ಮಂಗಳೂರು : ಭಯಾನಕ ‘ಚಡ್ಡಿ ಗ್ಯಾಂಗ್’ ಕಳ್ಳರ ಎಂಟ್ರಿಯಿಂದ ನಗರದ ಜನರಲ್ಲಿ ಭಯಉಂಟಾಗಿದ್ದು ಇದೀಗ ಆರೋಪಿಗಳನ್ನು ಆರೆಸ್ಟ್ ಮಾಡಿದರೂ ಸ್ಥಳೀಯ ನಿವಾಸಿಗಳಲ್ಲಿ ಭಯದ ವಾತಾವರಣ ಉಂಟಾಗಿದೆ .ಚಡ್ಡಿ ಗ್ಯಾಂಗ್ ಮತ್ಯಾವ ಗ್ಯಾಂಗ್ ಎಂಟ್ರಿ ಆಗ್ತಾರೋ ಎಂಬ ನಡುಕ ಶುರುವಾಗಿದೆ. ಆರ್ಥಿಕವಾಗಿ ಪ್ರಬಲವಾಗಿದ್ದವರು ಮನೆಯ ಸುತ್ತಮುತ್ತ ಸಿಸಿ ಟಿವಿ ಗಳನ್ನೂ ಅಳವಡಿಸಿದ್ದು ನಗರದಲ್ಲಿ ಸಿಸಿ ಟಿವಿಗೆ ಬೇಡಿಕೆ ಹೆಚ್ಚಾಗಿದೆ.
ಮಂಗಳೂರಿನ ನಿವಾಸಿಗಳು ಹೆಚ್ಚಾಗಿ ಬೆಲೆಬಾಳುವ ವಸ್ತುಗಳನ್ನು ಮನೆಯಲ್ಲೇ ಇರಿಸುವುದರಿಂದ ಇಷ್ಟರವರೆಗೆ ಕಳ್ಳರ ದರೋಡೆಕೋರರ ಕಾಟ ಇಲ್ಲದಿರುವುದರಿಂದ ತಲೆಕೆಡಿಸಿಕೊಂಡಿರಲಿಲ್ಲ ಆದರೆ ಈಗ ಕಳೆದ ಕೆಲವು ದಿನಗಳಿಂದ ಮಂಗಳೂರು ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಬ್ಯಾಂಕ್ ಲಾಕರ್‌ಗಳಿಗೆ ಬೇಡಿಕೆ ಹೆಚ್ಚಿದ್ದುಹೊಸ ಲಾಕರ್‌ಗಳನ್ನು ತೆರೆಯುವುದು ಮತ್ತು ವಿಚಾರಣೆಯ ಜೊತೆಗೆ, ಗ್ರಾಹಕರಿಂದ ಈಗಿರುವ ಲಾಕರ್‌ಗಳ ಕಾರ್ಯಾಚರಣೆಯೂ ಹೆಚ್ಚಾಗಿದೆ ಎಂದು ಮೂಲಗಳು ತಿಳಿಸಿವೆ.
ರಾಷ್ಟ್ರೀಕೃತ ಬ್ಯಾಂಕ್ ಸುರಕ್ಷಿತವಾಗಿರುವುದರಿಂದ ಹೆಚ್ಚು ಜನರು ರಾಷ್ಟ್ರೀಕೃತ ಮತ್ತು ಸಹಕಾರಿ ಬ್ಯಾಂಕ್‌ಗಳಲ್ಲಿ ಠೇವಣಿ ಇಡುತ್ತಾರೆ .ಇಲ್ಲಿ ಬಾಡಿಗೆಯೂ ಕೂಡ ಕಡಿಮೆ ಹಾಗೂ ಯಾವುದೇ ತಲೆನೋವು ಇರುವುದಿಲ್ಲವೆಂಬ ಭಾವನೆ.ನಗರದಲ್ಲಿ ಕುಖ್ಯಾತ ಚಡ್ಡಿಗ್ಯಾಂಗ್ ಮನೆಗಳಲ್ಲಿ ಕಳ್ಳತನ ಮಾಡುತ್ತಿದ್ದು, ವೃದ್ದರ ಮೇಲೆ ಹಲ್ಲೆ ಮಾಡಿ ಲೂಟಿ ಮಾಡುತ್ತಿವೆ. ಈ ಬೆಳವಣಿಗೆಯ ಬಳಿಕ ಬ್ಯಾಂಕ್ ಲಾಕರ್ ಗಳಿಗೆ ಬೇಡಿಕೆ ಹೆಚ್ಚಾಗುತ್ತಿದೆ ಎಂದು ಬ್ಯಾಂಕ್ ಉದ್ಯೋಗಿ ಮಾಧ್ಯಮಕ್ಕೆ ತಿಳಿಸಿದ್ದಾರೆ.
ಪ್ರಸ್ತುತ ರಾಷ್ಟ್ರೀಕೃತ ಬ್ಯಾಂಕ್‌ಗಳು 15,000 ರಿಂದ 40,000 ರವರೆಗಿನ ಆರಂಭಿಕ ಠೇವಣಿಯೊಂದಿಗೆ ಗಾತ್ರವನ್ನು ಅವಲಂಬಿಸಿ ಸುರಕ್ಷಿತ ಠೇವಣಿ ಲಾಕರ್‌ಗೆ 1,500 ರಿಂದ 7,500 ರವರೆಗೆ ವಾರ್ಷಿಕ ಬಾಡಿಗೆಯನ್ನು ವಿಧಿಸುತ್ತವೆ, ಇದು ಲಾಕರ್ ಅನ್ನು ಒಪ್ಪಿಸುವಾಗ ಮರುಪಾವತಿಸಲ್ಪಡುತ್ತದೆ ಆದರೆ ಇತ್ತೀಚಿಗೆ ಗ್ರಾಹಕರು ಬ್ಯಾಂಕ್ ಗೆ ಹೋಗಿ ಲಾಕರ್ ಬೇಕೆಂದರೆ ಬೇಡಿಕೆ ಇಟ್ಟರೆ ಬ್ಯಾಂಕ್ ಗಳಲ್ಲಿ ಲಾಕರ್ ನ ಅಭಾವ ಉಂಟಾಗಿದೆ. ಇಷ್ಟರವರೆಗೆ ಬೆಲೆಬಾಳುವ ವಸ್ತುಗಳನ್ನು ಮನೆಯಲ್ಲೇ ಧೈರ್ಯದಲ್ಲಿ ಇಡುತ್ತಿದ್ದ ಜನರಿಗೆ ಈ ಚಡ್ಡಿ ಗ್ಯಾಂಗ್ ನ ಕೃತ್ಯದಿಂದ ದಿಗಿಲುಬಡಿದಂತಾಗಿದೆ.


