Sunday, March 15, 2026
Flats for sale
Homeರಾಜ್ಯಬೆಂಗಳೂರು : ಬಿಸಿಲ ಬೇಗೆಗೆ ಗಗನಕ್ಕೆ ಏರಿದ ತರಕಾರಿ ಬೆಲೆ ,ಕೈಗೆಟಕದ ನಿಂಬೆಹಣ್ಣು, ಸೌತೆಕಾಯಿ.

ಬೆಂಗಳೂರು : ಬಿಸಿಲ ಬೇಗೆಗೆ ಗಗನಕ್ಕೆ ಏರಿದ ತರಕಾರಿ ಬೆಲೆ ,ಕೈಗೆಟಕದ ನಿಂಬೆಹಣ್ಣು, ಸೌತೆಕಾಯಿ.

ಬೆಂಗಳೂರು : ಲೋಕಸಭೆ ಚುನಾವಣೆಯ ಕಾವು ಮುಗಿದಿದ್ದು ಮಳೆಬಾರದೆ ರೈತರು ಕಂಗಾಲಾಗಿದ್ದು ನೀರಿನ ಬರದ ಜೊತೆಗೆ ಇನ್ನೊಂಡೆಗೆ ಬಿಸಿಲಿನ ಬೇಗೆ ಈ ಬಾರಿ ರಾಜ್ಯದ ಜನರಿಗೆ ದಿಗಿಲುಬಡಿದಂತಾಗಿದೆ. ಮನೆಯಿಂದ ಹೊರನಡೆಯದಂತಹ ಪರಿಸ್ಥಿತಿ ಉಂಟಾಗಿದ್ದು ಜೊತೆಗೆ ತರಕಾರಿ ಬೆಲೆ ಗಗನಕ್ಕೆ ಏರಿದೆ. ಬೆಂಗಳೂರಿನಲ್ಲಿ ದಿನದಿಂದ‌ ದಿನಕ್ಕೆ ಬಿಸಿಲಿನ ತಾಪಮಾನ ಏರಿಕೆಯಾಗುತ್ತಿದ್ದು, ರೈತರಿಗೆ ಸಾಕಷ್ಡು ಹೊಡೆತ ಬೀಳುತ್ತಿದ್ದು, ಇದರಿಂದಾಗಿ ತರಕಾರಿಗಳ ಬೆಲೆ ದುಬಾರಿಯಾಗುದ್ದು, ಕಳೆದ ವಾರಕ್ಕೆ ಹೋಲಿಕೆ‌ ಮಾಡಿದರೇ 10 ರೂ. ಏರಿಕೆಯಾಗಿವೆ. ಬಿಸಿಲಿನ ಪ್ರಮಾಣ ಹೆಚ್ಚಾದಂತೆ ತರಕಾರಿಗಳ ಪೂರೈಕೆ ಕಡಿಮೆಯಾಗಿದೆ. ಹೀಗಾಗಿ ಬರುವ ಅಲ್ಪ ತರಕಾರಿಗಳು ಹೆಚ್ಚಿನ ಬೆಲೆ ಏರಿಕೆ, ಮುಂದಿನ ದಿನಗಳಲ್ಲಿ ಸರಿಯಾಗಿ ಮಳೆಯಾಗದಿದ್ದರೆ ತರಕಾರಿಗಳ‌ ಬೆಲೆ‌ ಮತ್ತಷ್ಟು ಏರಿಕೆಯಾಗುವ ಸಾಧ್ಯತೆ ಇದೆ.‌

ಬೀನ್ಸ್ ಹಿಂದಿನ ಬೆಲೆ (ಕೆಜಿ)120-250 ಆಗಿದೆ ,ಗಜ್ಜರಿ ಹಿಂದಿನ ಬೆಲೆ (ಕೆಜಿ) 80-100 ರೂಪಾಯಿ ನವಿಲುಕೋಸು ಹಿಂದಿನ ಬೆಲೆ (ಕೆಜಿ) 60-80 ರೂಪಾಯಿ,ಬದನೆಕಾಯಿ ಹಿಂದಿನ ಬೆಲೆ (ಕೆಜಿ) 40-60, ದಪ್ಪ ಮೆಣಸಿನಕಾಯಿ ಹಿಂದಿನ ಬೆಲೆ (ಕೆಜಿ)60-80 ರುಪಾಯಿ. ಬಟಾಣಿ ಹಿಂದಿನ ಬೆಲೆ (ಕೆಜಿ)160-200,ರೂಪಾಯಿ,ಬೆಂಡೆಕಾಯಿ ಹಿಂದಿನ ಬೆಲೆ (ಕೆಜಿ)50-60 ರೂಪಾಯಿ,ಟೊಮಾಟೋ ಹಿಂದಿನ ಬೆಲೆ (ಕೆಜಿ) 20-30 ರೂಪಾಯಿ, ಆಲೂಗೆಡ್ಡೆ ಹಿಂದಿನ ಬೆಲೆ (ಕೆಜಿ) 30-49 ರೂಪಾಯಿ, ಹಾಗಲಕಾಯಿ ಹಿಂದಿನ ಬೆಲೆ (ಕೆಜಿ) 60-76 ರೂಪಾಯಿ, ಸೋರೆಕಾಯಿ ಹಿಂದಿನ ಬೆಲೆ (ಕೆಜಿ) 40-59 ರೂಪಾಯಿ,ಬೆಳ್ಳುಳ್ಳಿ ಹಿಂದಿನ ಬೆಲೆ (ಕೆಜಿ) 300-320 ರೂಪಾಯಿ ,ಶುಂಠಿ ಹಿಂದಿನ ಬೆಲೆ (ಕೆಜಿ)180-195 ರೂಪಾಯಿ,ಪಡವಲಕಾಯಿ ಹಿಂದಿನ ಬೆಲೆ (ಕೆಜಿ) 30- 46 ರೂಪಾಯಿ,ಹೀರೆಕಾಯಿ ಹಿಂದಿನ ಬೆಲೆ (ಕೆಜಿ)50-62 ರೂಪಾಯಿ,ಹಸಿರುಮೆಣಸಿಕಾಯಿ ಹಿಂದಿನ ಬೆಲೆ (ಕೆಜಿ)80-90 ರೂಪಾಯಿ, ಬಿಟ್ರೋಟ್ ಹಿಂದಿನ ಬೆಲೆ (ಕೆಜಿ) 40-45ರೂಪಾಯಿ,ಈರುಳ್ಳಿ ಹಿಂದಿನ ಬೆಲೆ (ಕೆಜಿ) 20-25 ಹೆಚ್ಚಳ ಆಗಿದೆ.

ಈ ಎಲ್ಲ ತಲೆನೋವಿನಿಂದ ಬಿಸಿಲಿನ ಬೇಗೆಗೆ ತಂಪುಮಾಡಲು ಹೊರಟರೆ 35 ರೂಪಾಯಿ ಇದ್ದ ಎಳನೀರು 50 ರೂಪಾಯಿ ಯಾಗಿದೆ. ನಿಂಬೆ ಜ್ಯೂಸು ಕೂಡ ದುಬಾರಿಯಾಗಿದೆ.ಈ ಬಿಸಿಲಿನಿಂದಾಗಿ ತರಕಾರಿಗಳ ಬೆಲೆ ತುಂಬ ದುಬಾರಿಯಾಗಿದೆ.‌ ಸೌತೆಕಾಯಿ ಹಾಗೂ ನಿಂಬೆ ಹಣ್ಣಿನ ಬೆಲೆಯಂತೂ ಕೇಳುವ ಹಾಗೆ ಇಲ್ಲ. ಅಷ್ಟೊಂದು ಜಾಸ್ತಿಯಾಗಿದೆ.‌ ಸೌತೆಕಾಯಿ ಇವತ್ತು ಕೆಜಿಗೆ 60 ರೂ. ಆಗಿದೆ.‌ ನಿಂಬೆಹಣ್ಣು 3 ರೂಪಾಯಿಂದ 8 ರೂ. ಏರಿಕೆಯಗಿದೆ. ಬೇಸಿಗೆ ಆರಂಭದಿಂದಲೂ ನಿಂಬೆ ಹಾಗೂ ಸೌತೆಕಾಯಿಗಳ ಬೆಲೆ‌ ಏರಿಕೆಯಾಗಿದ್ದು, ಒಂದು ಕೆಜಿ ಸೌತೆಕಾಯಿ ಬೆಲೆ ಬರೋಬ್ಬರಿ 62 ರೂಪಾಯ ಇದೆ. ಬಿಸಿಲು ಹೆಚ್ಚಿರುವ ಕಾರಣ ಸೌತೆಕಾಯಿ ಬಳ್ಳಿ ಹಬ್ಬುತ್ತಿಲ್ಲ. ಹೂ ಬಿಟ್ಟರೂ ಮೊಗ್ಗು ಬಾರದೆ ಒಣಗಿ ಹೋಗುತ್ತಿವೆ. ಇದರಿಂದ ಮಾರುಕಟ್ಟೆಗೆ ಸೌತೆಕಾಯಿ ಪೂರೈಕೆಯಾಗುತ್ತಿಲ್ಲ. ಈ ಹಿಂದೆ ಚಿಕ್ಕಬಳ್ಳಾಪುರ, ಕೋಲಾರ, ಅನೇಕಲ್, ಸರ್ಜಾಪುರ ಸೇರಿ ಬೆಂಗಳೂರು ಸುತ್ತ- ಮುತ್ತಲಿನ ಪ್ರದೇಶದಿಂದ ನಗರಕ್ಕೆ ಸೌತೆಕಾಯಿ ಬರುತ್ತಿತ್ತು. ಆದರೆ ಈಗ, ಈ ಭಾಗದಿಂದ ಬರುತ್ತಿದ್ದ ಸೌತೆಕಾಯಿ ಕಡಿಮೆಯಾಗಿದ್ದು ಬೆಲೆ ಏರಿಕೆಯಾಗಿದೆ. ‌ಆ ಕಡೆ ಕೋಳಿ ಮಾಂಸ ದುಬಾರಿಯಾಗಿದ್ದು ಈ ಕಡೆ ತರಕಾರಿ ದುಬಾರಿಯಾಗಿ ಗ್ರಾಹಕರು ಬೆಲೆ ಕೇಳಿಯೇ ಸುಸ್ತಾಗಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

Most Popular