Thursday, July 23, 2026
Homeರಾಜ್ಯಬೆಳಗಾವಿ : ಶಂಕಿತ ಡೆಂಗ್ಯೂ ಜ್ವರಕ್ಕೆ ಬಾಲಕಿ ಬಲಿ.

ಬೆಳಗಾವಿ : ಶಂಕಿತ ಡೆಂಗ್ಯೂ ಜ್ವರಕ್ಕೆ ಬಾಲಕಿ ಬಲಿ.

ಬೆಳಗಾವಿ : ಶಂಕಿತ ಡೆಂಗಿ ಜ್ವರದಿಂದ ಬಳಲುತ್ತಿದ್ದ ಬೆಳಗಾವಿ ಜಿಲ್ಲೆಯ ಕಾಕತಿ ತಾಲೂಕಿನ 14 ವರ್ಷದ ಬಾಲಕಿ ಇಲ್ಲಿನ ಜಿಲ್ಲಾಸ್ಪತ್ರೆಯ ಲ್ಲಿಶನಿವಾರ ಮೃತಪಟ್ಟಿದ್ದಾಳೆ. ಪ್ರನಾಲಿ ಪರಶುರಾಮ ಹುಂದ್ರೆ (14) ಮೃತ ಬಾಲಕಿ. ಜುಲೈ ೨೫ ರಂದು ತೀವ್ರ ಜ್ವರ ಕಾಣಿಸಿಕೊಂಡ ಕಾರಣ ಬೆಳಗಾವಿ ಜಿಲ್ಲಾಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗಿತ್ತು.ಚಿಕಿತ್ಸೆ ಫಲಿಸದೆ ಇಂದು ಬಾಲಕಿ ಜಿಲ್ಲಾಸ್ಪತ್ರೆಯಲ್ಲಿ ಸಾವನಪ್ಪಿದ್ದಾಳೆ.

ಇತ್ತೀಚಿನ ದಿನಗಳಲ್ಲಿ ಡೆಂಗಿ ಜ್ವರ ಹಲವು ಜೀವಗಳು ಬಲಿಯಾಗಿದ್ದು ಇದಕ್ಕೆ ನೇರ ಸರಕಾರವೇ ಹೊಣೆ ಎಂದು ಸ್ಥಳೀಯರು ಆರೋಪಿಸಿದ್ದಾರೆ. ಬಾಲಕಿಯ ಕುಟುಂಸ್ಥರ ಆಕ್ರಂದನ ಮುಗಿಲು ಮುಟ್ಟಿದೆ. ಅದೇ ರೀತಿ ಪಟ್ಟಣದಲ್ಲಿ ಡೆಂಗ್ಯು ತಾಂಡವಾಡುತ್ತಿದ್ದರೂ ಇದರ ಬಗ್ಗೆಯಾವದೇ ರೀತಿಯ ಔಷಧಿ ಸಿಂಪಡನೆ ಕುರಿತು ಕ್ರಮ ವಹಿಸದ ಪುರಸಭೆ ಅಧಿಕಾರಿಗಳ ವಿರುದ್ದ ಜನರು ಹಿಡಿಶಾಪ ಹಾಕುತ್ತಿದ್ದಾರೆ ಎಂದು ಹೇಳಲಾಗುತ್ತಿದೆ.

RELATED ARTICLES

LEAVE A REPLY

Please enter your comment!
Please enter your name here

Most Popular