ಮಂಗಳೂರು : ನಳೀನ್ ಕುಮಾರ್ ಕಟೀಲ್ ಸೇರಿ ಇಷ್ಟರವರೆಗೆ ಸಂಸದರಾದ ಎಲ್ಲ ನಾಯಕರ ಅಸ್ತಿ ವಿವರಗಳನ್ನು ಒಮ್ಮೆ ನೋಡಿದರೆ ಸಾಕು . ಓಟು ಒತ್ತಿದ ಜನಸಾಮಾನ್ಯರಿಗೆ ದಿಗಿಲುಬಡಿದಂತೆ ಆಗುತ್ತದೆ. ಅಂಥಹದರಲ್ಲಿ ನಳಿನ್ ಕುಮಾರ್ ಕೂಡ 15 ವರ್ಷದ ಮೊದಲು ಎಷ್ಟು ಅಸ್ತಿ ಇತ್ತು ಈಗ ಎಷ್ಟಾಗಿದೆ ಎಂಬುದು ಅವರ ಸಹಚಾರಗಳಿಗೆ ತಿಳಿದ ವಿಷಯ.ಆದರೆ ಒಂದಂತೂ ನಿಜ ಈ 5 % ಇದ್ದ ಆಸ್ತಿ 5 ವರ್ಷದಲ್ಲಿ ಎಲ್ಲಾ ಸಂಸದರ ಆಸ್ತಿ 150 % ಲೆಕ್ಕಕ್ಕೆ ಸಿಕ್ಕಿದ್ದು. ಲೆಕ್ಕಕೆ ಸಿಗದ್ದು ಬೇಜಾನು ಇದೆ ಇದೆಲ್ಲ ಎಲ್ಲಾ ಜನಸಾಮನ್ಯರಿಗೆ ತಿಳಿದ ವಿಚಾರ.ಆದರೆ ಬ್ರಿಜೇಶ್ ಚೌಟಾ ಚೌಟರವರ ಆಸ್ತಿ ವಿವರ ಎಷ್ಟಿದೆ ಎಂದು ನೆನಪಿಡಿ ಮುಂದೆ 2029 ರಲ್ಲಿ ಬರುವ ಚುನಾವಣೆಯ ಸಂದರ್ಭದಲ್ಲಿ ಈ ವರದಿ ಬೇಕಾಗುತ್ತದೆ ಜನಸಾಮನ್ಯರಿಗೆ.
ನಳೀನ್ ಕುಮಾರ್ ಕಟೀಲ್ ನ ಯುಗಾಂತ್ಯವಾಗಿದೆ ಇದೀಗ ಬಿಜೆಪಿಯಿಂದ ಕ್ಯಾಪ್ಟನ್ ಬ್ರಿಜೇಶ್ ಚೌಟಾ ಅವರಿಗೆ ಈ ಬಾರಿ ಟಿಕೆಟ್ ನೀಡಲಾಗಿದೆ. ಆ ಮೂಲಕ ನಳಿನ್ ಕುಮಾರ್ ಕಟೀಲ್ಗೆ ಟಿಕೆಟ್ ಕೈತಪ್ಪಿ ಹೋಗಿದೆ. ಇದೀಗ ದಕ್ಷಿಣ ಕನ್ನಡ ಲೋಕಸಭಾ ಬಿಜೆಪಿ ಅಭ್ಯರ್ಥಿ ಬ್ರಿಜೇಶ್ ಚೌಟ ಸಾಂಕೇತಿಕವಾಗಿ ಇಂದು ನಾಮಪತ್ರ ಸಲ್ಲಿಕೆ ಮಾಡಿದ್ದಾರೆ. ಏಪ್ರಿಲ್ 4ರಂದು ಅಧಿಕೃತವಾಗಿ ನಾಮಪತ್ರ ಸಲ್ಲಿಸಲಿದ್ದಾರೆ. ಇಂದು ಸಲ್ಲಿಸಿರುವ ನಾಮಪತ್ರ ಅಫಿಡವಿಟ್‌ನಲ್ಲಿ ಲಕ್ಷಾಧಿಪತಿ ಎಂದು ಘೋಷಿಸಿಕೊಂಡಿದ್ದಾರೆ.
ಬ್ರಿಜೇಶ್ ಚೌಟ ಆಸ್ತಿ ವಿವರ ಇಲ್ಲಿದೆ ನೋಡಿ : ಸ್ಥಿರ ಮತ್ತು ಚರಾಸ್ತಿ ಒಟ್ಟು ಮೊತ್ತ 70,81,365 ಲಕ್ಷ ರೂ.ಸ್ಥಿರ ಆಸ್ತಿಯ ಒಟ್ಟು ಮೊತ್ತ 27,31,365 ಲಕ್ಷ ರೂ. ಚರಾಸ್ತಿಯ ಒಟ್ಟು ಮೊತ್ತ 43,50,000 ಲಕ್ಷ ರೂ. ಒಟ್ಟು 9,62,010 ರೂ. ಗಳ ಇನ್ನೋವಾ ಕಾರಿಗಾಗಿ ಸಾಲ ಮಾಡಿದ್ದಾರೆ.
ಬಿಎಸ್ಸಿ ಶಿಕ್ಷಣದ ಜೊತೆಗೆ ಐಐಎಂ ಅನ್ನು ಇಂದೋರ್ನಲ್ಲಿ ಬ್ಯುಸಿನೆಸ್ ಮ್ಯಾನೇಜ್ಮೆಂಟ್ ಡಿಫೆನ್ಸ್ ಆಫೀಸರ್ ಸರ್ಟಿಫಿಕೇಟ್ ಕೋರ್ಸ್ ಮಾಡಿದ್ದಾರೆ. ಅವಿವಾಹಿತರಾಗಿದ್ದು 42 ವರ್ಷ ಪ್ರಾಯದವರಾಗಿದ್ದಾರೆ.
ಇನ್ನು ಬಿಜೆಪಿ ಅಭ್ಯರ್ಥಿ ಬ್ರಿಜೇಶ್ ಚೌಟಾ ರವರು ಮಂಗಳೂರಿನ ಸೇಂಟ್ ಅಲೋಶಿಯಸ್ ಕಾಲೇಜಿನಲ್ಲಿ ವಿಜ್ಞಾನ ಪದವಿಯನ್ನು ಪಡೆದ ಅವರು ಇಂದೋರ್‌ನ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಮ್ಯಾನೇಜ್‌ಮೆಂಟ್‌ನಿಂದ ಆಡಳಿತ ವ್ಯವಹಾರ ನಿರ್ವಹಣೆಯಲ್ಲಿ ಸ್ನಾತಕೋತ್ತರ ಪದವಿಯನ್ನು ಪಡೆದಿದ್ದಾರೆ.


