Friday, March 13, 2026
Flats for sale
Homeಸಿನಿಮಾಬೆಂಗಳೂರು : ಪವಿತ್ರಾ ಗೌಡಗೆ ಅಶ್ಲೀಲ ಮೆಸೇಜ್ ಮಾಡಿದ್ದಕ್ಕೆ ರೇಣುಕಾ ಸ್ವಾಮಿ ಕೊಲೆ :...

ಬೆಂಗಳೂರು : ಪವಿತ್ರಾ ಗೌಡಗೆ ಅಶ್ಲೀಲ ಮೆಸೇಜ್ ಮಾಡಿದ್ದಕ್ಕೆ ರೇಣುಕಾ ಸ್ವಾಮಿ ಕೊಲೆ : ಸ್ಯಾಂಡಲ್ ವುಡ್ ಚಾಲೆಂಜಿಂಗ್ ಸ್ಟಾರ್ ದರ್ಶನ್ ಬಂಧನ…!

ಬೆಂಗಳೂರು : ಚಾಲೆಂಜಿಂಗ್ ಸ್ಟಾರ್ ನಟ ದರ್ಶನ್ ಅವರನ್ನು ಬಂಧಿಸಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.ನಟಿ ಪವಿತ್ರಾ ಗೌಡಗೆ ಅಶ್ಲೀಲವಾಗಿ ಮೆಸೇಜ್ ಮಾಡಿದ್ದಕ್ಕೆ ರೇಣುಕಾ ಸ್ವಾಮಿ ಎಂಬುವವರು ಕೊಲೆ ಆಗಿದ್ದರು. ನಟ ದರ್ಶನ್ ಅವರ ಸೂಚನೆ ಮೇರೆಗೆ ಕೊಲೆ ನಡೆದಿದೆ ಎನ್ನಲಾಗಿದೆ. ಈ ಪ್ರಕರಣ ಸದ್ಯ ಸೆನ್ಸೇಷನ್ ಸೃಷ್ಟಿ ಮಾಡಿದೆ. ಮೈಸೂರಿನ ಫಾರ್ಮ್​​ಹೌಸ್​ನಲ್ಲಿ ನಟ ದರ್ಶನ್​ ಅರೆಸ್ಟ್ ಆಗಿದ್ದಾರೆ ಎಂದು ತಿಳಿದು ಬಂದಿದೆ.

ಕೊಲೆಯಾದ ಯುವಕ ರೇಣುಕಾ ಸ್ವಾಮಿ..

ಚಾಲೆಂಜಿಂಗ್ ಸ್ಟಾರ್ ನಟ ದರ್ಶನ್ ಜೊತೆ ಇರೋ ಫೋಟೋಗಳನ್ನು ಪವಿತ್ರಾ ಗೌಡ ಹಂಚಿಕೊಂಡಿದ್ದರು. ಪವಿತ್ರಾ ಗೌಡಗೆ ಚಿತ್ರದುರ್ಗದ ರೇಣುಕಾ ಸ್ವಾಮಿ ಎಂಬುವವರು ಅಶ್ಲೀಲ ಮೇಸೆಜ್ ಮಾಡಿದ್ದರು. ಕಾಮಾಕ್ಷಿಪಾಳ್ಯದಲ್ಲಿ ರೇಣುಕಾಸ್ವಾಮಿಯ ಕೊಲೆ ಆಗಿತ್ತು. ದರ್ಶನ್ ಸೂಚನೆ ಮೇಲೆ ಕೊಲೆ ಮಾಡಿದ್ದಾಗಿ ನಾಲ್ವರು ಆರೋಪಿಗಳು ಬಾಯ್ಬಿಟ್ಟಿದ್ದಾರೆ. ಬೆಂಗಳೂರಿನಲ್ಲಿ ಚಿತ್ರದುರ್ಗ ಮೂಲದ ರೇಣುಕಾಸ್ವಾಮಿ ಹತ್ಯೆ ನಡೆದಿತ್ತು. ರೇಣುಕಾಸ್ವಾಮಿ ಚಿತ್ರದುರ್ಗದ ಲಕ್ಷ್ಮೀ ವೆಂಕಟೇಶ್ವರ ಬಡಾವಣೆಯ ನಿವಾಸಿಯಾಗಿದ್ದು, ಅಪೊಲೋ ಮೆಡಿಕಲ್ ನಲ್ಲಿ ಕಾರ್ಯನಿರ್ವಹಿಸುತ್ತಿದ್ದನು. ಶನಿವಾರ ಮನೆಯಿಂದ ಹೊರಟವನು ವಾಪಸ್ ಬಂದಿರಲಿಲ್ಲ. ನಿನ್ನೆ ಬೆಂಗಳೂರು ಪೊಲೀಸರು ರೇಣುಕಾಸ್ವಾಮಿ ಶವವಾಗಿ ಪತ್ತೆ ಆಗಿರುವ ಮಾಹಿತಿಯನ್ನು ಕುಟುಂಬಸ್ಥರಿಗೆ ನೀಡಲಾಗಿತ್ತು. ಘಟನೆ ವೇಳೆ ಸ್ಥಳದಲ್ಲಿ ದರ್ಶನ್ ಕೂಡ ಇದ್ದರು ಎನ್ನಲಾಗಿದೆ. ಈ ಪ್ರಕರಣದಲ್ಲಿ ದರ್ಶನ್ ಸೇರಿ 10 ಜನರನ್ನು ಬಂಧಿಸಲಾಗಿದೆ.

ಡಿಸಿಪಿ ಗಿರೀಶ್ ನೇತೃತ್ವದ ತಂಡದಿಂದ ದರ್ಶನ್ ಬಂಧನವಾಗಿದೆ. ಕಾಮಾಕ್ಷಿಪಾಳ್ಯ ಪೊಲೀಸರಿಂದ ಚಾಲೆಂಜಿಂಗ್ ಸ್ಟಾರ್ ಅವರನ್ನು ಬಂಧಿಸಲಾಗಿದೆ. ಪರಿಚಯಸ್ತ ಮಹಿಳೆಗೆ ಯುವಕ ಮೇಸೇಜ್ ಮಾಡಿದ್ದ ಆರೋಪದ ಮೇಲೆ ​ಆತನಿಗೆ ದರ್ಶನ್ ಹೊಡೆದಿದ್ದಾರೆ ಎನ್ನಲಾಗಿದೆ. ಹೊಡೆದ ಏಟಿಗೆ ಯುವಕ ಗಂಭಿರವಾಗಿ ಗಾಯಗೊಂಡಿದ್ದನು. ಹರಿದಾಡುತ್ತಿರುವ ಮಾಹಿತಿಯಂತೆ ದರ್ಶನ್​ ಹೊಡೆಯುವ ಬರದಲ್ಲಿ ಯುವಕನ ಮರ್ಮಾಂಗಕ್ಕೆ ಒದ್ದಿದ್ದರು.ಒದ್ದ ಬೆನ್ನಲ್ಲೇ ಯುವಕ ಆಯತಪ್ಪಿ ನೆಲಕ್ಕೆ ಬಿದ್ದಿದ್ದ. ನೆಲದ ಮೇಲೆ ಬಿದ್ದ ಯುವಕ ನೋವಿನಿಂದ ಒದ್ದಾಡುತ್ತಿದ್ದ. ಹೀಗಿದ್ದೂ ದರ್ಶನ್, ಆಸ್ಪತ್ರೆಗೆ ಕರೆದುಕೊಂಡು ಹೋಗದೇ ನಿರ್ಲಕ್ಷ್ಯ ಮಾಡಿದ್ದಾರೆ ಎಂಬ ಆರೋಪ ಕೇಳಿಬಂದಿದೆ.

ಇನ್ನು ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ದರ್ಶನ್ ಜೊತೆಗೆ 10 ಜನರನ್ನು ಬಂಧಿಸಲಾಗಿದೆ. ಖ್ಯಾತ ಹೋಟೆಲ್ ಉದ್ಯಮಿ ವಿನಯ್ ಎಂಬಾತನನ್ನು ಕೂಡ ಬಂಧಿಲಾಗಿದೆ. ಜೂ.8 ರ ರಾತ್ರಿ ವಿನಯ್ ಕಾರ್ ಶೆಡ್ ನಲ್ಲಿ ರೇಣುಕಾ ಸ್ವಾಮಿಯನ್ನು ಇಟ್ಟು ಹಲ್ಲೆ ಮಾಡಲಾಗಿತ್ತು ಎಂದು ವರದಿ ತಿಳಿಸಿದೆ.

RELATED ARTICLES

LEAVE A REPLY

Please enter your comment!
Please enter your name here

Most Popular