Thursday, July 23, 2026
Homeರಾಜ್ಯರಾಯಚೂರು : ಪೊಲೀಸಪ್ಪನ ರಂಗಿನಾಟ : ರೆಡ್​​ಹ್ಯಾಂಡ್ ಆಗಿ ಪತ್ನಿ ಕೈಗೆ ಸಿಕ್ಕಿಬಿದ್ದ ರಸಿಕ ಹೆಡ್​ಕಾನ್ಸ್​ಟೇಬಲ್...

ರಾಯಚೂರು : ಪೊಲೀಸಪ್ಪನ ರಂಗಿನಾಟ : ರೆಡ್​​ಹ್ಯಾಂಡ್ ಆಗಿ ಪತ್ನಿ ಕೈಗೆ ಸಿಕ್ಕಿಬಿದ್ದ ರಸಿಕ ಹೆಡ್​ಕಾನ್ಸ್​ಟೇಬಲ್ .

ರಾಯಚೂರು : ಪ್ರೇಯಸಿ ಜತೆ ಲವ್ವಿ-ಡವ್ವಿ ಮಾಡುತ್ತ ಇರುವಾಗಲೇ ಹೆಡ್​ಕಾನ್ಸ್​ಟೇಬಲ್ ಪತ್ನಿಯ ಕೈಗೆ ರೆಡ್‌ ಹ್ಯಾಂಡಾಗಿ ಸಿಕ್ಕಿ ಬಿದ್ದಿರುವ ಘಟನೆ ರಾಯಚೂರಿನಲ್ಲಿ ನಡೆದಿದೆ. ರಾಯಚೂರಿನ ಸಿರವಾರ ಪೊಲೀಸ್ ರಂಗಿನಾಟಕ್ಕೆ ಖುದ್ದು ಪತ್ನಿಯೇ ಕೆರಳಿದ್ದು ಪ್ರೇಯಸಿ ಜೊತೆ ಇದ್ದ ಪತಿಯನ್ನು ರೆಡ್ ಹ್ಯಾಂಡ್ ಆಗಿ ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾಳೆ‌.

ಮನೆಯಲ್ಲಿ ಪ್ರೇಯಸಿ ಜೊತೆ ಹಾಯಾಗಿದ್ದಾಗ ರೆಡ್​ಹ್ಯಾಂಡ್​ ಆಗಿ ಪತ್ನಿ ಹಾಗೂ ಪೊಲೀಸರ ಕೈಗೆ ಸಿಕ್ಕಿಬಿದ್ದ ಪೊಲೀಸಪ್ಪ ಕ್ಷಣಕಾಲ ಪಜೀತಿಗೊಳಗಾಗಿದ್ದಾನೆ. ಸಿರವಾರ ಠಾಣೆ ಹೆಡ್ ಕಾನ್ಸಟೇಬಲ್ ರಾಜ್ ಮಹಮ್ಮದ್‌ನ ಅಕ್ರಮ ಸಂಬಂಧ ಹೊರಗೆ ಬಂದಿದ್ದು, ಪತ್ನಿಯೇ ಇಬ್ಬರನ್ನೂ ರೆಡ್ ಹ್ಯಾಂಡ್ ಹಿಡಿದು ಪೊಲೀಸರಿಗೆ ವಶಕ್ಕೆ ನೀಡಿದ್ದಾರೆ .

ಈತ ಪೊಲೀಸ್ ಹೆಡ್​ಕಾನ್ಸ್​​ಟೇಬಲ್ ಆಗಿದ್ದು, ರೂಮ್​ ಒಳಗೆ ಮತ್ತೊಬ್ಬಳ ಜೊತೆ ರೆಡ್​ ಹ್ಯಾಂಡ್​ ಆಗಿ ತಗ್ಲಾಕೊಂಡಿದ್ದಾನೆ.ರಾಜ್ ಮಹಮ್ಮದ್‌ ಸಿರವಾರ ಠಾಣೆ ಹೆಡ್ ಕಾನ್ಸಟೇಬಲ್ ಆಗಿದ್ದರೆ ಆತನ ಪತ್ನಿ ಪ್ಯಾರಿ ಬೇಗಂ ದೇವದುರ್ಗ ಠಾಣೆ ಕಾನ್ಸ್ ಟೇಬಲ್ ಆಗಿದ್ದಾರೆ. ವಿಚ್ಚೇದಿತ ಮಹಿಳೆಯೊಂದಿಗೆ ಅಕ್ರಮ ಸಂಬಂಧ ಹೊಂದಿದ್ದ ರಾಜ್ ಮಹಮ್ಮದ್‌ಗೆ ಹಿಂದೆಯೂ ಪತ್ನಿ ಎಚ್ಚರಿಕೆ ನೀಡಿದ್ದರು. ಆದರೂ ಬುದ್ಧಿ ಕಲಿಯದ ಆತ ಇದೀಗ ರೆಡ್‌ ಹ್ಯಾಂಡಾಗಿ ಸಿಕ್ಕಿ ಬಿದ್ದಿದ್ದಾನೆ.

ಎಷ್ಟು ದಿನಂತ ಗಂಡನ ಆಟ ನೋಡಿಕೊಂಡು ಇರುವುದು? ಅಂತೆಯೇ ನಿನ್ನೆ ಇಬ್ಬರನ್ನು ಮನೆಯೊಳಗೆ ಕೂಡಿಹಾಕಿ ಲಾಕ್ ಮಾಡಿದ ಪತ್ನಿ. ಗಂಡನ ವಿರುದ್ಧ ನ್ಯಾಯಕ್ಕಾಗಿ ಪೊಲೀಸ್ ಠಾಣೆ ಮೆಟ್ಟಿಲೇರಿದ ಪ್ಯಾರಿ ಬೇಗಂ. ಇಬ್ಬರನ್ನೂ ರೆಡ್ ಹ್ಯಾಂಡ್ ಆಗಿ ಹಿಡಿದು ಪೊಲೀಸರಿಗೆ ಒಪ್ಪಿಸಲಾಗಿದೆ. ಸಿರವಾರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

RELATED ARTICLES

LEAVE A REPLY

Please enter your comment!
Please enter your name here

Most Popular