ನೆಲಮಂಗಲ : ಮಧ್ಯ ರಸ್ತೆಯಲ್ಲಿ ಸ್ಕೂಟರ್ ನಲ್ಲಿ ವೀಲಿಂಗ್ ಮಾಡುತಿದ್ದ ಯುವಕನನ್ನು ನೆಲಮಂಗಲ ಸಂಚಾರಿ ಪೊಲೀಸರು ಬಂಧಿಸಿದ್ದಾರೆ.
ಯುವಕ ಅಭಿಷೇಕ್(20) ನೆಲಮಂಗಲ ನಗರದ ರಾಘವೇಂದ್ರ ನಗರ ನಿವಾಸಿಯಾಗಿದ್ದಾನೆ. ಸಾಮಾಜಿಕ ಜಾಲತಾಣದಲ್ಲಿ ಶೋಕಿಗಾಗಿ ರೀಲ್ಸ್ ಮಾಡುತ್ತಿದ್ದ ಯುವಕ ಇನ್ಸ್‌ಟಾಗ್ರಾಂನಲ್ಲಿ 26 ನಕಲಿ ಖಾತೆಗಳನ್ನು ಹೊಂದಿದ್ದ.ಎಲ್ಲ ಖಾತೆಗಳಿಗೂ 2000 ದಿಂದ 3000 ಫಾಲೋಅರ್ಸ್ ಪೇಜ್ ಹೊಂದಿದ್ದ,ಒಂದೊಂದು ಖಾತೆಯಲ್ಲೂ 17 ರಿಂದ 20 ವೀಲಿಂಗ್ ಮಾಡುವ ವಿಡಿಯೋಗಳನ್ನು ಅಪ್‌ಲೋಡ್ ಮಾಡಿದ್ದನು.
ರಸ್ತೆ ಮದ್ಯೆ ಯುವಕ ವೀಲಿಂಗ್ ಮಾಡುತ್ತಿದ್ದ ಸಂದರ್ಭದಲ್ಲಿ ಸ್ಥಳೀಯ ನಿವಾಸಿಗಳು ವಿಡಿಯೋ ಮಾಡಿ ಪೊಲೀಸ್ ಠಾಣೆಗೆ ದೂರುನೀಡಿದ್ದರು. ಇಂತಹ ಅಬ್ಬೇಪಾರಿ ಯುವಕರಿಂದ ಬಡ ಜೀವಗಳಿಗೆ ಕುತ್ತುತರುವುದಲ್ಲದೆ ಇನ್ನಿತರರ ಜೀವದಲ್ಲಿ ಚೆಲ್ಲಾಟವಾಡುವುದನ್ನು ಕಂಡು ಜನಸಾಮನ್ಯರು ಬೆಚ್ಚಿಬಿದ್ದಿದ್ದಾರೆ.ಈ ಯುವಕ ರಾಷ್ಟ್ರೀಯ ಹೆದ್ದಾರಿಯಲ್ಲಿ ವೀಲಿಂಗ್ ಮಾಡುತ್ತಿದ್ದ ಸಂದರ್ಭದಲ್ಲಿ ಸೆರೆಯಾಗಿದ್ದು ನೆಲಮಂಗಲ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


