Friday, March 13, 2026
Flats for sale
Homeಜಿಲ್ಲೆಶಿರೂರು : ಗುಡ್ಡ ಕುಸಿತ : ನಾಪತ್ತೆಯಾಗಿದ್ದ ಟ್ರಕ್ ಗಂಗಾವಳಿ ನದಿಯಲ್ಲಿ ಪತ್ತೆ, ತಿವ್ರಗೊಂಡ ಕಾರ್ಯಾಚರಣೆ...

ಶಿರೂರು : ಗುಡ್ಡ ಕುಸಿತ : ನಾಪತ್ತೆಯಾಗಿದ್ದ ಟ್ರಕ್ ಗಂಗಾವಳಿ ನದಿಯಲ್ಲಿ ಪತ್ತೆ, ತಿವ್ರಗೊಂಡ ಕಾರ್ಯಾಚರಣೆ : ಸಚಿವ ಕೃಷ್ಣಬೈರೇಗೌಡ ಟ್ವೀಟ್ .

ಶಿರೂರು : ಕಳೆದ ಹಲವು ದಿನಗಳಿಂದ ಸುರಿಯುವ ಧಾರಾಕಾರ ಮಳೆಗೆ ಉತ್ತರ ಕರ್ನಾಟಕ ಭಾಗದಲ್ಲಿ ಜನಜೀವನ ಅಸ್ತವ್ಯಸ್ತಗೊಂಡಿದ್ದು ,ಹಲವು ಸಾವು ನೋವು ಸಂಭವಿಸಿದೆ..ಶಿರೂರು ಬಳಿ ಸಂಭವಿಸಿದ್ದ ಗುಡ್ಡ ಕುಸಿತ ದುರಂತದಲ್ಲಿ ಒಟ್ಟು ಹತ್ತು ಜನರು ಮೃತಪಟ್ಟಿದ್ದು, ಈ ಪೈಕಿ ಕಾರ್ಯಾಚರಣೆ ಮೂಲಕ ಈವರೆಗೆ ಎಂಟು ಜನರ ಮೃತದೇಹಗಳನ್ನು ಪತ್ತೆ ಮಾಡಲಾಗಿದೆ.

ಈ ಬಗ್ಗೆ ಕಂದಾಯ ಸಚಿವ ಕೃಷ್ಣಬೈರೇಗೌಡ ಅವರೇ ಟ್ವೀಟ್ ಮಾಡಿ ಮಾಹಿತಿ ಹಂಚಿಕೊಂಡಿದ್ದಾರೆ. ದುರಂತ ಸಂಭವಿಸಿದ ಎಂಟು ದಿನಗಳು ಕಳೆದ ಬಳಿಕ ಟ್ರಕ್ ಪತ್ತೆಯಾಗಿದ್ದು, ಕಾರ್ಯಚರಣೆ ತೀವ್ರಗೊಂಡಿದೆ. ಆದ್ರೆ, ಚಾಲಕ ಅರ್ಜುನ್ ಟ್ರಕ್​ನಲ್ಲಿ ಸಿಲುಕಿಕೊಂಡಿದ್ದಾರಾ ಅಥವಾ ನದಿಯಲ್ಲಿ ಕೊಚ್ಚಿ ಹೋಗಿದ್ದಾರಾ ಎನ್ನುವುದು ಇನ್ನು ತಿಳಿದುಬಂದಿಲ್ಲ. ಸದ್ಯಕ್ಕೆ ನದಿಯಿಂದ ಟ್ರಕ್​ ಮೇಲೆತ್ತುವ ಕಾರ್ಯ ಭರದಿಂದ ಸಾಗಿದೆ.ಇಂದು ಬೆಳಗ್ಗೆ ಗಂಗಾವಳಿ ನದಿಯಲ್ಲಿ ಬೂಮ್ ಫೋಕ್ಲೇನ್ ಮೂಲಕ ಕಾರ್ಯಾಚರಣೆ ನಡೆಸಲಾಗಿದ್ದು, ಕಾರ್ಯಾಚರಣೆ ವೇಳೆ ಫೋಕ್ಲೇನ್ ಬಕೆಟ್​ಗೆ ಕಬ್ಬಿಣ ಬಡಿದಿದೆ. ಈ ಹಿನ್ನಲೆ ನದಿಯಲ್ಲಿ ವಾಹನ ಒಂದು ಇರುವುದು ಖಚಿತ ಆಗುತ್ತಿದ್ದಂತೆ, ಸ್ಥಳಕ್ಕೆ ಜಿಲ್ಲಾಧಿಕಾರಿ ಲಕ್ಷ್ಮೀಪ್ರಿಯಾ ಹಾಗೂ ಎಸ್ಪಿ ನಾರಾಯಣ ಧಾವಿಸಿದ್ದಾರೆ. ಇದೀಗ ಕಾರ್ಯಾಚರಣೆ ತಿವ್ರಗೊಂಡಿದ್ದು, ಆ ವಾಹನ ಲಾರಿನಾ ಎಂಬ ಪ್ರಶ್ನೆ ಮುಡುತ್ತಿದೆ.

ಒಂದೆಡೆ ಕರ್ನಾಟಕ ಹಾಗೂ ಕೇರಳದಲ್ಲಿ ಅರ್ಜುನ್ ಬದುಕಿ ಬರಲಿ ಎಂದು ಇಡೀ ರಾಜ್ಯವೇ ಪ್ರಾರ್ಥನೆ ಮಾಡುತ್ತಿದೆ. ಇನ್ನು ಜಿಲ್ಲಾಡಳಿತ ಕಾರ್ಯಾಚರಣೆ ನಿಧಾನಗತಿಯಲ್ಲಿ ಮಾಡುತ್ತಿದೆ ಎಂದು ಟ್ರಕ್ ಚಾಲಕ ಅರ್ಜುನ್ ಕುಟುಂಬದ ಸದಸ್ಯರು ಕೋರ್ಟ್​ ಮೆಟ್ಟಿಲೇರಿದರೇ, ಬೆಂಗಳೂರಿನ ಹೈಕೋರ್ಟ್ ರಾಜ್ಯ ಸರ್ಕಾರಕ್ಕೆ ಕಾರ್ಯಾಚರಣೆಯ ವರದಿ ನೀಡುವಂತೆ ಸೂಚಿಸಿತ್ತು. ಶಾಸಕ ಸತೀಶ್ ಸೈಲ್, ‘ಲಾರಿ ಇದೆ ಎನ್ನಲಾದ ಸ್ಥಳಕ್ಕೆ ಹೊಗಿ ಬಂದಿದ್ದೇನೆ. ‘ಬೆಟ್ಟನ ಲೈನ್ ಅವರ ಕೊಟ್ಟ ಲ್ಯಾಂಡ್​ನಲ್ಲಿ ಇರುವ ಬಗ್ಗೆ ಮಾಹಿತಿ ಸಿಕ್ಕಿದೆ. ಅಧಿಕಾರಿಗಳು ಲಾರಿ ಇದೆ ಎನ್ನಲಾಗುತ್ತಿದೆ. ಆದರೆ, ನಮಗೆ ಗಾಡಿ ಇರುವುದು ಕಾಣಿಸುತ್ತಿಲ್ಲ ಎಂದು ಹೇಳಿದ ಮಾತು ಅನುಮಾನ ಮೂಡಿಸಿದೆ.

RELATED ARTICLES

LEAVE A REPLY

Please enter your comment!
Please enter your name here

Most Popular