Thursday, July 23, 2026
Homeಕ್ರೈಂಚಿಕ್ಕೋಡಿ : ನಡುರಸ್ತೆಯಲ್ಲೇ ಕಾಂಗ್ರೆಸ್​​ ಶಾಸಕ ಲಕ್ಷ್ಮಣ್​​ ಸವದಿ ಆಪ್ತನ ಬರ್ಬರ ಹತ್ಯೆ.

ಚಿಕ್ಕೋಡಿ : ನಡುರಸ್ತೆಯಲ್ಲೇ ಕಾಂಗ್ರೆಸ್​​ ಶಾಸಕ ಲಕ್ಷ್ಮಣ್​​ ಸವದಿ ಆಪ್ತನ ಬರ್ಬರ ಹತ್ಯೆ.

ಚಿಕ್ಕೋಡಿ : ಚಿಕ್ಕೋಡಿಯಲ್ಲಿ ಮಾತ್ರ ಲೋಕಸಭೆ ಚುನಾವಣೆಯ ಪೈಪೋಟಿಯು ರಾಜಕೀಯ ಹಿಂಸಾಚಾರಕ್ಕೆ ತಿರುಗಿದೆ. ಇದಕ್ಕೆ ನಿದರ್ಶನ ಎಂಬಂತೆ, ಬೆಳಗಾವಿ ಜಿಲ್ಲೆಯಲ್ಲಿ ಕಾಂಗ್ರೆಸ್‌ ಮುಖಂಡರೊಬ್ಬರನ್ನು ನಡುರಸ್ತೆಯಲ್ಲಿಯೇ ಭೀಕರವಾಗಿ ಹತ್ಯೆ ಮಾಡಲಾಗಿದೆ. ಶಾಸಕ ಲಕ್ಷ್ಮಣ ಸವದಿ ಆಪ್ತ, ಸ್ಥಳೀಯ ಕಾಂಗ್ರೆಸ್‌ ಮುಖಂಡ ಅಣ್ಣಪ್ಪ ಬಸಣ್ಣ ನಿಂಬಾಳ (58) ಹತ್ಯೆಗೀಡಾಗಿದ್ದಾರೆ.

ಅಥಣಿ ತಾಲೂಕಿನ ಖೀಳೆಗಾಂವ್‌ನಲ್ಲಿ ಅಣ್ಣಪ್ಪ ಬಸಣ್ಣ ನಿಂಬಾಳ ಅವರ ಮೇಲೆ ಆರು ದುಷ್ಕರ್ಮಿಗಳು ಮಾರಕಾಸ್ತ್ರಗಳಿಂದ ದಾಳಿ ನಡೆಸಿದ್ದು ತೀವ್ರವಾಗಿ ಹಲ್ಲೆಯಾಗಿದ್ದರಿಂದ ಸವದಿ ಆಪ್ತ ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾರೆ. ಮೃತ ಅಣ್ಣಪ್ಪ ಬಸಪ್ಪ ಖೀಳೆಗಾಂವ ಗ್ರಾಮದ ಕೃಷಿ ಪತ್ತಿನ ಸಂಘ ಸಹಕಾರಿ ಅಧ್ಯಕ್ಷರಾಗಿದ್ದು ಈ ಕೊಲೆಗೆ ನಿಖರ ಕಾರಣ ತಿಳಿದು ಬಂದಿಲ್ಲ.ರಾಜಕೀಯ ದ್ವೇಷದಿಂದಾಗಿ ಇವರನ್ನು ಹತ್ಯೆ ಮಾಡಲಾಗಿದೆ ಎಂದು ಗ್ರಾಮದ ಮೂಲಗಳು ತಿಳಿಸಿವೆ.ಈ ವಿಷಯ ತಿಳಿದ ಕೂಡಲೇ ಘಟನಾ ಸ್ಥಳಕ್ಕೆ ಅಥಣಿ ಪೊಲೀಸರು ಭೇಟಿ ಪರಿಶೀಲನೆ ನಡೆಸುತ್ತಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

Most Popular