Thursday, July 23, 2026
Homeರಾಜ್ಯಮಂಡ್ಯ : ಮಂಡ್ಯದಲ್ಲಿ ನಿಲ್ಲದ ಹೆಣ್ಣು ಭ್ರೂಣ ಹತ್ಯೆ,ಮೂವರು ಪೋಲೀಸರ ವಶಕ್ಕೆ.

ಮಂಡ್ಯ : ಮಂಡ್ಯದಲ್ಲಿ ನಿಲ್ಲದ ಹೆಣ್ಣು ಭ್ರೂಣ ಹತ್ಯೆ,ಮೂವರು ಪೋಲೀಸರ ವಶಕ್ಕೆ.

ಮಂಡ್ಯ : ಹೆಣ್ಣು ಭ್ರೂಣ ಹತ್ಯೆ ಮಾಡುತ್ತಿದ್ದಾಗಲೇ ರೆಡ್ ಹ್ಯಾಂಡ್ ಅಧಿಕಾರಿಗಳಿಗೆ ಸಿಕ್ಕಿಬಿದ್ದ ಘಟನೆ ಮಂಡ್ಯದ ಪಾಂಡವಪುರದ ಹೆಲ್ತ್ ಕ್ವಾಟ್ರಸ್ ನಲ್ಲಿ ನಡೆದಿದೆ.ಆನಂದ್ ಮತ್ತು ಅಶ್ವಿನಿ ದಂಪತಿಗಳಿಂದ ಬ್ರೂಣ ಹತ್ಯೆ ನಡೆಯುತ್ತಿದ್ದು ಅಧಿಕಾರಿಗಳು ರೆಡ್ಯಾಂಡ್ ಆಗಿ ಹಿಡಿದರು ಕಂದಮ್ಮನನ್ನು ಪ್ರಪಂಚ ನೋಡುವ ಮೊದಲೆ ಕಣ್ಣು ಕೊಂದುಹಾಕಿದ್ದರೆ.

ಪಾಂಡವಪುರದ ಸಾರ್ವಜನಿಕ ಆಸ್ಪತ್ರೆಯಲ್ಲಿ ಹೊರಗುತ್ತಿಗೆ ನೌಕರರಾಗಿರುವ ದಂಪತಿಗಳು.
ಖಚಿತ ಮಾಹಿತಿ ಮೇರೆಗೆ ತಡರಾತ್ರಿ ಹೆಲ್ತ್ ಕ್ವಾಟ್ರಸ್ಗೆ ದಾಳಿಯಿಟ್ಟ ಅಧಿಕಾರಿಗಳು ಮಂಡ್ಯ ಡಿಎಚ್‌ಒ ಮೋಹನ್ ನೇತೃತ್ವದಲ್ಲಿ ದಾಳಿನಡೆಸಿದ್ದು ದಾಳಿ ವೇಳೆ ಬ್ರೂಣ ಹತ್ಯೆಗೆ ಔಷಧಿಗಳನ್ನೂ ಪತ್ತೆಹಚ್ಚಿದ್ದಾರೆ.

ಮೈಸೂರು ಮೂಲದ ಪುಷ್ಪಲತಾಗೆ ಔಷಧಿ ನೀಡಲಾಗಿತ್ತು.ಈಗಾಗಲೇ 2 ಹೆಣ್ಣು ಮಗುವಿಗೆ ಜನ್ಮ ನೀಡಿದ್ದ ಪುಷ್ಪಲತಾ. 3ನೇ ಮಗು ಹೆಣ್ಣು ಎಂದು ತಿಳಿದು ಗರ್ಭಪಾತ ಮಾಡಿಸಿಕೊಳ್ಳಲು ಪಾಂಡವಪುರಕ್ಕೆ ಆಗಮಿಸಿದ್ದರು ನಿನ್ನೆ ತಡರಾತ್ರ ಹೆಲ್ತ್ ಕ್ವಾಟ್ರಸ್ ಮನೆಯಲ್ಲಿ ಗರ್ಭಪಾತಕ್ಕೆ ತಯಾರಿ ಮಾಡಿಕೊಳ್ಳಲಾಗಿತ್ತು. ಅಧಿಕಾರಿಗಳು ದಾಳಿ ನಡೆಸುವಷ್ಟರಲ್ಲಿ ಗರ್ಭಪಾತದ ಔಷಧಿ ಸೇವಿಸಿದ್ದ ಪುಷ್ಟಲತಾ. ವೈದ್ಯರು ಎಷ್ಟೆ ಪ್ರಯತ್ನಿಸಿದ್ರು ಮಗುವನ್ನು ಉಳಿಸಲಾಗಲ್ಲಿವೆಂದು ತಿಳಿದುಬಂದಿದೆ.

ಪಾಂಡವಪುರ ಸಾರ್ವಜನಿಕ ಆಸ್ಪತ್ರೆಯಲ್ಲಿ ಪುಷ್ಪಲತಾಗೆ ಚಿಕಿತ್ಸೆ ನೀಡುತ್ತಿದ್ದು ಆನಂದ್ ಮತ್ತು ಅಶ್ವಿನಿಯನ್ನ ಪೊಲೀಸರು ವಶಕ್ಕೆ ಪಡೆದಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

Most Popular