Saturday, March 14, 2026
Flats for sale
Homeರಾಜ್ಯಗಂಗಾವತಿ : ಶ್ರೀಲಂಕಾದ ಸೀತಾ ದೇಗುಲಕ್ಕೆ ಅಂಜನಾದ್ರಿಯಿಂದ ಜಲ, ಮೃತ್ತಿಗೆ.

ಗಂಗಾವತಿ : ಶ್ರೀಲಂಕಾದ ಸೀತಾ ದೇಗುಲಕ್ಕೆ ಅಂಜನಾದ್ರಿಯಿಂದ ಜಲ, ಮೃತ್ತಿಗೆ.

ಗಂಗಾವತಿ : ಶ್ರೀಲಂಕಾದ ಕೊಲಂಬೊ ಸಮೀಪದ ನೂವರಿಲಿಯಾ ಎಂಬಲ್ಲಿ ಇತ್ತೀಚೆಗೆ ನೂತನವಾಗಿ ಪುನರ್ ಜೀಣರ್ೋದ್ಧಾರ ಮಾಡಲಾಗಿರುವ ಸೀತಾದೇಅಂಜನಾದ್ರಿ ದೇಗುಲದಲ್ಲಿ ಭಾನುವಾರ ವಿಶೇಷ ಪೂಜೆ ಸಲ್ಲಿಸಿ ಇಲ್ಲಿಂದ ತುಂಗಭದ್ರಾ ಜಲ, ಸೀರೆ, ಮಂಗಳದ್ರವ್ಯ, ಮತ್ತು ಮೃತ್ತಿಕೆ (ಮಣ್ಣು) ತೆಗೆದುಕೊಂಡು ಹೋಗಲಾಯಿತು.

ಬೆಂಗಳೂರಿನ ಆಟರ್್ ಆಫ್ ಲೀವಿಂಗ್ ಸಂಸ್ಥೆಯ ಮುಖ್ಯಸ್ಥ ರವಿ ದೇಗುಲಕ್ಕೆ ತಾಲ್ಲೂಕಿನ ವಿಶಂಕರ್ ಅವರ ನೇತೃತ್ವದಲ್ಲಿ ನೂರಾರು ಶಿಷ್ಯಂದಿರು ಇದೇ ಮೇ.19ರಂದು ಕಿಷ್ಕಿಂಧೆಯಿಂದ ತೆಗೆದುಕೊಂಡು ಹೋಗುವ ಸಾಮಾಗ್ರಿಗಳೊಂದಿಗೆ ಶ್ರೀಲಂಕಾಕ್ಕೆ ತೆರಳಿ ಅಲ್ಲಿ ನೂತನವಾಗಿ ನಿಮರ್ಾಣವಾಗಿರುವ ಸೀತಾ ದೇಗುಲದಲ್ಲಿ ವಿಶೇಷ ಪೂಜೆ ಸಲ್ಲಿಸಲಿದ್ದಾರೆ.

ಭಾನುವಾರ ಚಿಕ್ಕರಾಂಪೂರದಲ್ಲಿರುವ ಅಂಜನಾದ್ರಿ ದೇಗುಲದಲ್ಲಿ ಆಟರ್್ ಆಫ್ ಲೀವಿಂಗ್ ಸಂಸ್ಥೆಯ ಆಡಳಿತ ಆಪೆಕ್ಸ್ ಸದಸ್ಯ ಸಂತೋಷ್ ಕೇಲೋಜಿ ಹಾಗೂ ಸದಸ್ಯ ಹೊಸಪೇಟೆಯ ಸಂತೋಷ್ ಶ್ರೀನಿವಾಸಲು ನೇತೃತ್ವದಲ್ಲಿ ವಿಶೇಷ ಪೂಜೆ ಸಲ್ಲಿಸಿ ಸಂಕಲ್ಪ ಮಾಡಲಾಯಿತು. ಬಳಿಕ ಈ ಬಗ್ಗೆ ಮಾತನಾಡಿದ ಸಂತೋಷ್ ಕೆಲೋಜಿ, ಅಯೋಧ್ಯೆಯಲ್ಲಿ ಶ್ರೀರಾಮ ಮಂದಿರ ಪ್ರತಿಷ್ಠಾಪನೆಯಾದ ಬಳಿಕ ಶ್ರೀಲಂಕಾದಲ್ಲಿರುವ ಪುರಾತನ ಕಾಲದ ಸೀತಾಮಾತೆಯ ದೇಗುಲ ಪುನರ್ ಪ್ರತಿಷ್ಠಾಪನೆಯಾಗಿದೆ. ಇದಕ್ಕಾಗಿ ಅಯೋಧ್ಯೆ, ನೇಪಾಳ ಮತ್ತು ಕಿಷ್ಕಿಂಧಾ ಅಂಜನಾದ್ರಿಯಲ್ಲಿ ವಿಶೇಷ ಪೂಜೆ ಸಲ್ಲಿಸಲಾಗಿದೆ.

ಆಂಜನೇಯ ಸ್ವಾಮಿಯ ಸನ್ನಿಧಾನದಲ್ಲಿ ವಿಶೇಷ ಪೂಜೆ ಸಲ್ಲಿಸಲಾಗಿದ್ದು, ಅಖಂಡ ಹಿಂದುರಾಷ್ಟ್ರ ನಿರ್ಮಾಣ ಹಿಂದು ಧರ್ಮದ ಪುನರುತ್ಥಾನ, ದೇಶದ ಸಮಗ್ರ ಅಭಿವೃದ್ಧಿ, ಕಾಲಕಾಲಕ್ಕೆ ಸಮೃದ್ಧ ಮಳೆ-ಬೆಳೆಗೆ ಪ್ರಾಥರ್ಿಸಿ ಸಂಕಲ್ಪ ಮಾಡಲಾಗಿದೆ.

ಈ ಮೂರು ದೇಗುಲಗಲ್ಲಿ ವಿಶೇಷ ಸಂಕಲ್ಪ ಪೂಜೆ ಸಲ್ಲಿಸಿ ಆಯಾ ದೇಗುಲಗಳಿಂದ ವಿಶೇಷ ಮಂಗಳದ್ರವ್ಯಗಳನ್ನು ತೆಗೆದುಕೊಂಡು ಶ್ರೀಲಂಕೆಯ ಸೀತಾಮಾತೆಯ ದೇಗುಲಕ್ಕೆ ತೆರಳಿ ಅಲ್ಲಿ ವಿಶೇಷ ಪೂಜೆ ಸಲ್ಲಿಸಲಾಗುತ್ತಿದೆ. ಆಟರ್್ ಆಫ್ ಲೀವಿಂಗ್ನ ಮುಖ್ಯಸ್ಥ ರವಿಶಂಕರ ಗುರೂಜಿ ನೇತೃತ್ವದಲ್ಲಿ ಮೇ. 19ಕ್ಕೆ ಸಂಸ್ಥೆಯ ಪ್ರಮುಖರು ಲಂಕೆಗೆ ಹೋಗಲಿದ್ದೇವೆ.

ಮೇ. 20ರಂದು ಶ್ರೀಲಂಕೆಯ ಸೀತಾಮಾತೆಯ ದೇಗುಲದಲ್ಲಿ ರವಿಶಂಕರ್ ಗುರೂಜಿ ನೇತೃತ್ವದಲ್ಲಿ ಮಹಾಸಂಕಲ್ಪ ಮಾಡಿ, ಅಭಿಷೇಕ ನೆರವೇರಿಸಲಾಗುವುದು. ಬಳಿಕ ಸತ್ಸಂಗ, ಭಜನೆಯಂತ ಧಾಮರ್ಿಕ ಕಾರ್ಯಕ್ರಮ ನಡೆಯಲಿವೆ ಎಂದು ಕೆಲೋಜಿ ತಿಳಿಸಿದರು.

RELATED ARTICLES

LEAVE A REPLY

Please enter your comment!
Please enter your name here

Most Popular