Saturday, March 14, 2026
Flats for sale
Homeರಾಜಕೀಯಬೆಂಗಳೂರು : ಲೈಂಗಿಕ ದೌರ್ಜನ್ಯ, ಅಪಹರಣ ಪ್ರಕರಣ : ದೇವೇಗೌಡರ ನಿವಾಸದಲ್ಲೇ ಎಚ್‌.ಡಿ.ರೇವಣ್ಣ ಬಂಧನ.

ಬೆಂಗಳೂರು : ಲೈಂಗಿಕ ದೌರ್ಜನ್ಯ, ಅಪಹರಣ ಪ್ರಕರಣ : ದೇವೇಗೌಡರ ನಿವಾಸದಲ್ಲೇ ಎಚ್‌.ಡಿ.ರೇವಣ್ಣ ಬಂಧನ.

ಬೆಂಗಳೂರು : ಮೈಸೂರಿನ ಕೆಆರ್​ ನಗರ ಠಾಣೆಯಲ್ಲಿ ದಾಖಲಾದ ಅಪಹರಣ, ದೌರ್ಜನ್ಯ ಪ್ರಕರಣಕ್ಕೆ ಸಂಬಂಧಪಟ್ಟಂತೆ ಬೆಂಗಳೂರಿನ ಪದ್ಮನಾಭನಗರದಲ್ಲಿರುವ ಮಾಜಿ ಪ್ರಧಾನಿ ಹೆಚ್​ಡಿ ದೇವೇಗೌಡರ ನಿವಾಸದಿಂದ ರೇವಣ್ಣರನ್ನು ಎಸ್ಐಟಿ ವಶಕ್ಕೆ ಪಡೆದಿದೆ.

ಅಶ್ಲೀಲ ವಿಡಿಯೋ ಹಾಗೂ ಲೈಂಗಿಕ ದೌರ್ಜನ್ಯ ಪ್ರಕರಣಕ್ಕೆ ಸಂಬಂಧಿಸಿ ಜೆಡಿಎಸ್ ಶಾಸಕ ಹೆಚ್​ಡಿ ರೇವಣ್ಣರನ್ನು ವಿಶೇಷ ತನಿಖಾ ದಳದ ಅಧಿಕಾರಿಗಳು ಶನಿವಾರ ಸಂಜೆ ವಶಕ್ಕೆ ಪಡೆದು ಬಂಧಿಸಿ ವಶಕ್ಕೆ ಪಡೆದು ಅಧಿಕಾರಿಗಳು ನೇರವಾಗಿ ಎಸ್​ಐಟಿ ಕಚೇರಿಗೆ ಕರೆದುಕೊಂಡು ಹೋಗಿದ್ದಾರೆ.

ಮಾಜಿ ಸಚಿವ ಹೆಚ್​.ಡಿ ರೇವಣ್ಣ ಅವರ ಜಾಮೀನು ಅರ್ಜಿಯನ್ನು ಕೋರ್ಟ್​ ವಜಾ ಮಾಡಿದ ಬೆನ್ನಲ್ಲೇ ಎಸ್​​ಐಟಿ ಅಧಿಕಾರಿಗಳು ಮಾಜಿ ಪ್ರಧಾನಿ ದೇವೇಗೌಡರ ನಿವಾಸಕ್ಕೆ ತೆರಳಿದ್ದರು. ಹೆಚ್​.ಡಿ ರೇವಣ್ಣ ದೇವೇಗೌಡರ ನಿವಾಸದಲ್ಲಿ ಇರಬಹುದು ಎಂದು ಬೆಂಗಳೂರಿನ ಪದ್ಮನಾಭನಗರದಲ್ಲಿ ಇರುವ ಮನೆಗೆ 10 ಜನ ಅಧಿಕಾರಿಗಳು ಭೇಟಿ ನೀಡಿದ್ದರು. ಕೆಲ ಸಮಯದ ಬಳಿಕ ಅಧಿಕಾರಿಗಳು ರೇವಣ್ಣರನ್ನು ಅರೆಸ್ಟ್​ ಮಾಡಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

Most Popular