Friday, March 6, 2026
Flats for sale
Homeರಾಜಕೀಯಪುತ್ತೂರು ; ಪಕ್ಷಕ್ಕಿಂತ ವ್ಯಕ್ತಿ ದೊಡ್ಡವರಲ್ಲ, ಪಕ್ಷವೇ ದೊಡ್ಡದು : ಪ್ರತಾಪ್ ಸಿಂಹ.

ಪುತ್ತೂರು ; ಪಕ್ಷಕ್ಕಿಂತ ವ್ಯಕ್ತಿ ದೊಡ್ಡವರಲ್ಲ, ಪಕ್ಷವೇ ದೊಡ್ಡದು : ಪ್ರತಾಪ್ ಸಿಂಹ.

ಪುತ್ತೂರು ; ಒಬ್ಬ ವ್ಯಕ್ತಿಯನ್ನು ಸಮಾಜದಲ್ಲಿ ಗುರುತಿಸಬೇಕಾದರೆ ಸಂಘಟನೆ, ಪಕ್ಷ ಮುಖ್ಯ. ನಾವು ಏನಾದರೂ ಇವತ್ತು ಸಮಾಜದಲ್ಲಿ ಜನ ನಮ್ಮನ್ನು ಪತ್ತೆ ಹಚ್ಚುತ್ತಾರೆಂದರೆ ಅದಕ್ಕೆ ಮುಖ್ಯ ಕಾರಣ ಪಕ್ಷ ಹಾಗೂ ಸಂಘಟನೆ ಎಂದು ಮೈಸೂರಿನ ಹಾಲಿ ಸಂಸದ ಪ್ರತಾಪ್ ಸಿಂಹ ಇಂದು ಪುತ್ತೂರಿನಲ್ಲಿ ನಡೆದ ಕಾರ್ಯಕ್ರಮ ದಲ್ಲಿ ಹೇಳಿದ್ದಾರೆ.

ವಿಧಾನಸಭಾ ಚುನಾವಣೆ ವೇಳೆ ಬಿಜೆಪಿ ಟಿಕೆಟ್​ ನೀಡುವಂತೆ ಹಿಂದೂ ಮುಖಂಡ ಅರುಣ್​ ಕುಮಾರ್​ ಪುತ್ತಿಲ ಒತ್ತಾಯಿಸಿದ್ದರು. ಆದರೆ ಬಿಜೆಪಿ ಮಾತ್ರ ಟಿಕೆಟ್​ ನೀಡಿರಲಿಲ್ಲ. ಇದರಿಂದ ಕೋಪಗೊಂಡು ಪುತ್ತಿಲ ಪರಿವಾರ ಎಂಬ ಸಂಘಟನೆ ಕಟ್ಟಿಕೊಂಡು ಪಕ್ಷೇತರವಾಗಿ ಚುನಾವಣೆಯಲ್ಲಿ ಸ್ಪರ್ಧಿಸಿ ಸೋಲು ಕಂಡರು. ಹಾಗಾಗಿ ಬಿಜೆಪಿ ಮತ್ತು ಪುತ್ತಿಲ ಮಧ್ಯೆ ಆಗಾಗ ಶೀತಲ ಸಮರ ನಡೆಯುತ್ತಿತ್ತು. ಇವರ ಜಗಳದಲ್ಲಿ ಕಾಂಗ್ರೆಸ್​ ಅಭ್ಯರ್ಥಿ ಜಯಗಳಿಸಿದ್ದರು. ಲೋಕಸಭೆ ಚುನಾವಣೆ ಹಿನ್ನೆಲೆ ಪುತ್ತಿಲ ಪರಿವಾರವನ್ನು ಸಂಧಾನದ ಮೂಲಕ ಮತ್ತೆ ಬಿಜೆಪಿಗೆ ಕರೆತರಲಾಗಿದೆ. ಇದೀಗ ಸಂಸದ ಪ್ರತಾಪ್ ಸಿಂಹ ಪುತ್ತಿಲಗೆ ಪಕ್ಷ ನಿಷ್ಠೆಯ ಬಗ್ಗೆ ಹೇಳಿದ್ದಾರೆ. ಹಿಙದುಗಳಿಗೆ ಇರುವ ಪಕ್ಷ ಅಂದರೆ ಬಿಜೆಪಿ ಮಾತ್ರ ಎಂದು ಪಕ್ಕ ನಿಷ್ಠೆ ತೋರಿಸಿದ್ದಾರೆ.

ಪುತ್ತಿಲ ಪರ ಮತನಾಡಿದ ಪ್ರತಾಪ್ ಸಿಂಹ ನೀವು ಪುತ್ತೂರಲ್ಲಿ ಮಾಡಿದ ಶಕ್ತಿ ಪ್ರದರ್ಶನವನ್ನು ಮೈಸೂರಲ್ಲಿ ಮಾಡುವಷ್ಟು ಶಕ್ತಿ ನನಗೂ ಇದೆ. ಆದರೆ ನಾವು ನಮ್ಮ ಶಕ್ತಿ ಪ್ರದರ್ಶನ ಮಾಡಲಿಲ್ಲ. ಏಕೆಂದರೆ ನಮಗೆ ಪಕ್ಷ ನಿಷ್ಠೆ ಮುಖ್ಯ ಎಂದು ಹೇಳಿದ್ದಾರೆ.

ನಾವು ಯಾರೂ ಪಕ್ಷಕ್ಕಿಂತ ದೊಡ್ಡವರಲ್ಲ, ಪಕ್ಷವೇ ದೊಡ್ಡದು. ನಾವು ವೈಯುಕ್ತಿಕವಾಗಿ ನಮ್ಮ ಶಕ್ತಿ ಪ್ರದರ್ಶನ ಮಾಡಬೇಕು ಅಂತ ಹೊರಟಿದ್ದರೆ ಮೈಸೂರಲ್ಲಿ ನಾನೂ ಶಕ್ತಿ ಪ್ರದರ್ಶನ ಮಾಡುತ್ತಿದೆ ಎಂದು ಹೇಳಿದ್ದು ಅರುಣ್ ಕುಮಾರ್ ಪುತ್ತಿರರವರ ಸಂಘ ನಿಷ್ಠೆಯ ಬಗ್ಗೆ ಹೋಗಲಿದ್ದಾರೆ.ಸಂಘಟನೆಯೇ ಸೆಟೆದು ನಿಂತು ಒಬ್ಬ ವ್ಯಕ್ತಿಯ ಪರವಾಗಿ ನಿಂತ ಕ್ಷೇತ್ರ ಇದರೆ ಅದು ಪುತ್ತೂರು. ಅಷ್ಟು ಪ್ರೀತಿ ವಿಶ್ವಾಸವನ್ನ ನೀವು ಕಾರ್ಯಕರ್ತರ ಜೊತೆ ಬೆಳೆಸಿಕೊಂಡಿದ್ದೀರಿ ಎಂದಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

Most Popular