ಮಂಗಳೂರು : ಕೊರಗಜ್ಜನ ಬಳಿ ಸಂಕಷ್ಟದ ಬಗ್ಗೆ ಶಾಸಕ ವಿನಯ್ ಕುಲಕರ್ಣಿ ಅರಿಕೆ ಮಾಡಿಕೊಂಡಿದ್ದರು. ಈ ಹಿನ್ನೆಲೆ ತುಳುನಾಡಿನ ಆರಾಧ್ಯದೈವ ಕೊರಗಜ್ಜನಿಗೆ ಹರಕೆಯ ಕೋಲ ಸೇವೆ ಸಲ್ಲಿಸಲು ಆಗಮಿಸಿದ್ದ ಶಾಸಕ ವಿನಯ ಕುಲಕರ್ಣಿಗೆ ದೈವ ಮತ್ತೊಂದು ಅಭಯ ನೀಡಿದೆ. ಧಾರವಾಡ ಪ್ರವೇಶ ನಿರ್ಬಂಧ ವಿಚಾರದಲ್ಲಿ ಮುಂದಿನ 48 ದಿನಗಳ ಒಳಗೆ ಸಮಸ್ಯೆ ಬಗೆ ಹರಿಸೋದಾಗಿ ಕೊರಗಜ್ಜ ದೈವ ಅಭಯದ ನುಡಿ ಕೊಟ್ಟಿದೆ. ಹೆಣ್ಣಿನ ಕಾರಣದಿಂದಲೇ ಈ ಎಲ್ಲಾ ಸಂಕಷ್ಟ ಎದುರಾಗಿದೆ. ಅಧರ್ಮದಲ್ಲಿ ಹೋದವರನ್ನ ನಾನು ನೋಡಿಕೊಳ್ಳುತ್ತೇನೆ. ಸಂಕಷ್ಟ ನಿವಾರಣೆ ಬಳಿಕ ಸಂತೋಷದಿಂದ ಕೋಲಸೇವೆ ನೀಡುವಂತೆ ದೈವ ನುಡಿದಿದೆ.

ಕೊರಗಜ್ಜ ಅಂದರೆ ತುಳುನಾಡಿನ ಒಂದು ದೈವ. ಕೊರಗಜ್ಜನಿಗೆ ಹರಕೆ ಹೊತ್ತು ಚಕ್ಕುಲಿ,ಬೀಡಾ (ವೀಳ್ಯದ ಎಲೆ ) ನೀಡಿ ಹರಕೆ ಸಂದಾಯ ಮಾಡುವುದು ಸಂಪ್ರದಾಯ.ಕಷ್ಟಕಾಲದಲ್ಲಿ ಕೊರಗಜ್ಜನನ್ನು ನೆನೆಸಿ ಎನಿಸಿದ ಕಾಪಾಡು ಎಂದು ಬೇಡಿದರೆ ಅಭಯ ನೀಡವುದಂತೂ ನಿಜವಾದ ನಂಬಿಕೆ.ಅಂತೆಯೇ ಕೊರಗಜ್ಜನ ಬಳಿ ತನ್ನ ಸಂಕಷ್ಟದ ಬಗ್ಗೆಯೂ ವಿನಯ್ ಕುಲಕರ್ಣಿ ಅರಿಕೆ ಮಾಡಿಕೊಂಡಿದ್ದಾರೆ. ಮುಂದಿನ ತಿಂಗಳು ಕ್ಷೇತ್ರ ಪ್ರವೇಶಕ್ಕಿರುವ ನಿರ್ಬಂಧದ ತೀರ್ಪಿನ ಬಗ್ಗೆ ಪ್ರಸ್ತಾಪಿಸಿದ್ದಾರೆ. ಮಗನಿಗೆ ಅಪಘಾತ ಸಂಭವಿಸಿ ಆರೋಗ್ಯ ಸಮಸ್ಯೆ ಎದುರಾಗಿರುವ ಬಗ್ಗೆ ಅಜ್ಜನ ಮುಂದೆ ಕುಲಕರ್ಣಿ ಅಳಲು ತೋಡಿಕೊಂಡಿದ್ದಾರೆ. ಈ ವೇಳೆ ಎದುರಾಗಿರುವ ಸಂಕಷ್ಟವನ್ನು ನಿವಾರಿಸುವ ಅಭಯ ನೀಡಿದ ಕೊರಗಜ್ಜ ದೈವ, ತಪ್ಪು ಮಾಡೋದು ಸಹಜ, ತಿದ್ದಿಕೊಂಡು ಮುಂದುವರಿಯುವುದು ಉತ್ತಮ ಗುಣ. ಯಾವುದು ಸರಿ ಯಾವುದು ತಪ್ಪು ಎಂಬ ಲೆಕ್ಕ ನನ್ನ ಬಳಿ ಇದೆ. ನಿಮ್ಮ ಮುಂದಿನ ಭವಿಷ್ಯದ ಲೆಕ್ಕವು ನನ್ನ ಬಳಿ ಇದೆ. ಕಲಿಯುಗದಲ್ಲಿ ಆಗುವುದಿಲ್ಲ ಎಂಬುದನ್ನು ನಾನು ಮಾಡಿಸುತ್ತೇನೆ. ಕಷ್ಟವನ್ನು ನಿವಾರಿಸುತ್ತೇನೆ. ನಿಮ್ಮ ಜೊತೆ ನಾಲ್ಕು ಜನ ಒಳ್ಳೆಯವರಿದ್ದರೆ ಐದು ಜನ ಕೆಟ್ಟವರಿದ್ದಾರೆ. ಎಲ್ಲಾ ಸಂಕಷ್ಟವನ್ನು ನಿವಾರಿಸಿ ಕುಟುಂಬದ ರಕ್ಷಣೆ ಮಾಡುವುದಾಗಿ ಅಭಯ ನೀಡಿದೆ.

ಮಂಗಳೂರಿನ ತೊಕ್ಕೊಟ್ಟು ಜಂಕ್ಷನ್ನಲ್ಲಿರುವ ಕೊರಗಜ್ಜನ ಕಟ್ಟೆಯಲ್ಲಿ ಹರಕೆ ಕೋಲ ಸೇವೆ ಸಲ್ಲಿಸಿದ್ದಾರೆ. ಕೋಲದಲ್ಲಿ ಶಾಸಕ ಕುಲಕರ್ಣಿ, ಪತ್ನಿ ಹಾಗೂ ಇಬ್ಬರು ಹೆಣ್ಣುಮಕ್ಕಳು ಭಾಗಿಯಾಗಿದ್ದು, ಸ್ಪೀಕರ್ ಯು.ಟಿ.ಖಾದರ್ ಸಹೋದರ ಇಫ್ತಿಕಾರ್ ಆಲಿ ಸಾಥ್ ನೀಡಿದರು. ಬಿಜೆಪಿ ಜಿಪಂ ಸದಸ್ಯ ಯೋಗೇಶ ಗೌಡ ಹತ್ಯೆ ಪ್ರಕರಣದ ಆರೋಪಿಯಾಗಿರೋ ವಿನಯ್ ಕುಲಕರ್ಣಿಗೆ ಸಿಬಿಐ ನ್ಯಾಯಾಲಯ ಧಾರವಾಡ ಕ್ಷೇತ್ರ ಪ್ರವೇಶಿಸದಂತೆ ನಿರ್ಬಂಧ ಹೇರಿದೆ.ಕೋಲದ ವಿಚಾರದಲ್ಲಿ ಮಾತನಾಡಿದ ವಿನಯ್ ಕುಮಕರ್ಣಿ ಮಂಗಳೂರಿನ ನನ್ನ ಸ್ನೇಹಿತರು ಕೋಲ ಸೇವೆ ಕೊಡೋ ಬಗ್ಗೆ ಹೇಳಿದ್ದರು ಕಳೆದ ಹಲವು ವರ್ಷಗಳಿಂದ ನೆನೆಸಿದ್ದೆ ಈಗ ಅರಕೆ ತೀರಿಸೋ ಸಮಯಬಂದಿದೆ ಎಲ್ಲದಕ್ಕೂ ಕಾಲ ಕೂಡಿ ಬರಬೇಕು ಎಂದು ಕುಲಕರ್ಣಿ ತಿಳಿಸಿದ್ದಾರೆ.


