Friday, March 13, 2026
Flats for sale
Homeರಾಜ್ಯಬೆಂಗಳೂರು : ಕ್ಯಾನ್ಸರ್‌ನಿಂದ ಮೃತಪಟ್ಟ ಗಂಡ : ಮಾನಸಿಕ ಖಿನ್ನತೆಯಲ್ಲಿದ್ದ ತಾಯಿ ಮಗನನ್ನು ಕೊಂದು ನೇಣಿಗೆ...

ಬೆಂಗಳೂರು : ಕ್ಯಾನ್ಸರ್‌ನಿಂದ ಮೃತಪಟ್ಟ ಗಂಡ : ಮಾನಸಿಕ ಖಿನ್ನತೆಯಲ್ಲಿದ್ದ ತಾಯಿ ಮಗನನ್ನು ಕೊಂದು ನೇಣಿಗೆ ಶರಣು,ಸತ್ತ 4 ದಿನದ ಬಳಿಕ ಪ್ರಕರಣ ಬಯಲು.

ಬೆಂಗಳೂರು : 3 ತಿಂಗಳ ಹಿಂದೆ ಗಂಡ ಕ್ಯಾನ್ಸರ್ ರೋಗದಿಂದ ಮೃತಪಟ್ಟ ಹಿನ್ನೆಲೆ ಪತ್ನಿ ತನ್ನ ಹೆತ್ತ ಮಗನನ್ನು ನೇಣಿಗೇರಿಸಿ ಬಳಿಕ ತಾಯಿಯು ಮೃತಪಟ್ಟ ಹೃದಯವಿಧ್ರಹಕ ಘಟನೆ ಬೆಂಗಳೂರಿನಲ್ಲಿ ನಡೆದಿದೆ.

ಮೃತರನ್ನು ಭಾರ್ಗವ್ ಪುಲಿವರ್ತ ಹಾಗೂ ರಮ್ಯಾ ಜಿ. ಎಂದು ಗುರುತಿಸಲಾಗಿದೆ. ಬೆಂಗಳೂರಿನ ಯಲಹಂಕದ RNZ ಅಪಾರ್ಟ್‌ಮೆಂಟ್‌ನಲ್ಲಿ ನೆಲೆಸಿದ್ದ 40 ವರ್ಷದ ರಮ್ಯಾ ಅವರು 13 ವರ್ಷದ ಭಾರ್ಗವ್ ಪುಲಿವರ್ತ ಎಂಬ ಮಗನನ್ನು ಮೊದಲಿಗೆ ಕೊಲೆ ಮಾಡಿದ್ದಾರೆ. ಮಗನ ಸಾವಿನ ಬಳಿಕ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಅಂತ ಶಂಕಿಸಲಾಗಿದೆ.

ಕಳೆದ ಮೂರು ತಿಂಗಳ ಹಿಂದೆ ಕ್ಯಾನ್ಸರ್‌ನಿಂದ ಸಾವನ್ನಪ್ಪಿದ್ದರು. ಇದರಿಂದ ಮಾನಸಿಕ ಖಿನ್ನತೆಯಲ್ಲಿದ್ದ ತಾಯಿ ಮಗನನ್ನು ಕೊಂದು ನೇಣಿಗೆ ಶರಣಾಗಿದ್ದಾರೆ ಎನ್ನಲಾಗಿದೆ.ರಮ್ಯಾ ಅವರ 19 ವರ್ಷದ ಮಗಳು ಪಿಜಿಯಲ್ಲಿದ್ದಾಳೆ. ಕಳೆದ ಜುಲೈ 9ನೇ ತಾರೀಖು ರಾತ್ರಿ ಮಗಳ ಜೊತೆ ರಮ್ಯಾ ಮಾತನಾಡಿದ್ದರು. ಅದಾದ ಮೇಲೆ ರಮ್ಯಾ ಅವರು ಸಂಪರ್ಕಕ್ಕೆ ಸಿಕ್ಕಿಲ್ಲ. ಮನೆಯಲ್ಲಿ ರಮ್ಯಾ ಅವರು ಮೊದಲು ಮಗನನ್ನು ನೇಣು ಹಾಕಿದ್ದಾರೆ. ಮಗನನ್ನು ನೇಣಿನ ಕುಣಿಕೆಯಿಂದ ಬಿಡಿಸಿ ಬೆಡ್ ಮೇಲೆ ಮಲಗಿಸಿದ್ದಾರೆ. ಆನಂತರ ತಾಯಿ ಕೂಡ ನೇಣಿಗೆ ಶರಣಾಗಿದ್ದಾರೆ. ತಾಯಿ, ಮಗ ಇಬ್ಬರು ಸತ್ತ ನಾಲ್ಕು ದಿನದ ನಂತರ ಈ ಪ್ರಕರಣ ಬೆಳಕಿಗೆ ಬಂದಿದೆ.

ಬೆಗಳೂರಿನಲ್ಲಿ ನೆಲೆಸಿರುವ ರಮ್ಯಾ ಅವರ ಕುಟುಂಬಕ್ಕೆ ಫ್ಲ್ಯಾಟ್ ಬಾಡಿಗೆ 45 ಸಾವಿರ, ಶಾಲೆ ಫೀಸ್, ಮನೆ ನಿರ್ವಹಣೆ ಖರ್ಚು ಅಂತ ತಿಂಗಳಿಗೆ ಲಕ್ಷ, ಲಕ್ಷ ಹಣ ಬೇಕಿತ್ತು. ಹಣ ಹೊಂದಿಸೋದು ರಮ್ಯಾಳಿಗೆ ಆಗುತ್ತಿರಲಿಲ್ಲ. ಇದೇ ಕಾರಣಕ್ಕೆ ಖಿನ್ನತೆಗೊಳಗಾಗಿದ್ದ ರಮ್ಯಾ ಅವರು ಪೊಲೀಸರು, ಡಾಕ್ಟರ್‌ಗೆ ಮತ್ತು ಮಗಳಿಗೆ ಪತ್ರ ಬರೆದು ನೇಣಿಗೆ ಶರಣಾಗಿದ್ದಾರೆ.ಒಟ್ಟಿನಲ್ಲಿ ಈ ಕ್ಯಾನ್ಸರ್ ಎಂಬ ಮಹಾಮಾರಿ ಹಲವು ಕುಟುಂಬಗಳನ್ನು ಸರ್ವನಾಶ ಮಾಡಿದ್ದೂ ಜನಸಾಮಾನ್ಯರು ನರಕಯಾತನೆ ಪಡುವಂತೆ ಮಾಡಿದೆ.

RELATED ARTICLES

LEAVE A REPLY

Please enter your comment!
Please enter your name here

Most Popular