Thursday, March 12, 2026
Flats for sale
Homeರಾಜ್ಯಕಾರವಾರ : ಸೇತುವೆ ಕುಸಿತ : ದೇಶದಲ್ಲಿರುವ ಎಲ್ಲಾ ಸೇತುವೆ ನಿರ್ವಹಣೆಯಲ್ಲಿ ನಿರ್ಲಕ್ಷ್ಯ,ಕಾರವಾರ-ಗೋವಾ ಸಂಚಾರ ಸ್ಥಗಿತ..!

ಕಾರವಾರ : ಸೇತುವೆ ಕುಸಿತ : ದೇಶದಲ್ಲಿರುವ ಎಲ್ಲಾ ಸೇತುವೆ ನಿರ್ವಹಣೆಯಲ್ಲಿ ನಿರ್ಲಕ್ಷ್ಯ,ಕಾರವಾರ-ಗೋವಾ ಸಂಚಾರ ಸ್ಥಗಿತ..!

ಕಾರವಾರ : ಏಸ್….ಸೇತುವೆಯ ಕಾಮಗಾರಿ ತುರಾತುರಿಯಲ್ಲಿ ಮಾಡಿಮುಗಿಸುತ್ತಾರೆ ಆದರೆ ದೇಶದಲ್ಲಿ ನದಿಗೆ ಅಡ್ಡಲಾಗಿ ನಿರ್ಮಿಸಿರುವ ಸೇತುವೆ ನಿರ್ವಹಣೆ ಕಾರ್ಯ ಮಾಡುವುದಿಲ್ಲವೆಂದು ಸಂಬಂಧ ಪಟ್ಟ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ . ಮಂಗಳೂರಿನಿಂದ ಕೂಳೂರು ಸಮೀಪ ಇರುವ ಸೇತುವೆ ಅಂತೂ ಯಾವಾಗ ಬೀಳುತ್ತೋ ಗೊತ್ತಿಲ್ಲ ಆದರೆ ಒಂದಲ್ಲ ಒಂದು ದಿನ ಬಿದ್ದೆ ಬೀಳುತ್ತೆ ಎಂಬುದು ಸ್ಥಳೀಯರ ಮಾತು .ರಾಜಕಾರಣಿಗಳು ಅಧಿಕಾರಿಗಳು ಸರಿಯಾಗಿ ಇರುವಾಗ ಬಂದು ಪರಿಶೀಲಿಶಿ ಹೋಗ್ತಾರೆ ಆದರೆ 15 ದಿನಗಳಿಗೊಮ್ಮೆ ಸೇತುವೆ ನಿರ್ವಹಣೆಯ ಹೊಣೆಯನ್ನು ಯಾರು ಹೊರುವುದಿಲ್ಲ ಎಂಬುದು ಸಾಬೀತಾಗಿದೆ .

ಸೇತುವೆಯ ಕುಸಿದರೆ ಅದಕ್ಕೆ ಮೂಲ ಕಾರಣ ಜಿಲ್ಲಾಡಳಿತ ಹಾಗೂ ಸಂಬಂಧ ಪಟ್ಟ ಇಲಾಖೆ. ಕಮಿಷನ್ ವಿಚಾರದಲ್ಲಿ ಎಂಪಿ ,MLA ಇಂದ ಹಿಡಿದು ಎಲ್ಲಾ ಇಲಾಖೆ ಕೈಚಾಚುತ್ತಿರುವುದು ಎಲ್ಲರಿಗೂ ತಿಳಿದ ವಿಚಾರ . ಯಾಕೆಂದರೆ ಎಲ್ಲ ವಿಚಾರದಲ್ಲಿ ಉತ್ತರ ಕನ್ನಡ ಜಿಲ್ಲೆಯ ಕಾರವಾರ ಬಳಿ ರಾಷ್ಟ್ರೀಯ ಹೆದ್ದಾರಿ 66 ರ ಕೋಡಿಭಾಗ್ ಸೇತುವೆ ಕುಸಿದು ಕಾಳಿ ನದಿಗೆ ಬಿದ್ದಾಗ ಅದರೊಂದಿಗೆ ನದಿಗೆ ಬಿದ್ದ ಲಾರಿಯ ಚಾಲಕ ಬಾಲ ಮುರುಗನ್ ಸದ್ಯ ಆಸ್ಪತ್ರೆಯಲ್ಲಿ ಆಘಾತದಿಂದ ಚೇತರಿಸಿಕೊಳ್ಳುತ್ತಿದ್ದಾರೆ. ಸೇತುವೆ ಕುಸಿತದಿಂದ ಇನ್ನಷ್ಟು ವಾಹನಗಳು ನದಿಗೆ ಬಿದ್ದಿವೆಯಾ? ಪ್ರಾಣ ಹಾನಿ ಸಂಭವಿಸಿದೆಯಾ ಎಂಬುದನ್ನು ತಿಳಿಯುವುದಕ್ಕಾಗಿ ಕಾರವಾರ ಪೊಲೀಸರು ಚಾಲಕನಿಂದ ಮಾಹಿತಿ ಪಡೆದರು. ಇದೇ ವೇಳೆ ಅವರು ಸೇತುವೆ ಕುಸಿತ, ಅದರಿಂದ ಪಾರಾದ ರೋಚಕ ಅನುಭವ ತಿಳಿಸಿದ್ದಾರೆ.

ಕಾರವಾರ ಗೋವಾ ಸಂಪರ್ಕ ಮಾಡುವ ನಗರದ ಕೋಡಿಭಾಗ್ ಬಳಿ ಇರುವ ಈ ಸೇತುವೆ ಮಂಗಳವಾರ ತಡರಾತ್ರಿ ಸುಮಾರು 1 ಗಂಟೆ ವೇಳೆಗೆ ಕುಸಿದು ಬಿದ್ದಿದೆ.ಫಿಲ್ಲರ್ ಕಂಬಗಳ ನಡುವೆ ಸೇತುವೆ ಮೂರ್ನಾಲ್ಕು ಕಡೆ ತುಂಡಾಗಿ ನದಿಗೆ ಬಿದ್ದಿದ್ದು, ಇದೇ ವೇಳೆ ಗೋವಾದಿಂದ ಕಾರವಾರ ಕಡೆಗೆ ಆಗಮಿಸುತ್ತಿದ್ದ ಟ್ರಕ್ ನದಿಗೆ ಬಿದ್ದಿದೆ. ತಕ್ಷಣ ಮೀನುಗಾರರು ಹಾಗೂ ಪೋಲಿಸರು ಲಾರಿ ಚಾಲಕನನ್ನು ರಕ್ಷಣೆ ಮಾಡಿದ್ದಾರೆ.

ಗಾಯಗೊಂಡಿರುವ ವ್ಯಕ್ತಿಯನ್ನು ಕೇರಳ ಮೂಲದ ರಾಧಾಕೃಷ್ಣ ನಾಳಾ ಸ್ವಾಮಿ (37) ಎಂದು ಗುರ್ತಿಸಲಾಗಿದೆ. ವ್ಯಕ್ತಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಮುಂದುವರೆದಿದೆ.

ಇನ್ನು ಘಟನೆ ಸಂಭವಿಸುವ ವೇಳೆ ಬೈಕ್ ಹಾಗೂ ಕಾರು ಕೂಡ ಇದೇ ಸೇತುವೆ ಮೇಲೆ ಸಂಚಾರ ಮಾಡುತ್ತಿತ್ತು ಎನ್ನಲಾಗಿದ್ದು ಅವರು ಮುಂದೆ ಸಾಗಿದ್ದಾರೆ ಎನ್ನಲಾಗುತ್ತಿದೆ. ಸದ್ಯ ಟ್ರಕ್ ನೀರಿನಲ್ಲಿ ಬಿದ್ದಿದ್ದು ಮತ್ತೆ ಯಾವುದಾದರೂ ವಾಹನ ಬಿದ್ದಿರುವ ಬಗ್ಗೆ ಸ್ಥಳೀಯ ಮೀನುಗಾರರ ಜೊತೆ ಪೊಲೀಸರು ದೋಣಿಗಳ ಮೂಲಕ ಹುಡುಕಾಟ ನಡೆಸಿದ್ದಾರೆ.

ಏತನ್ಮಧ್ಯೆ, ರಕ್ಷಣಾ ತಂಡದಿಂದ ಶೋಧ ಕಾರ್ಯಾಚರಣೆ ಮುಂದುವರೆದಿದೆ. ಇದುವರೆಗೂ ಯಾರೂ ನಾಪತ್ತೆಯಾಗಿರುವ ಬಗ್ಗೆ ಹಾಗೂ ಪ್ರಾಣಹಾನಿ ಆಗಿರುವುದು ಕಂಡು ಬಂದಿಲ್ಲ. ಜಿಲ್ಲಾಡಳಿತದ ಇದುವರೆಗಿನ ಮಾಹಿತಿ ಪ್ರಕಾರ ಯಾವುದೇ ಪ್ರಾಣಾಪಯ ಸಂಭವಿಸಿಲ್ಲ ಎಂಬ ಮಾಹಿತಿ ತಿಳಿದುಬಂದಿದೆ .

RELATED ARTICLES

LEAVE A REPLY

Please enter your comment!
Please enter your name here

Most Popular