ಬೆಳಗಾವಿ : ಜಿಲ್ಲೆ ಅಥಣಿ ತಾಲೂಕಿನ ಮಲಾಬಾದ ಗ್ರಾಮದಲ್ಲಿ ಮೇಕೆಗಳಿಗೆ ನೀರು ಕುಡಿಸಲು ಕೃಷಿ ಹೊಂಡಕ್ಕೆ ಹೋದಾಗ ಕಾಲು ಜಾರಿ ಬಿದ್ದು ನೀರಲ್ಲಿ ಮುಳಗಿ ಎಂಟು ವರ್ಷದ ಬಾಲಕಿ ಪ್ರಾಣ ಕಳೆದುಕೊಂಡ ಹೃದಯ ವಿದ್ರಾವಕ ಘಟನೆ ಜರುಗಿದೆ.
ಮೇಕೆ ಕಾಯಲು ಹೋಗಿದ್ದ ಮಲಾಬಾದ ಗ್ರಾಮದ ಅನ್ವಿತಾ ಸತ್ಯಪ್ಪ ಖೋತ್ ಕಾಲು ಜಾರಿ ಹೊಂಡಕ್ಕೆ ಬಿದ್ದ ಸಹೋದರಿಯನ್ನು ರಕ್ಷಿಸಲು ಹೋದ ಸಹೋದರ ಅಣ್ಣಪ್ಪ ವಿಠ್ಠಲ್ ಖೋತ್ ಆತನು ಕೂಡ ನೆಲೆ ಕಾಣದೆ ನೀರಲ್ಲೇ ಮುಳುಗಿದ್ದಾನೆ. ಸ್ಥಳೀಯರ ಸಮಯ ಪ್ರಜ್ಞೆಯಿಂದ ಕೂಡಲೇ ಇಬ್ಬರನ್ನು ಮೇಲೆಕ್ಕೆ ಎತ್ತಲಾಗಿದ್ದು ಬಾಲಕಿ ಅನ್ವಿತಾ ಖೋತ್ ಅವಳ ಪ್ರಾಣ ಪಕ್ಷಿ ಹಾರಿ ಹೋಗಿದೆ.
ಇನ್ನೋರ್ವ ಅಣ್ಣಪ್ಪ ವಿಠ್ಠಲ್ ಖೋತ್ ಸಾವು ಬದುಕಿನ ಮಧ್ಯೆ ಹೋರಾಡುತಿದ್ದು ಕೂಡಲೇ ಅಥಣಿ ಆಸ್ಪತ್ರೆಗೆ ಸಾಗಿಸಿಲಾಗಿ ಚೇತರಿಸಿಕೊಂಡ ಬಗ್ಗೆ ಮಾಹಿತಿ ಲಭ್ಯವಾಗಿದೆ ಈ ಸಂಬಂಧ ಅಥಣಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


