Thursday, July 23, 2026
Homeಜಿಲ್ಲೆಮೂಡುಬಿದಿರೆ : ಮೆದುಳು ಜ್ವರದಿಂದ ಶಿರ್ತಾಡಿಯ 10ನೇ ತರಗತಿ ವಿದ್ಯಾರ್ಥಿನಿ ಸಾವು .

ಮೂಡುಬಿದಿರೆ : ಮೆದುಳು ಜ್ವರದಿಂದ ಶಿರ್ತಾಡಿಯ 10ನೇ ತರಗತಿ ವಿದ್ಯಾರ್ಥಿನಿ ಸಾವು .

ಮೂಡುಬಿದಿರೆ : ಶಿರ್ತಾಡಿಯ ಮೌಂಟ್ ಕಾರ್ಮೆಲ್ ಶಾಲೆಯ ವಿದ್ಯಾರ್ಥಿನಿಯೊಬ್ಬರು ಮೆದುಳು ಜ್ವರದಿಂದ ಬಳಲಿ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಭಾನುವಾರ ಮೃತಪಟ್ಟಿದ್ದಾರೆ.

ಮೃತರನ್ನು 15 ವರ್ಷದ ಸ್ವಸ್ತಿ ಶೆಟ್ಟಿ ಎಂದು ಗುರುತಿಸಲಾಗಿದ್ದು, ಮೌಂಟ್ ಕಾರ್ಮೆಲ್ ಶಾಲೆಯಲ್ಲಿ 10ನೇ ತರಗತಿ ಓದುತ್ತಿದ್ದಳು.ಸ್ವಸ್ತಿ ಥ್ರೋಬಾಲ್ ಮತ್ತು ನೃತ್ಯದಲ್ಲಿ ತನ್ನ ಪ್ರತಿಭೆಗೆ ಹೆಸರುವಾಸಿಯಾಗಿದ್ದರು.

ಆಕೆಯ ತಂದೆ ಸತೀಶ್ ಶೆಟ್ಟಿ ಗೋವಾದಲ್ಲಿ ಕೆಲಸ ಮಾಡುತ್ತಿದ್ದರೆ, ತಾಯಿ ಸರಿತಾ ಶೆಟ್ಟಿ ಶಿರ್ತಾಡಿಯ ನವಮೈತ್ರಿ ವಿವಿಧೋದ್ದೇಶ ಸಹಕಾರಿ ಸಂಘದಲ್ಲಿ ಉದ್ಯೋಗಿಯಾಗಿದ್ದಾರೆ. ಮೂಲತಃ ವಾಲ್ಟಾಡಿಯವರಾದ ಈ ಕುಟುಂಬ ಪ್ರಸ್ತುತ ಮೂಡುಬಿದಿರೆಯಲ್ಲಿ ನೆಲೆಸಿದೆ.

RELATED ARTICLES

LEAVE A REPLY

Please enter your comment!
Please enter your name here

Most Popular