Thursday, July 23, 2026
Homeರಾಜ್ಯಬೆಳಗಾವಿ : ರಸ್ತೆಯಿಲ್ಲದೆ ಶಿಕ್ಷಣಕ್ಕಾಗಿ ಹರಸಾಹಸ ಪಡುತ್ತಿರುವ ಆಂಜನೇಯ ನಗರದ ಶಾಲಾ ಮಕ್ಕಳು,ಮುಕ್ತಿ ಯಾವಾಗ ಎಂದು...

ಬೆಳಗಾವಿ : ರಸ್ತೆಯಿಲ್ಲದೆ ಶಿಕ್ಷಣಕ್ಕಾಗಿ ಹರಸಾಹಸ ಪಡುತ್ತಿರುವ ಆಂಜನೇಯ ನಗರದ ಶಾಲಾ ಮಕ್ಕಳು,ಮುಕ್ತಿ ಯಾವಾಗ ಎಂದು ಸಾರ್ವಜನಿಕರರಿಂದ ಪ್ರಶ್ನೆ..!

ಬೆಳಗಾವಿ : ಬೆಳಗಾವಿ ಜಿಲ್ಲೆ ಖಾನಾಪೂರ ತಾಲೂಕಿನ ಕೇರವಾಡ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಬರುವ ಆಂಜನೇಯ ನಗರ ಸುಮಾರು 250 ರಿಂದ 300 ವರೆಗೆ ಜನಸಂಖ್ಯೆಯಿರುವ ಒಂದು ಸಣ್ಣ ಗ್ರಾಮ ಇಲ್ಲಿ 50 ರಿಂದ 60 ಮನೆಗಳಿವೆ. ಈ ಗ್ರಾಮದಲ್ಲಿ ಒಂದು ಅಂಗನವಾಡಿ ಮಾತ್ರ ಇದೆ 12 ಕಾಲೇಜು ವಿದ್ಯಾರ್ಥಿಗಳು 70 ಪ್ರಾಥಮಿಕ ಹಾಗೂ ಪ್ರೌಢಶಾಲಾ ವಿದ್ಯಾರ್ಥಿಗಳಿದ್ದಾರೆ ಈ ವಿದ್ಯಾರ್ಥಿಗಳು ಪ್ರತಿದಿನ ಸರಿಯಾದ ರಸ್ತೆಯಿಲ್ಲದೆ ಮೂರು ಕೀ ಮೀ ನಡೆದುಕೊಂಡು ಹತ್ತಿರವಿರುವ ಹಿಡಕಲ ಗ್ರಾಮಕ್ಕೆ ಬಂದು ಶಾಲೆ ಕಲಿಯಬೇಕು.

ಮಳೆಗಾಲದಲ್ಲಿ ಈ ಗ್ರಾಮಕ್ಕೆ ಕಲ್ಪಿಸುವ ರಸ್ತೆ ನೀರು ತುಂಬಿಕೊಂಡು ಹಳ್ಳದಂತಾಗುತ್ತದೆ ಶಾಲಾ ಮಕ್ಕಳು ಪ್ರತಿದಿನ ಶಾಲೆಗೆ ಹೋಗಲು ಹರಸಾಹಸ ಪಡುತ್ತಿದ್ದಾರೆ. ಮಾಹಿತಿ ಪ್ರಕಾರ ಕೆರವಾಡ ಗ್ರಾಮಪಂಚಾಯತಿಯಲ್ಲಿ ಈ ಗ್ರಾಮಕ್ಕೆ ರಸ್ತೆ ನಿರ್ಮಾಣಕ್ಕಾಗಿ 4 ಲಕ್ಷ ಮೀಸಲಿಡಲಾಗಿದೆ ಇನ್ನೂ ಹೆಚ್ಚಿನ ಅನುದಾನ ಅವಶ್ಯಕತೆ ಇರುವುದರಿಂದ ಮಂಜೂರಾತಿಗಾಗಿ ಜಿಲ್ಲಾ ಪಂಚಾಯಿತಿಗೆ ಮನವಿ ಮಾಡಲಾಗಿದೆ. ಆದರೆ ಇನ್ನೂವರೆಗೆ ಮಂಜೂರಿಯಾಗದೆ ಸಾರ್ವಜನಿಕರು ಕಷ್ಟಪಡುತ್ತಿದ್ದಾರೆ.

ತಾಲೂಕಿನಲ್ಲಿ ಮೂಲಭೂತ ಸೌಕರ್ಯದಿಂದ ವಂಚಿತವಾದ ಬಹಳಷ್ಟು ಹಳ್ಳಿಗಳಿವೆ. ಸ್ವಾತಂತ್ರ್ಯ ಬಂದು 77 ವರ್ಷವಾದರೂ ಇಲ್ಲಿ ವಾಸಿಸುವ ಜನರು ಮೂಲಭೂತ ಸೌಕರ್ಯಕ್ಕಾಗಿ ಪರಿತಪಿಸುತ್ತಿದ್ದಾರೆ. ಮತ್ತು ಇಲ್ಲಿ ಪ್ರತಿಬಾರಿ ಯಾವುದೇ ಪಕ್ಷದ ಶಾಸಕರಾದರು ಮೌನವಹಿಸುತ್ತಿದ್ದಾರೆ ಇದು ಈ ತಾಲೂಕಿನ ವಿಪರ್ಯಾಸ. ನಮ್ಮ ಸುದ್ದಿ ನೋಡಿಯಾದರು ಈಗೀನ ಹಾಲಿ ಶಾಸಕರಾದ ವಿಠ್ಠಲ ಹಲಗೇಕರ ಅವರು ಅಭಿವೃದ್ಧಿಯತ್ತ ಗಮನ ಹರಿಸಿ ಸಾರ್ವಜನಿಕರಿಗೆ ಮೂಲಭೂತ ಸೌಕರ್ಯ ಒದಗಿಸಲು ಪ್ರಯತ್ನಿಸುತ್ತಾರಾ ಎಂದು ಕಾದು ನೋಡಬೇಕಾಗಿದೆ.

RELATED ARTICLES

LEAVE A REPLY

Please enter your comment!
Please enter your name here

Most Popular