Friday, March 6, 2026
Flats for sale
Homeರಾಜ್ಯಹಾವೇರಿ : ರಸ್ತೆ ಬದಿ ನಿಂತಿದ್ದ ವಾಹನಕ್ಕೆ ಜೀಪ್ ಡಿಕ್ಕಿ ಮೂರು ಜನ ಸಾವು,ನಾಲ್ವರಿಗೆ ಗಂಭೀರ...

ಹಾವೇರಿ : ರಸ್ತೆ ಬದಿ ನಿಂತಿದ್ದ ವಾಹನಕ್ಕೆ ಜೀಪ್ ಡಿಕ್ಕಿ ಮೂರು ಜನ ಸಾವು,ನಾಲ್ವರಿಗೆ ಗಂಭೀರ ಗಾಯ.

ಹಾವೇರಿ ; ಅಪಘಾತವೊದರಲ್ಲಿ ಮೂರು ಜನ ಸಾವನ್ನಪ್ಪಿದ್ದು ನಾಲ್ಕು ಜನ ಗಂಭೀರ ಗಾಯಗೊಂಡು ಜೊತೆಗೆ ಒಟ್ಟು 45 ಕುರಿಗಳಲ್ಲಿ 13 ಕುರಿಗಳು ಸಾವನ್ನಪ್ಪಿ 7 ಕುರಿಗಳು ಗಂಭೀರ ಗಾಯಗೊಂಡ ಘಟನೆ ಸವಣೂರ ತಾಲ್ಲೂಕಿನ ತೆವರಮೆಳ್ಳಹಳ್ಳಿ ರಾಷ್ಟೀಯ ಹೆದ್ದಾರಿ 4 ರಲ್ಲಿ ನಡೆದಿದೆ.ಮೃತ ವ್ಯಕ್ತಿಗಳು ಎರಡು ಜನ ಕುರಿ ವ್ಯಾಪಾರಿಗಳು ಓರ್ವ ಚಾಲಕ ಸಾವನ್ನಪ್ಪಿದ್ದಾರೆ ಎನ್ನಲಾಗಿದೆ.

ಕುರಿಗಳ ತುಂಬಿದ ಬುಲೆರೋ ಗಾಡಿ ನಂ: ಕೆ ಎ 17-ಸಿ 5991 ಶಿಗ್ಗಾವಿ ಕಡೆಯಿಂದ ಹಾವೇರಿ ಕಡೆಗೆ ವೇಗವಾಗಿ ಚಲಿಸುತ್ತಿರುವಾಗ ಮುಂದಿನ ಯಾವುದೋ ಗಾಡಿಗೆ ಅಪಘಾತ ಪಡಿಸಿ ಪಲ್ಟಿಯಾಗಿ ಅಪಘಾತವಾಗಿದೆ.

ಮೃತ 3 ಜನರು ರಾಣೇಬೆನ್ನೂರು ತಾಲೂಕಿನ ಕಾಕೋಳ ಗ್ರಾಮ ದವರು ಆಗಿದ್ದಾರೆ ಒಟ್ಟು 07ಜನರಿದ್ದು ಇನ್ನುಳಿದ 04 ಜನರಿಗೆ ಕೈ ಕಾಲುಗಳಿಗೆ ಗಾಯ ಪೆಟ್ಟು ಹೊಂದಿದ್ದು ಹೆಚ್ಚಿನ ಚಿಕಿತ್ಸೆಗಾಗಿ ಹಾವೇರಿ ಜಿಲ್ಲೆಯ ಸರಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ.

ಸ್ಥಳಕ್ಕೆ ಸವಣೂರು ಪೊಲೀಸ್ ಠಾಣೆ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

Most Popular