದ-ವಿವಾದ ನಡೆದಿದೆ. ಕೊನೆಗೆ ನ್ಯಾಯಾಲಯದ ಆದೇಶ ಆಶ್ಫಕ್​ ಪರವಾಗಿ ಬಂದಿದೆ. ಇದೀಗ, ಆಶ್ಫಕ್​ ವಿಸ್ಮಯಳನ್ನು ಇಸ್ಲಾಂಗೆ ಮತಾಂತರಿಸಿ, ವಿವಾಹವಾಗಿದ್ದಾನೆ. ತಂದೆ-ತಾಯಿ, ಹಿಂದೂ ಸಂಘಟನೆಗಳ ಹೋರಾಟದ ಬಳಿಕವೂ ವಿಸ್ಮಯ, ಆಶ್ಫಕನನ್ನು ವರಸಿದ್ದಾಳೆ. ಆಶ್ಫಕ್​ಗೆ ಇದು ಎರಡನೇ ಮದುವೆಯಾಗಿದೆ.ಒಟ್ಟಿನಲ್ಲಿ ದೇಶದಲ್ಲಿ ನಿರಂತರವಾಗಿ ನಡೆಯುವ ಇಂತಹ ಲವ್ ಜಿಹಾದ್ ಪ್ರಕರಣಕ್ಕೆ ಹೆಣ್ಣು ಹೆತ್ತ ಪೋಷಕರು ಕಂಗಾಲಾಗಿದ್ದರೆ.

RELATED ARTICLES

LEAVE A REPLY

Please enter your comment!
Please enter your name here

Most Popular