Friday, July 24, 2026
Homeರಾಜ್ಯಶಿರಾ ; ರಸ್ತೆ ದಾಟುತ್ತಿದ್ದ ಕುರಿಗಳ ಮೇಲೆ KSRTC ಬಸ್ಸ್ ಹರಿದು 20 ಕುರಿಗಳು ಸಾವು.

ಶಿರಾ ; ರಸ್ತೆ ದಾಟುತ್ತಿದ್ದ ಕುರಿಗಳ ಮೇಲೆ KSRTC ಬಸ್ಸ್ ಹರಿದು 20 ಕುರಿಗಳು ಸಾವು.

ಶಿರಾ ; ಸರ್ಕಾರಿ ಬಸ್ ವೊಂದು ಕುರಿಗಳ ಹಿಂಡಿನ ಮೇಲೆ ಹರಿದಿದ್ದು, ಸ್ಥಳದಲ್ಲೇ ಕುರಿಗಾಹಿ ಹಾಗೂ 20 ಕುರಿಗಳು ಸಾವನ್ನಪ್ಪಿರುವ ದಾರುಣ ಘಟನೆ ಶಿರಾ ನಗರದ ಹೊರವಲಯದಲ್ಲಿ ನಡೆದಿದೆ.

ಶಿರಾ ಚಿತ್ರದುರ್ಗ ರಾಷ್ಟ್ರೀಯ ಹೆದ್ದಾರಿ 48 ರಲ್ಲಿ ಈ ದುರಂತ ಸಂಭವಿಸಿದೆ.ಬೆಂಗಳೂರು ಕಡೆಯಿಂದ ದಾವಣಗೆರೆ ಕಡೆಗೆ ಹೋಗುತ್ತಿದ್ದ KSRTC ಹವಾನಿಯಂತ್ರಿತ ಎಲೆಕ್ಟ್ರಿಕ್ ಬಸ್
ರಸ್ತೆಗೆ ಅಡಲಾಗಿ ಹೋಗುತ್ತಿದ್ದ ಕುರಿಗಳ ಮೇಲೆ ಹರಿದಿದೆ ಎಂದು ತಿಳಿದು ಬರುತ್ತದೆ.

ಶಿರಾ ಗುಡ್ಡದಹಟ್ಟಿಯ ಕುರಿಗಾಹಿ ಚಿತ್ತಪ್ಪ ಮತ್ತು ನಾಗರಾಜ್ ಎಂಬುವರಿಗೆ ಸೇರಿದ ಕುರಿಗಳು. ಅಪಘಾತದಲ್ಲಿ ಸುಮಾರು 20 ಕುರಿಗಳು ಮೃತಪಟ್ಟಿದೆ ಎಂದು ತಿಳಿದು ಬರುತ್ತದೆ ಘಟನೆ ಸ್ಥಳಕ್ಕೆ ಶಿರಾ ಶಾಸಕ ಹಾಗೂ ರಾಜ್ಯ ಸರ್ಕಾರದ ದೆಹಲಿ ವಿಶೇಷ ಪ್ರತಿನಿಧಿ ಟಿ.ಬಿ. ಜಯಚಂದ್ರ, ಭೇಟಿ ನೀಡಿ ಮಾಹಿತಿ ಪಡೆದಿದ್ದಾರೆ. ಶಿರಾ ನಗರ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

RELATED ARTICLES

LEAVE A REPLY

Please enter your comment!
Please enter your name here

Most Popular