Friday, March 13, 2026
Flats for sale
Homeಜಿಲ್ಲೆಉತ್ತರ ಕನ್ನಡ : ಶಿರೂರು ಗುಡ್ಡ ಕುಸಿತದಲ್ಲಿ ಮೃತಪಟ್ಟ ಹೊಟೇಲ್ ಮಾಲೀಕರಿಗಾಗಿ ಊಟವನ್ನು ಬಿಟ್ಟು ಕಾಯುತ್ತಿರುವ...

ಉತ್ತರ ಕನ್ನಡ : ಶಿರೂರು ಗುಡ್ಡ ಕುಸಿತದಲ್ಲಿ ಮೃತಪಟ್ಟ ಹೊಟೇಲ್ ಮಾಲೀಕರಿಗಾಗಿ ಊಟವನ್ನು ಬಿಟ್ಟು ಕಾಯುತ್ತಿರುವ ನಾಯಿ.!

ಉತ್ತರ ಕನ್ನಡ : ನಾಯಿ ಅಂದರೆ ಅಷ್ಟೇ ಒಂದೊತ್ತು ಊಟ ಹಾಕಿದ ಗುರುತು ಸಾಯುವವರೆಗೂ ಮರೆಯುವುದಿಲ್ಲ.ಕೆಲವೊಮ್ಮೆ ಮನುಷ್ಯನಿಗಿಂತ ನಾಯಿಗಳಿಗೆ ಹೆಚ್ಚು ಹೋಲಿಕೆ ಮಾಡುವುದುಂಟು.ನಾಯಿಗಳಿಗೆ ನಿಯತ್ತು ಇರುವುದು ಈ ದೃಶ್ಯದಲ್ಲಿ ಸ್ಮರಿಸಬಹುದು.

ಕಳೆದ 13 ದಿನಗಳಿಂದ ಹಿಂದೆ ಮೃತಪಟ್ಟ ಹೊಟೇಲ್ ಮಾಲೀಕ ಮೃತ ಲಕ್ಷ್ಮಣ್ ನಾಯ್ಕ ಕುಟುಂಬದವರು ಸಾಕಿದ್ದ ಶ್ವಾನಗಳು ಶಿರೂರು ಗುಡ್ಡ ಕುಸಿತದ ಪ್ರದೇಶದಲ್ಲೇ ಇದುವರೆಗೂ ತನ್ನ ಮಾಲೀಕನ ಆಗಮನಕ್ಕೆ ಕಾಯುತ್ತಿವೆ. ಹದಿಮೂರು ದಿನಗಳಿಂದ ಮಾಲೀಕನ ಬರುವಿಕೆಗೆ ಕಾಯುತ್ತಿರುವ ಶ್ವಾನಗಳನ್ನು ನೋಡಿದರೆ ಎಂತವರಿಗೂ ಮನ ಕಲುಕುವಂತಿದೆ. ಇನ್ನೊಂದು ಸಂಗತಿ ಏಂದರೆ ಪ್ರತಿ ದಿನ ಕಾರ್ಯಾಚರಣೆ ನಡೆಯುವ ಸ್ಥಳವನ್ನು ಬಿಟ್ಟು ನಾಯಿಗಳು ಯಾವ ಕಡೆಯು ಕದಲುತ್ತಿಲ್ಲ.ಸ್ಥಳದಲ್ಲಿ ಬೀಡುಬಿಟ್ಟಿರುವ ರಕ್ಷಣಾ ಕಾರ್ಯಚರಣೆಯವರೊಂದಿಗೆ ಕುಳಿತು ತನ್ನ ಮಾಲೀಕರು ಹಾಗೂ ಜೊತೆಯಲ್ಲಿ ಆಟಾಡುತ್ತಿದ ಮಕ್ಕಳನ್ನು ಕಾಯುತ್ತಿರುವುದು ಇಲ್ಲಿ ಕಾಣುತ್ತಿದೆ.

ಹೌದು ಶಿರೂರು ಗುಡ್ಡಕುಸಿತ ಘಟನೆಯಲ್ಲಿ ಲಕ್ಷ್ಮಣ ನಾಯ್ಕ್ ಕುಟುಂಬದ ಎಲ್ಲರೂ ಮೃತಪಟ್ಟಿದ್ದಾರೆ.ಲಕ್ಷ್ಮಣ್ ನಾಯ್ಕ್ ರವರು ಕಳೆದ ಹಲವಾರು ವರ್ಷಗಳಿಂದ ಶಿರೂರಿನ ರಸ್ತೆಯ ಬದಿ ಹೋಟೆಲ್ ಒಂದರನ್ನು ನಡೆಸಿಕೊಂಡು ತಮ್ಮ ಪುಟ್ಟ ಸಂಸಾರ ನಡೆಸುತ್ತಿದ್ದರು.ಅದರ ಜೊತೆ ಎರಡು ನಾಯಿಗಳನ್ನು ಕುಟುಂಬದ ಸದಸ್ಯರಂತೆ ಪ್ರೀತಿಯಿಂದ ಸಾಕಿ ಸಲಹುತ್ತಿದ್ದರು ಆದರೆ ಈ ದುರಂತದಲ್ಲಿ ಲಕ್ಷ್ಮಣ್ ನಾಯ್ಕ್ ರವರ ಕುಟುಂಬವೇ ಸಾವನ್ನಪ್ಪಿದೆ ಆದರೆ ಅವರು ಸಾಕಿ ಬೆಳೆಸಿದ ಪ್ರೀತಿಯ ನಾಯಿ ಮಾತ್ರ ಬದುಕುಳಿದಿದೆ ಆದರೆ ಈ ಸಾಕು ನಾಯಿ ಮಾತ್ರ ಕಳೆದ 13 ದಿನಗಳಿಂದ ತನ್ನವರಿಗಾಗಿ ಹುಡುಕಾಟ ನಡೆಸುತ್ತಿರುವ ದೃಶ್ಯ ಮಾತ್ರ ಮನುಕಲಕುವಂತಿದೆ.

RELATED ARTICLES

LEAVE A REPLY

Please enter your comment!
Please enter your name here

Most Popular