Thursday, July 23, 2026
Homeಕ್ರೈಂಚಿತ್ರದುರ್ಗ : ದೆವ್ವ ಮೆಟ್ಟಿದೆ ದೈಹಿಕ ಸುಖ ಕೊಟ್ಟರೆ ಶಾಂತಿ ಆಗುತ್ತದೆ ಎಂದು ದೆವ್ವದ ನೆಪ...

ಚಿತ್ರದುರ್ಗ : ದೆವ್ವ ಮೆಟ್ಟಿದೆ ದೈಹಿಕ ಸುಖ ಕೊಟ್ಟರೆ ಶಾಂತಿ ಆಗುತ್ತದೆ ಎಂದು ದೆವ್ವದ ನೆಪ ಹೇಳಿ ಬಾಲಕಿ ಮೇಲೆ ಮೌಲ್ವಿಯಿಂದ ಅತ್ಯಾಚಾರ.

ಚಿತ್ರದುರ್ಗ : ದೆವ್ವ ಮೆಟ್ಟಿದೆ ದೈಹಿಕ ಸುಖ ಕೊಟ್ಟರೆ ಶಾಂತಿ ಆಗುತ್ತದೆ ಎಂದು ನಂಬಿಸಿದ್ದ ಮೌಲ್ವಿಯೊಬ್ಬ ಅಪ್ರಾಪ್ತ ಬಾಲಕಿ ಮೇಲೆ ಒಂದೂವರೆ ವರ್ಷದಿಂದ ಲೈAಗಿಕ ದೌರ್ಜನ್ಯ ನಡೆಸಿರುವ ಘಟನೆ ನಗರದಲ್ಲಿ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ.

ಚಿತ್ರದುರ್ಗದಲ್ಲಿನ ಮಸೀದಿಯ ಹಜರತ್ (ಮೌಲ್ವಿ) ಅಬ್ದುಲ್ ರಹೆಮಾನ್ ಅಪ್ರಾಪ್ತ ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿರುವ ವ್ಯಕ್ತಿ. ಈತನ ಮೇಲೆ ಮಹಿಳಾ ಪೊಲೀಸ್ ಠಾಣೆಯಲ್ಲಿ ಫೋಕ್ಸೋ ಪ್ರಕರಣ ದಾಖಲಾಗಿದ್ದು, ಆರೋಪಿ ಮೌಲ್ವಿಯನ್ನು ಮಹಿಳಾ ಠಾಣೆ ಪೊಲೀಸರು ಬಂಧಿಸಿದ್ದಾರೆ.

ಕಳೆದ 3 ವರ್ಷದಿಂದ ಪಿಯುಸಿ ವ್ಯಾಸಾಂಗ ಮಾಡುತ್ತಿದ್ದ ಅಪ್ರಾಪ್ತ ಬಾಲಕಿ ಖುರಾನ್ ಓದಲು ಮಸೀದಿಗೆ ಹೋಗುತ್ತಿದ್ದರು. ಬಾಲಕಿಗೆ ಗಾಳಿ ಸೋಂಕಿದೆ ಪೂಜೆ ಮಾಡಬೇಕು ಎಂದು ಬಾಲಕಿಯ ಪೊಷಕರನ್ನು ನಂಬಿಸಿದ್ದ ಮೌಲ್ವಿ, ಮನೆಯಲ್ಲೇ ಪರಿಹಾರಕ್ಕಾಗಿ ಪೂಜೆ ಮಾಡಬೇಕು ಎಂದು ಹೇಳಿದ್ದರು. ಅದರಂತೆ ಮನೆಗೆ ಬಂದು ಬಾಲಕಿಯನ್ನು ರೂಮಿಗೆ ಕರೆದೊಯ್ಯುತ್ತಿದ್ದ ಮೌಲ್ವಿ, ತಾಯಿಯನ್ನು ಮನೆಯ ಹೊರಗೆ ಇರುವಂತೆ ಹೇಳಿ, ಬಾಲಕಿಯ ಸಹೋದರನಿಗೂ ರೂಮಿಗೆ ಕರೆದೊಯ್ಯುತ್ತಿದ್ದರು. ನಂತರ ಬಾಲಕಿಗೆ ದೆವ್ವ ಮೆಟ್ಟಿದೆ. ಬಾಲಕಿಯ ದೇಹವನ್ನು ಅಕ್ರಮಿಸಿರುವ ದೆವ್ವಕ್ಕೆ ದೈಹಿಕ ಸುಖ ಕೊಟ್ಟರೆ ಶಾಂತಿ ಆಗುತ್ತದೆ ಎಂದು ಸಹೋದರನಿಗೆ ನಂಬಿಸಿದ್ದನು. ಅಲ್ಲದೆ ಸಹೋದರಿ ಮೇಲೆ ಲೈಂಗಿಕ ದೌರ್ಜನ್ಯ ನಡೆಸುವಂತೆ ಪ್ರೇರಣೆ ನೀಡಿ ಸಹೋದರನಿಂದಲೇ ಅತ್ಯಾಚಾರ ಮಾಡಿಸಿದ್ದನು ಮತ್ತು ಬಾಲಕಿ ಮೇಲೆ ಸಹೋದರ ಅತ್ಯಾಚಾರ ಎಸಗಿದನ್ನು ವಿಡಿಯೋ ರೆಕಾರ್ಡ್ಮಾ ಡಿದ್ದನು. ಇದಾದ ಬಳಿಕಾ, ಮೌಲ್ವಿಯೂ ಕೂಡ ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ ಎಂದು ಬಾಲಕಿಯ ತಾಯಿ ಠಾಣೆಗೆ ನೀಡಿರುವ ದೂರಿನಲ್ಲಿ ತಿಳಿಸಿದ್ದಾರೆ.

6-7 ತಿಂಗಳುಗಳ ಕಾಲ ವಾರಕ್ಕೊಮ್ಮೆ ನಿರಂತರ ಲೈಂಗಿಕ ದೌರ್ಜನ್ಯ ನಡೆಸಿದ್ದು, ಬಾಲಕಿಗೆ ಹೊಟ್ಟೆ ನೋವು ಕಾಣಿಸಿಕೊಂಡ ಕಾರಣ ಆಸ್ಪತ್ರೆಗೆ ದಾಖಲು ಮಾಡಿದಾಗ ಪ್ರಕರಣ ಬಯಲಿಗೆ ಬಂದಿದೆ. ಆರೋಪಿ ಮೌಲ್ವಿ ಹಾಗೂ ಸಂತ್ರಸ್ತೆಯ ಸಹೋದರನ ವಿರುದ್ಧ ಸಂತ್ರಸ್ತೆಯ ತಾಯಿ ಮಹಿಳಾ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

Most Popular