ಕೊಡಗು : ಈ ಬಾರಿ 6 ಲಕ್ಷದ 81 ಸಾವಿರದ 79 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದರು. ಇದರಲ್ಲಿ 5 ಲಕ್ಷದ 52 ಸಾವಿರದ 690 ವಿದ್ಯಾರ್ಥಿಗಳು ಪಾಸ್ ಆಗಿದ್ದಾರೆ. 2023-24ನೇ ಸಾಲಿನ ದ್ವಿತೀಯ ಪಿಯುಸಿ ಫಲಿತಾಂಶ ಇಂದು ಹೊರಬಿದ್ದಿದೆ. ಕೊಡಗಿನಲ್ಲಿ ಈ ಬಾರಿ ತಾಯಿ – ಮಗಳು ಗಮನ ಸೆಳೆದಿದ್ದಾರೆ. ಜಿಲ್ಲೆಯ ಚೆಟ್ಟಳ್ಳಿಯ ತಾಯಿ-ಮಗಳು ಪರೀಕ್ಷೆ ಬರೆದು ಪಾಸ್ ಆಗಿದ್ದಾರೆ.
ಕೊಡಗು ಜಿಲ್ಲೆ ಚೆಟ್ಟಳ್ಳಿಯ ತಾಯಿ ಬೇಬಿರಾಣಿ ಹಾಗೂ ಮಗಳು ರಿನಿಶಾ ಉತ್ತೀರ್ಣರಾದವರು.ರಿನಿಶಾ ಸೈನ್ಸ್ ವಿಭಾಗದಲ್ಲಿ ಪರೀಕ್ಷೆ ಬರೆದಿದ್ದು, 600ಕ್ಕೆ 570 ಅಂಕ ಪಡೆದು ಪಾಸ್ ಆಗಿದ್ದಾಳೆ. ತಾಯಿ ಬೇಬಿರಾಣಿ ಕಲಾ ವಿಭಾಗವನ್ನು ಪಡೆದುಕೊಂಡಿದ್ದು, 600ಕ್ಕೆ 388 ಅಂಕ ಪಡೆದು ಪಾಸ್ ಆಗಿದ್ದಾರೆ. ತಾಯಿ – ಮಗಳು ಇಬ್ಬರೂ ಬೇರೆ ಬೇರೆ ಕಾಲೇಜು ಸೇರಿದ್ದರು.
25 ವರ್ಷಗಳ ಹಿಂದೆ ಹತ್ತನೇ ತರಗತಿಯನ್ನು ಓದಿದ್ದೆ. ಬಳಿಕ ನನಗೆ ಓದಿನ ಬಗ್ಗೆ ಗಮನ ಕೊಡಲು ಆಗಿಲ್ಲ. ಮದುವೆ, ಮನೆ, ಸಂಸಾರ ಹೀಗೆ ಕುಟುಂಬದ ಜವಾಬ್ದಾರಿಯಲ್ಲಿ ಇದ್ದೆ. ಆದರೆ, ನನ್ನ ಮಗಳ ಒತ್ತಾಸೆ ಮೇರೆಗೆ ಓದಿ ಪರೀಕ್ಷೆಯನ್ನು ಬರೆದೆ. ತಾಯಿ ಬೇಬಿರಾಣಿ 600ಕ್ಕೆ 388 ಅಂಕ ಪಡೆದು ಫಸ್ಟ್ ಕ್ಲಾಸ್‌ನಲ್ಲಿ ಪಾಸ್ ಆಗಿದ್ದಾರೆ. ಬೇಬಿರಾಣಿ ಅವರು ಕನ್ನಡದಲ್ಲಿ 93, ಇಂಗ್ಲೀಷ್ 58, ಇತಿಹಾಸ 73, ಅರ್ಥಶಾಸ್ತ್ರ 35, ಸಮಾಜಶಾಸ್ತ್ರ 72, ರಾಜಕೀಯ ಶಾಸ್ತ್ರದಲ್ಲಿ 57 ಅಂಕ ಗಳಿಸಿದ್ದಾರೆ. ಈಗ ಪಾಸ್ ಆಗಿದ್ದು ನನಗೆ ನಿಜಕ್ಕೂ ಸಂತಸ ತಂದಿದೆ. ಅಲ್ಲದೆ, ಇದಕ್ಕೆ ನನ್ನ ಮನೆಯವರ ಪ್ರೋತ್ಸಾಹವೂ ಇದೆ” ಎಂದು ಬೇಬಿರಾಣಿ ಹೇಳಿಕೊಂಡಿದ್ದಾರೆ.


