Friday, March 13, 2026
Flats for sale
Homeಜಿಲ್ಲೆಕಡಬ : ತಾಳಿ ಕಟ್ಟುವ ವೇಳೆ ಮುರಿದು ಬಿದ್ದ ಮದುವೆ,ಪೊಲೀಸ್ ಠಾಣೆಯ ಮೆಟ್ಟಿಲೇರಿದ ವಧು-ವರ.

ಕಡಬ : ತಾಳಿ ಕಟ್ಟುವ ವೇಳೆ ಮುರಿದು ಬಿದ್ದ ಮದುವೆ,ಪೊಲೀಸ್ ಠಾಣೆಯ ಮೆಟ್ಟಿಲೇರಿದ ವಧು-ವರ.

ಕಡಬ : ಎಪ್ರಿಲ್ 26, ಶುಕ್ರವಾರದಂದು ವರನಿಗೆ ಮಂಗಳಸೂತ್ರ ಕಟ್ಟಲು ಮುಂದಾದಾಗಲೇ ವಧು ಮದುವೆಗೆ ನಿರಾಕರಿಸಿದ ಘಟನೆ ಕಡಬದ ಕೋಣಾಲು ಗ್ರಾಮದಲ್ಲಿ ವರದಿಯಾಗಿದೆ.

ಕೊಣಾಲುವಿನ ಉಮೇಶ್ ಅವರ ವಿವಾಹವು ಬಂಟ್ವಾಳದ ಸರಸ್ವತಿ ಅವರೊಂದಿಗೆ ಅ.26ರಂದು ಬೆಳಗ್ಗೆ 11.35ಕ್ಕೆ ಕಾಂಚನ ಪೆರ್ಲದ ಶ್ರೀ ಷಣ್ಮುಖ ದೇವಸ್ಥಾನದಲ್ಲಿ ನಡೆಯಬೇಕಿತ್ತು. ಎರಡೂ ಕಡೆಯವರು ಮದುವೆ ಮಂಟಪಕ್ಕೆ ಆಗಮಿಸಿದ್ದು, ಈ ಘಟನೆ ಎಲ್ಲರನ್ನೂ ಬೆಚ್ಚಿ ಬೀಳಿಸುವಂತಿತ್ತು. ವಧು ಉಮೇಶ್ ನನ್ನು ಮದುವೆಯಾಗಲು ನಿರಾಕರಿಸಿದ್ದು ಎಲ್ಲ ತಯಾರಿಯಲ್ಲಿರುವ ಸಂದರ್ಭದಲ್ಲಿ ಮದುವೆ ಮುರಿದುಬಿದ್ದದ್ದು ಹೆತ್ತವರಿಗೆ ದಿಗಿಲುಬಡಿದಂತಾಗಿದೆ.

ನಂತರ, ಎರಡೂ ಕಡೆಯವರು ಉಪ್ಪಿನಂಗಡಿ ಠಾಣೆಗೆ ಹೋಗಿ , ಅಲ್ಲಿ ಸರಸ್ವತಿ ಉಮೇಶ್ ಅವರನ್ನು ಮದುವೆಯಾಗಲು ಒಪ್ಪಿದ್ದು,ಆದರೆ ಉಮೇಶ್ ಆಕೆಯನ್ನು ಮದುವೆಯಾಗಲು ನಿರಾಕರಿಸಿದ್ದಾರೆ. ಎರಡೂ ಕಡೆಯವರು ಠಾಣೆಯಲ್ಲಿ ಮುಚ್ಚಳಿಕೆ ಬರೆಸಿ ಠಾಣೆಯಿಂದ ಹೊರನಡೆದಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

Most Popular